ಹೆಸರಘಟ್ಟ ಹೋಬಳಿಗೆ ₹ 4 ಕೋಟಿ ಅನುದಾನ

7

ಹೆಸರಘಟ್ಟ ಹೋಬಳಿಗೆ ₹ 4 ಕೋಟಿ ಅನುದಾನ

Published:
Updated:

ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ದಿ ಪ್ರಾಧಿಕಾರವು ಹೆಸರಘಟ್ಟ ಹೋಬಳಿಯ ವಿವಿಧ ಗ್ರಾಮಗಳ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕಾಗಿ ₹ 4 ಕೋಟಿ ಅನುದಾನ ಬಿಡುಗಡೆ ಮಾಡಿದೆ.

ಹೆಸರಘಟ್ಟ ಗ್ರಾಮದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಒಂದು ಕೋಟಿ, ಕಾಕೋಳು ಗ್ರಾಮದಿಂದ ಬೈರಾಪುರ ಗ್ರಾಮದವರೆಗಿನ ಮುಖ್ಯ ರಸ್ತೆಗೆ ₹ 75 ಲಕ್ಷಗಳನ್ನು ಹಾಗೂ ಅರಕೆರೆ ಗ್ರಾಮ ಪಂಚಾಯಿತಿಯ ವಿವಿಧ ಗ್ರಾಮಗಳ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ₹ 2.2 ಕೋಟಿ ಅನುದಾನ ನೀಡಲಾಗಿದೆ.

ಬ್ಯಾತ, ಸೀರೆಸಂದ್ರ, ಕಾಮಾಕ್ಷಿಪುರ, ಹನಿಯೂರು, ಚಲ್ಲಹಳ್ಳಿ, ಸೊಣೇನಹಳ್ಳಿ ಗ್ರಾಮಗಳಿಗೆ ತಲಾ ₹ 25 ಲಕ್ಷಗಳಂತೆ ₹1.50 ಕೋಟಿ ಮಂಜೂರು ಮಾಡಿದೆ. ಮತ್ಕೂರು, ಸೀತಕೆಂಪನಹಳ್ಳಿ, ಗ್ರಾಮಗಳ ರಸ್ತೆ ನಿರ್ಮಾಣಕ್ಕೆ ₹ 75 ಲಕ್ಷ ನೀಡಲಾಗಿದೆ ಎಂದು ಪ್ರಾಧಿಕಾರದ ಪ್ರಕಟಣೆ ಹೇಳಿದೆ.
ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರಾದ ಎಂ.ಆರ್. ಮೇಠಿ ಅವರು, ‘ಈಗಾಗಲೇ ಟೆಂಡರ್ ಪೂರ್ಣ ಮುಗಿದಿದ್ದು ಕಾಮಗಾರಿಗಳ ಕೆಲಸಗಳು ಭರದಿಂದ ನಡೆಯುತ್ತಿದೆ. ಐದಾರು ತಿಂಗಳಿನಲ್ಲಿ ಎಲ್ಲ ಕೆಲಸಗಳು ಪೂರ್ಣಗೊಳ್ಳಲಿವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !