ಭಾನುವಾರ, ಆಗಸ್ಟ್ 18, 2019
23 °C
ಠಾಣೆಗೆ ದೂರು ನೀಡಿದ್ದ ಪತ್ನಿ * ಪತಿಯ ಹುಡುಕಿಕೊಟ್ಟ ಪೊಲೀಸರು

ನಾಪತ್ತೆಯಾಗಿದ್ದ ವ್ಯಕ್ತಿ ಚರ್ಚ್‌ನಲ್ಲಿ ಪತ್ತೆ

Published:
Updated:

ಬೆಂಗಳೂರು: ನಗರದಿಂದ ಅನುಮಾನಾಸ್ಪದ ರೀತಿಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ತಮಿಳುನಾಡು ಇರೋಡ್‌ ಚರ್ಚ್‌ವೊಂದರಲ್ಲಿ ಪತ್ತೆಯಾಗಿದ್ದಾರೆ.

‘ಖಾಸಗಿ ಕಂಪನಿ ಉದ್ಯೋಗಿ ಇಮ್ಯಾನ್ಯುಯಲ್ ಜೋಸೆಫ್ ಎಂಬುವರು ಇದೇ 2ರಂದು ಮನೆಯಿಂದ ಹೋದವರು ವಾಪಸ್ ಬಂದಿರಲಿಲ್ಲ. ಗಾಬರಿಗೊಂಡ ಪತ್ನಿ ಜೆಸ್ಸಿ, ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡು ಪತಿಯನ್ನು ಹುಡುಕಿಕೊಟ್ಟಿದ್ದೇವೆ’ ಎಂದು ಪೊಲೀಸರು ಹೇಳಿದರು.

‘ಕಚೇರಿ ಕೆಲಸದ ಒತ್ತಡದಿಂದ ನೊಂದು ಕೆಲಸ ಬಿಟ್ಟಿದ್ದೆ. ಮನಸ್ಸಿಗೆ ನೆಮ್ಮದಿ ಬೇಕೆಂದು ಚರ್ಚ್‌ಗೆ ಹೋಗಿದ್ದೆ. ಪತ್ನಿಗೆ ಹೇಳಿದರೆ ನೊಂದುಕೊಳ್ಳುತ್ತಾಳೆಂದು ವಿಷಯ ಮುಚ್ಚಿಟ್ಟಿದ್ದೆ ’ ಎಂಬುದಾಗಿ ಇಮ್ಯಾನ್ಯುಯಲ್ ಹೇಳಿಕೆ ನೀಡಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.

Post Comments (+)