ಸಂಭ್ರಮದ ಹೂವಿನ ಕರಗ ಮಹೋತ್ಸವ

ಮಂಗಳವಾರ, ಏಪ್ರಿಲ್ 23, 2019
27 °C

ಸಂಭ್ರಮದ ಹೂವಿನ ಕರಗ ಮಹೋತ್ಸವ

Published:
Updated:
Prajavani

ಹೆಸರಘಟ್ಟ: ಪ್ರತಿ ಮನೆಗಳ ಮುಂದೆ ಅರಳಿದ ರಂಗೋಲಿ, ಮಾವಿನ ತೋರಣದಿಂದ ಅಲಂಕೃತಗೊಂಡ ಬೀದಿಗಳು, ಎಲ್ಲೆಲ್ಲೂ ಹಬ್ಬದ ಸಡಗರ ಮನೆ ಮಾಡಿತ್ತು. ಮಧ್ಯರಾತ್ರಿಯ ಹೊತ್ತು ಜಾರಿದ್ದರೂ ಗ್ರಾಮಸ್ಥರಲ್ಲಿ ಉತ್ಸಾಹದ ಚಿಲುಮೆ ಬತ್ತಿರಲಿಲ್ಲ.

ಧರ್ಮರಾಯನ ದೇವಸ್ಥಾನದಿಂದ ಹೂವಿನ ಕರಗ ಹೊರಬಂದ ಕೂಡಲೇ ಗ್ರಾಮಸ್ಥರು ಸಂಭ್ರಮದಿಂದ ಜೈಕಾರ ಹಾಕಿದರು. ತಮಟೆಯ ನಾದಕ್ಕೆ ಭಕ್ತಿ ಪರವಶರಾಗಿ ಕುಣಿದರು.

ಧರ್ಮರಾಯ ಸ್ವಾಮಿ ದೇವಸ್ಥಾನ ಟ್ರಸ್ಟ್ ಆಶ್ರಯದಲ್ಲಿ ನಡೆದ 39ನೇ ಹೂವಿನ ಕರಗ ಮಹೋತ್ಸವದಲ್ಲಿ ಇವೆಲ್ಲವು ಮೇಳೈಸಿದವು. 

ಐದು ದಿನಗಳ ಕಾಲ ನಡೆದ ಈ ಉತ್ಸವದಲ್ಲಿ ಧ್ವಜಾರೋಹಣ, ಪೋತರಾಜನ ಧೂಳು ಮೆರವಣಿಗೆ, ಹಸಿ ಕರಗ ಮತ್ತು ಗ್ರಾಮದ ದೇವರುಗಳಿಗೆ ಬೆಲ್ಲದಾರತಿ ಮಾಡಲಾಯಿತು. ಶಿಡ್ಲಘಟ್ಟ ತಾಲ್ಲೂಕಿನ ಮಾಲೂರು ಗ್ರಾಮದ ಅರ್ಚಕ ಧರ್ಮೇಂದ್ರ ಅವರು ಆರನೇ ಬಾರಿ ಹೂವಿನ ಕರಗವನ್ನು ಹೊತ್ತರು. 

ಗ್ರಾಮದ ಕೆರೆಯ ಏರಿ ಮೇಲೆ ಇರುವ ದುಗ್ಗಲಮ್ಮನ ದೇವಸ್ಥಾನದಲ್ಲಿ ಸೀರೆ ಮತ್ತು ಬಳೆ ತೊಡಿಸುವ ಶಾಸ್ತ್ರವನ್ನು ಮಾಡಲಾಯಿತು. ನಂತರ ಮೆರವಣಿಗೆಯ ಮೂಲಕ ಧರ್ಮರಾಯನ ದೇವಸ್ಥಾನದ ತನಕ ಕರೆ ತಂದು ಹೂವಿನ ಕರಗವನ್ನು ಹೊರಿಸಲಾಯಿತು. ಹೂವಿನ ಕರಗ ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ಮಾಡಲಾಯಿತು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !