ಎತ್ತರದ ಗಣೇಶ ಮೂರ್ತಿಗೆ ಕಡಿವಾಣ?

7
ಪರಿಸರ ಸ್ನೇಹಿ ವಿಗ್ರಹಗಳಿಗೆ ಉತ್ತೇಜನ; ಜಲ ಮಾಲಿನ್ಯ ತಡೆಯಲು ಕ್ರಮ

ಎತ್ತರದ ಗಣೇಶ ಮೂರ್ತಿಗೆ ಕಡಿವಾಣ?

Published:
Updated:

ಬೆಂಗಳೂರು: ನಗರದಲ್ಲಿ ಸಂಘ, ಸಂಸ್ಥೆಗಳು ಇಡುವ ಮಣ್ಣಿನ ಗಣೇಶ ವಿಗ್ರಹಗಳ ಎತ್ತರಕ್ಕೆ ಕಡಿವಾಣ ಹಾಕುವ ಕುರಿತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಚಿಂತನೆ ನಡೆಸಿದೆ.

ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಉತ್ತೇಜನ ನೀಡುವುದು ಹಾಗೂ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ವಿಗ್ರಹಗಳಿಗೆ ಕಡಿವಾಣ ಹಾಕುವುದು ಇದರ ಉದ್ದೇಶವಾಗಿದೆ.

‘ಹೋದ ವರ್ಷ 3ರಿಂದ 4 ಅಡಿ ಎತ್ತರದ ಗಣೇಶ ವಿಗ್ರಹಗಳನ್ನು ಕೂರಿಸಲಾಗಿತ್ತು. ಈ ಬಾರಿ ಅತಿ ಎತ್ತರದ ಮೂರ್ತಿಗಳಿಗೆ ಕಡಿವಾಣ ಹಾಕಲು ಚಿಂತಿಸಲಾಗಿದೆ. ಈ ಕುರಿತು ಸಭೆ ನಡೆಸಿ ತೀರ್ಮಾನ ಮಾಡಲಿದ್ದೇವೆ. ಈ ನಿಯಮ ಪಾಲನೆಯಾದರೆ ವಿಗ್ರಹಗಳನ್ನು ಸಾಗಿಸುವುದು ಸುಲಭವಾಗುತ್ತದೆ. ಜೊತೆಗೆ ಜಲ ಮಾಲಿನ್ಯ ಕೂಡ ಕಡಿಮೆಯಾಗಲಿದೆ’ ಎಂದು ಕೆಎಸ್‌ಪಿಸಿಬಿ ಮುಖ್ಯಸ್ಥ ಲಕ್ಷ್ಮಣ್‌ ಹೇಳಿದರು.

‘ಇದರಿಂದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲ. ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ವಿಗ್ರಹಗಳನ್ನು ತಯಾರಿಸುವವರು ಹಾಗೂ ಮಾರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

ಪರಿಸರಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸುವವರಿಗೆ ಮಂಡಳಿ ಉತ್ತೇಜನ ನೀಡಲಿದೆ. ಸರ್ಕಾರಿ ಆಸ್ಪತ್ರೆ, ದೇವಸ್ಥಾನ, ಸರ್ಕಾರಿ ಕಚೇರಿಗಳು ಹಾಗೂ ಪಾರ್ಕ್‌ಗಳ ಬಳಿ ಗಣೇಶ ಮೂರ್ತಿಗಳು ಸಿಗುವಂತೆ ಮಾಡಲು ಕ್ರಮ ತೆಗೆದುಕೊಳ್ಳಲಿದ್ದೇವೆ. ಗಾತ್ರಕ್ಕೆ ತಕ್ಕಂತೆ ₹100ರಿಂದ ₹500ರ ವರೆಗೂ ವ್ಯತ್ಯಾಸ ಇರಬಹುದು. ನಗರದಲ್ಲಿ 1 ಲಕ್ಷ ಪರಿಸರಸ್ನೇಹಿ ಗಣೇಶ ವಿಗ್ರಹಗಳನ್ನು ಬಳಸುವಂತೆ ಮಾಡುವುದು ಕೆಎಸ್‌ಪಿಸಿಬಿ ಗುರಿಯಾಗಿದೆ.

‘ಗ್ರಾಹಕರು 8 ಅಡಿಯಷ್ಟು ಎತ್ತರದ ಗಣೇಶಕ್ಕೆ ಬೇಡಿಕೆ ಇಡುತ್ತಾರೆ. ಕಥೆ ಹಾಗೂ ಪಾತ್ರವನ್ನು ಹೋಲುವಂತಹ ವಿಭಿನ್ನ ಗಣೇಶ ಮೂರ್ತಿಗಳಾದರೆ ಹೆಚ್ಚು ಎತ್ತರ ಇದ್ದೇ ಇರುತ್ತದೆ. ಈ ರೀತಿಯ ನಿಯಮಗಳು ಸಂಭ್ರಮಕ್ಕೆ ಅಡ್ಡಿಯಾಗಿವೆ’ ಎಂದು ಗಣೇಶ ಮೂರ್ತಿ ತಯಾರಕರೊಬ್ಬರು ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !