ವಿದ್ಯುತ್‌ ಪ್ರತಿನಿಧಿಗಳ ಅರ್ಜಿ: ಜು. 17ಕ್ಕೆ ಆದೇಶ

ಬುಧವಾರ, ಜೂಲೈ 17, 2019
29 °C

ವಿದ್ಯುತ್‌ ಪ್ರತಿನಿಧಿಗಳ ಅರ್ಜಿ: ಜು. 17ಕ್ಕೆ ಆದೇಶ

Published:
Updated:

ಬೆಂಗಳೂರು: ‘ಗ್ರಾಮ ವಿದ್ಯುತ್‌ ಪ್ರತಿನಿಧಿ’ಗಳನ್ನು ಕಾಯಂಗೊಳಿಸಲು ಕೋರಿದ ಅರ್ಜಿಗಳಿಗೆ ಸಂಬಂಧಿಸಿದಂತೆ ಉಲ್ಲೇಖಿಸಬಹುದಾದ ಸುಪ್ರೀಂ ಕೋರ್ಟ್‌ ತೀರ್ಪುಗಳನ್ನು ಹಾಜರುಪಡಿಸಿ ಎಂದು, ಅರ್ಜಿದಾರರು ಮತ್ತು ವಿದ್ಯುತ್ ಪ್ರಸರಣ ನಿಗಮದ ಪರ ವಕೀಲರಿಗೆ ಹೈಕೋರ್ಟ್‌ ಸೂಚಿಸಿದೆ.

ಈ ಕುರಿತ ರಿಟ್‌ ಅರ್ಜಿಗಳನ್ನು ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಅರ್ಜಿದಾರರು ಗ್ರಾಮೀಣ ಪ್ರದೇಶದ ಬಡ ಕಕ್ಷಿದಾರರು. ಈ ಪ್ರಕರಣದಲ್ಲಿ ವಿಳಂಬ ಸಲ್ಲದು. ಜುಲೈ 17ರಂದು ಈ ಅರ್ಜಿಗಳ ಮೇಲೆ ಅಂತಿಮ ಆದೇಶ ಹೊರಡಿಸಲಾಗುವುದು’ ಎಂದು ವಿಚಾರಣೆ ಮುಂದೂಡಿದರು.

ವಿಚಾರಣೆ ವೇಳೆ ಹಿರಿಯ ವಕೀಲ ವಿ.ಲಕ್ಷ್ಮೀನಾರಾಯಣ, ಪಿ.ಎಸ್‌.ರಾಜಗೋಪಾಲ ಮತ್ತು ಎಸ್ಕಾಂ (ವಿದ್ಯುತ್‌ ಸರಬರಾಜು ಕಂಪನಿ) ಪರ ವಕೀಲ ಶ್ರೀರಂಗ ಸುಬ್ಬಣ್ಣ ವಾದ ಮಂಡಿಸಿದರು.

ಗ್ರಾಮೀಣ ಪ್ರದೇಶಗಳ ಪಂಚಾಯಿತಿ ವ್ಯಾಪ್ತಿಯಲ್ಲಿ ‘ಗ್ರಾಮ ವಿದ್ಯುತ್‌ ಪ್ರತಿನಿಧಿ’ಗಳಾಗಿ (ಜಿವಿಪಿ) 2003 ರಿಂದ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆದಾರರನ್ನು ಕಾಯಂಗೊಳಿಸಲು ಆಗದು ಎಂಬುದು ಸರ್ಕಾರದ ನಿಲುವು.

ಬರಹ ಇಷ್ಟವಾಯಿತೆ?

  • 1

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !