ಐಪಿಎಸ್ ಅಧಿಕಾರಿ ಶರ್ಮ ಅರ್ಜಿ: ನೋಟಿಸ್‌ಗೆ ತಡೆ

7

ಐಪಿಎಸ್ ಅಧಿಕಾರಿ ಶರ್ಮ ಅರ್ಜಿ: ನೋಟಿಸ್‌ಗೆ ತಡೆ

Published:
Updated:

ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಆರ್.ಪಿ. ಶರ್ಮ ಅವರಿಗೆ ಗೃಹ ಇಲಾಖೆ ಜಾರಿಗೊಳಿಸಿದ್ದ ಷೋಕಾಸ್ ನೋಟಿಸ್‌ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಈಗಾಗಲೇ ನೋಟಿಸ್ ಅನ್ನು ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ಮುಂದೆ ಪ್ರಶ್ನಿಸಲಾಗಿದೆ. ಈ ಅರ್ಜಿ ಇತ್ಯರ್ಥವಾಗುವವರೆಗೆ ಸರ್ಕಾರ 2018ರ ಅಕ್ಟೋಬರ್‌ 27ರಂದು ನೀಡಿರುವ ನೋಟಿಸ್‌ಗೆ ತಡೆ ನೀಡಬೇಕು ಎಂದು ಶರ್ಮ ಕೋರಿದ್ದರು.

ಈ ಅರ್ಜಿಯನ್ನು ನ್ಯಾಯಮೂರ್ತಿ ರವಿ ಮಳಿಮಠ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿ ನೋಟಿಸ್‌ ಪ್ರಕ್ರಿಯೆಗೆ ತಡೆ ನೀಡಿದೆ.

ಪ್ರಕರಣವೇನು?: ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿ ಅವರಿಗೆ 2018ರ ಮಾರ್ಚ್‌ನಲ್ಲಿ ಶರ್ಮ ಪತ್ರ ಬರೆದಿದ್ದರು. ‘ಸುಗಮ ಹಾಗೂ ಶಾಂತಿಯುತ ಚುನಾವಣೆ ನಡೆಸುವ ಬಗ್ಗೆ ವಿವರ ಚರ್ಚೆ ನಡೆಸಲು ಎಲ್ಲ ಐಪಿಎಸ್ ಅಧಿಕಾರಿಗಳ ಸಭೆ ಕರೆಯಬೇಕು ಎಂದು ಈ ಪತ್ರದಲ್ಲಿ ಕೋರಿದ್ದರು.

ಇದನ್ನು ಅಶಿಸ್ತು ಎಂದು ಪರಿಗಣಿಸಿ ನನಗೆ ಅಕ್ಟೋಬರ್‌ 27ರಂದು ಷೋಕಾಸ್ ನೋಟಿಸ್ ಜಾರಿಗೊಳಿಸಲಾಗಿತ್ತು.

‘ಕರ್ನಾಟಕ ಐಪಿಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷನಾಗಿ ನಾನು ವೈಯಕ್ತಿಕ ನೆಲೆಯಲ್ಲಿ ಈ ಪತ್ರ ಬರೆದಿದ್ದೆ. ಆದರೆ, ಇದನ್ನು ತಪ್ಪಾಗಿ ಅರ್ಥೈಸಲಾಗಿದೆ’ ಎಂದು ಶರ್ಮ ಆಕ್ಷೇಪಿಸಿದ್ದಾರೆ.

‘ನನ್ನ ಹೆಸರನ್ನು ರಾಷ್ಟ್ರಪತಿಗಳ ಪದಕ ಪಡೆಯಲು ಶಿಫಾರಸು ಮಾಡುವುದಕ್ಕೆ ತಡೆ ಹಿಡಿಯುವ ದುರುದ್ದೇಶ ಹೊಂದಿರುವ ಅಂಶವಾಗಿದೆ’ ಎಂದೂ ಅವರು ಪ್ರತಿಪಾದಿಸಿದ್ದಾರೆ.

‘ಪ್ರಕರಣವನ್ನು ಕೇಂದ್ರ ಆಡಳಿತ ನ್ಯಾಯಮಂಡಳಿಯ (ಸಿಎಟಿ) ಬೆಂಗಳೂರು ಪೀಠ ಸರಿಯಾಗಿ ವಿಚಾರಣೆ ನಡೆಸಿಲ್ಲ. ನನ್ನ ಪತ್ರವನ್ನು ಕಾರ್ಮಿಕ ಸಂಘಟನೆಯ ಚಟುವಟಿಕೆ ಎಂದು ಬಣ್ಣಿಸಿರುವುದು ಸರಿಯಲ್ಲ’ ಎಂದು ಅರ್ಜಿಯಲ್ಲಿ ವಿವರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !