ಹೆರಿಟೇಜ್ ಹೋಟೆಲ್‌ಗಳು

7
ಕೇರಳ ಟೂರ್‌

ಹೆರಿಟೇಜ್ ಹೋಟೆಲ್‌ಗಳು

Published:
Updated:
Prajavani

‘ಎಯ್ತ್ ಬ್ಯಾಸ್ಟಿಯನ್‌’

ಒಂದು ಕಾಲದಲ್ಲಿ ಕೊಚ್ಚಿನ್‌ ಸಂಬಾರ ಪದಾರ್ಥಗಳ ವಹಿವಾಟಿನಲ್ಲಿ ಅಗ್ರಸ್ಥಾನದಲ್ಲಿತ್ತು. ಆಗ ಪೋರ್ಚುಗೀಸರು ಈ ನಗರದ ರಕ್ಷಣೆಗಾಗಿ ಇಲ್ಲಿಯ ಕೋಟೆಯ ಸುತ್ತ ಏಳು ಬುರುಜುಗಳನ್ನು ಕಟ್ಟಿದರು. ನಂತರ, ಡಚ್ಚರು ಕೊಚ್ಚಿನ್ ನಗರದ ಚುಕ್ಕಾಣಿ ಹಿಡಿದರು. ಆಗ ಅವರು ಇನ್ನೊಂದು ಬುರುಜನ್ನು ನಿರ್ಮಿಸಿದರು. ಇದೇ ‘ಎಯ್ತ್‌ ಬ್ಯಾಸ್ಟಿಯನ್’.  ಡಚ್‌ ವಾಸ್ತುಶಿಲ್ಪ ದಿಂದ ಕೂಡಿರುವ ಇದು, ಅರಬ್ಬೀ ಸಮುದ್ರದ ಕಡೆಗೆ ಮುಖ ಮಾಡಿದೆ. ಇಲ್ಲಿಂದ ಕೊಚ್ಚಿನ್ ಬಂದರು ಮನಮೋಹಕವಾಗಿಕಾಣುತ್ತದೆ. ಇಲ್ಲಿನ ಭಿತ್ತಿಗಳಲ್ಲಿರುವ ನಿಸರ್ಗ ಸಹಜ ಚಿತ್ರಕಲೆ, ಎನಾಮಲ್ ಪೇಂಟಿಂಗ್, ನೀಲಿ ಮತ್ತು ಅಚ್ಚಬಿಳಿ ಬಣ್ಣದ ಪಿಂಗಾಣಿ ವಸ್ತುಗಳು ಚೆಲುವನ್ನು ಇಮ್ಮಡಿಗೊಳಿಸಿವೆ.

ದಿ ರಾಯಲ್ ಹೆರಿಟೇಜ್‌

ಕೊಚ್ಚಿಯಿಂದ ತಿರುವನಂತಪುರಕ್ಕೆ ಹೋದರೆ ಅಲ್ಲಿ ನಿಮ್ಮ ವಾಸ್ತವ್ಯಕ್ಕೆ ಸೂಕ್ತವಾಗುತ್ತದೆ ‌‘ದಿ ರಾಯಲ್ ಹೆರಿಟೇಜ್ ಹೋಟೆಲ್ ಮತ್ತು ಆಯುರ್ವೇದಿಕ್ ಸೆಂಟರ್’. ಹಿಂದೆ ಈ ಹೋಟೆಲನ್ನು ತಿರುವಾಂಕೂರು ರಾಜವಂಶಸ್ಥರು ಬಳಸಿಕೊಳ್ಳುತ್ತಿದ್ದರು. ಅಲ್ಲದೆ, ಸ್ಥಳೀಯ ಆಡಳಿತ ಮುಖ್ಯಸ್ಥರು ಗ್ರಾಮಸ್ಥರ ನಡುವಿನ ವ್ಯಾಜ್ಯಗಳನ್ನು ಇಲ್ಲಿ ಕೂತು ಬಗೆಹರಿಸುತ್ತಿದ್ದರು. ಕೇರಳ ಶೈಲಿಯ ವಾಸ್ತುಶಿಲ್ಪ, ರೆಡ್- ಆಕ್ಸೈಡ್‌ನಿಂದ ಕಂಗೊಳಿಸುತ್ತಿರುವ ನೆಲ, ತಂಪು ನೀಡುವ ಇಟ್ಟಿಗೆಯ ಗೋಡೆ, ಹೋಟೆಲಿನ ಒಳಭಾಗದಲ್ಲೇ ಸಿಕ್ಕುವ ತರಹೇವಾರಿ ಆಯುರ್ವೇದ ಚಿಕಿತ್ಸೆ ನಿಮ್ಮ ಜೇಬಿಗೇನೂ ಭಾರವಾಗದು!

ರಂಗಮಾಲಿಕ

ತಿರುವನಂತಪುರ ಎಂದ ಮೇಲೆ ಅಲ್ಲಿನ ವಿಖ್ಯಾತ ಅನಂತಪದ್ಮನಾಭನ ದೇಗುಲ ನಿಮಗೆ ಗೊತ್ತೇ ಇರುತ್ತದೆ. ಇದರ ಪಕ್ಕದಲ್ಲೇ ಇರುವ ಎಂಟು ರೂಮುಗಳ ಚಾರಿತ್ರಿಕ ಹೋಟೆಲೆಂದರೆ ‘ರಂಗಮಾಲಿಕಾ’. ಇದು ತಿರುವಾಂಕೂರು ರಾಜವಂಶಸ್ಥರ ಆವಾಸಸ್ಥಾನ. ಇದರ ಮಗ್ಗುಲಲ್ಲೇ ಈ ರಾಜವಂಶಸ್ಥರ ಅಮೂಲ್ಯ ವಸ್ತುಗಳನ್ನು ಒಪ್ಪವಾಗಿ ಪ್ರದರ್ಶಿಸುವ ಮ್ಯೂಸಿಯಂ ಕೂಡ ಇದೆ.

ಮಸ್ಕಟ್‌ ಹೋಟೆಲ್‌

ಕಣ್ಣಿಗೆ ಹಬ್ಬದಂತಹ ವಾತಾವರಣ ದೊರೆಯಲು ಇನ್ನೇನು ಬೇಕು ಹೇಳಿ! ಇಲ್ಲೇ ಇರುವ ಮತ್ತೊಂದು ಐಷಾರಾಮಿ ಮತ್ತು ಚಾರಿತ್ರಿಕ ತಾಣವೆಂದರೆ`ಮಸ್ಕಟ್ ಹೋಟೆಲ್’. ಮೊದಲನೇ ಮಹಾಯುದ್ಧದ ಸಮಯದಲ್ಲಿ ಬ್ರಿಟಿಷ್ ಸೇನೆಯು ತಂಗಲೆಂದು ನಿರ್ಮಿಸಿದ ತಾಣವಿದು. ಆದರೆ ಈಗ ಇದು ಆಕರ್ಷಕ ವಸತಿ ನಿಲಯವಾಗಿ ಮಾರ್ಪಟ್ಟಿದೆ. 66 ಭವ್ಯವಾದ ಕೊಠಡಿಗಳುಳ್ಳ ಈ ಹೋಟೆಲಿನ ಭಾಗದಲ್ಲಿ ಹಸಿರಿನಿಂದ ಕಂಗೊಳಿಸುತ್ತಿರುವ ಹೂದೋಟ, ಬ್ಯಾಂಕ್ವೆಟ್ ಸಭಾಂಗಣಗಳು, ಆಯುರ್ವೇದಿಕ್ ಥೆರಪಿಗಳು ಲಭ್ಯವಿವೆ. ಬ್ರಿಟಿಷ್ ವಾಸ್ತುಶಿಲ್ಪದಿಂದಲೂ ಪ್ರಭಾವಿತಗೊಂಡಿರುವ ಇದು, ಕೇರಳಪ್ರವಾಸಕ್ಕೆ ಮತ್ತಷ್ಟು ಮೆರುಗು ತುಂಬುತ್ತದೆ.

(ಮಾಹಿತಿ: ಕ್ಲಿಯರ್ ಟ್ರಿಪ್)

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !