ತಾಪಮಾನ ಏರಿಕೆಯಿಂದ ಆಗಾಗ ವಿಪರೀತ ಮಳೆ : ಸಂಶೋಧನಾ ವರದಿ

ಶುಕ್ರವಾರ, ಜೂನ್ 21, 2019
23 °C

ತಾಪಮಾನ ಏರಿಕೆಯಿಂದ ಆಗಾಗ ವಿಪರೀತ ಮಳೆ : ಸಂಶೋಧನಾ ವರದಿ

Published:
Updated:

ವಾಷಿಂಗ್ಟನ್‌ (ಪಿಟಿಐ): ಹವಾಮಾನ ಬದಲಾವಣೆಯಿಂದಾಗಿ ಕಳೆದ 50 ವರ್ಷಗಳಲ್ಲಿ ಜಗತ್ತಿನಾದ್ಯಂತ ಆಗಾಗ ವಿಪರೀತ ಮಳೆ ಸುರಿಯುವುದು ಹೆಚ್ಚಾಗುತ್ತಿದೆ. ಇದರಿಂದ ಕೃತಕ ನೆರೆ, ಪ್ರಾಕೃತಿಕ ಹಾನಿ, ನೀರು ಕಲುಷಿತಗೊಂಡು ಹರಡುವ ಸೋಂಕು ಹೆಚ್ಚಾಗುತ್ತಿದೆ ಎಂದು ಅಧ್ಯಯನವೊಂದು ವಿವರಿಸಿದೆ. 

1964ರಿಂದ 2013ರ ನಡುವೆ ಅಂದರೆ ಜಾಗತಿಕ ತಾಪಮಾನ ಏರುತ್ತಿದ್ದ ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆಯೇ ವಿಪರೀತ ಮಳೆ ಸುರಿದ ಘಟನೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗಿವೆ ಎಂದು ಜಲಸಂಪನ್ಮೂಲ ಸಂಶೋಧನಾ ಪತ್ರಿಕೆಯೊಂದು ಸಂಶೋಧನಾ ವರದಿಯೊಂದನ್ನು ಪ್ರಕಟಿಸಿದೆ.  ಕೆನಡಾ, ಯೂರೋಪ್‌ನ ಹೆಚ್ಚಿನ ಭಾಗಗಳು,  ಅಮೆರಿಕದ ಈಶಾನ್ಯ ಭಾಗ, ಆಸ್ಟ್ರೇಲಿಯಾದ ಉತ್ತರ ಭಾಗ, ರಷ್ಯಾದ ಪಶ್ಚಿಮ ಮತ್ತು ಚೀನಾದ ಕೆಲವು ಭಾಗಗಳಲ್ಲಿ ವಿಪರೀತ ಮಳೆ ಸುರಿದ ಘಟನೆಗಳು ಹಲವು ಬಾರಿ ಮರುಕಳಿಸಿವೆ.

ಮಳೆ ದಾಖಲೆಗಳನ್ನು ಗಮನಿಸಿ ವಿಪರೀತ ಮಳೆ ಸುರಿದ ಸಂದರ್ಭಗಳನ್ನು ವಿಶ್ಲೇಷಿಸುವ ಮೂಲಕ ಈ ಅಧ್ಯಯನವನ್ನು ನಡೆಸಿದ್ದು, ಕಳೆದ 50 ವರ್ಷಗಳಲ್ಲಿ ತಾಪಮಾನ ಹೆಚ್ಚುತ್ತಿರುವುದೂ ಅರಿವಿಗೆ ಬಂದಿದೆ ಎಂದು ಕೆನಡಾದ ಸಾಸ್ಕಾಶ್ವಾನ್‌ ವಿಶ್ವವಿದ್ಯಾಲಯದ ಜಲ–ಹವಾಮಾನ ಶಾಸ್ತ್ರಜ್ಞ ಸೈಮನ್‌ ಪಪಲೆಕ್ಸಿಯೋ ಹೇಳಿದ್ದಾರೆ. 

ವಿಶ್ವದ ವಿವಿಧೆಡೆ ಒಂದು ಲಕ್ಷ ನಿರ್ವಹಣಾ ಕೇಂದ್ರಗಳಲ್ಲಿ ಸಂಗ್ರಹವಾದ 8,700 ಮಳೆ ದಾಖಲೆಗಳನ್ನು ಗಮನಿಸಿದಾಗ ಈ ರೀತಿ ವಿಪರೀತ ಮಳೆ ಸುರಿದ ಘಟನೆಗಳು  ಇತ್ತೀಚೆಗಿನ ದಶಕಗಳಲ್ಲಿ ನಿರೀಕ್ಷೆಗಿಂತ ಹೆಚ್ಚಾಗಿರುವುದು ಕಂಡುಬಂದಿದೆ. ಅಂದರೆ 2004 ಮತ್ತು 2013ರ ನಡುವೆ ಇದು ಶೇ 7ರಷ್ಟು ಹೆಚ್ಚಾಗಿದೆ. ಯುರೋಪ್‌ ಮತ್ತು ಏಷ್ಯಾದಲ್ಲಿ ಇಂತಹ ಪ್ರಕರಣಗಳು ಶೇ 8.6ರಷ್ಟು ಹೆಚ್ಚಾಗಿದೆ. 

ಜಾಗತಿಕ ತಾಪಮಾನ ಹೆಚ್ಚಿದಂತೆ ಹೀಗೆ ವಿಪರೀತ ಮಳೆ ಸುರಿವ ಘಟನೆಗಳು ಹೆಚ್ಚಾಗಲಿವೆ. ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾದಂತೆ ಮಳೆ ಮೋಡಗಳು ದಟ್ಟವಾಗಿ,  ಇದ್ದಕ್ಕಿದ್ದಂತೆಯೇ ಮಳೆ ಸುರಿದುಬಿಡುತ್ತದೆ.  ಈ ಅನಿರೀಕ್ಷಿತ ಮಳೆಯಿಂದ ಕೃತಕ ನೆರೆ ಸೃಷ್ಟಿ ಮಾತ್ರವಲ್ಲ, ಸಾರ್ವಜನಿಕ  ಅನಾರೋಗ್ಯ ಹೆಚ್ಚುವುದು,  ಚರಂಡಿ ತುಂಬಿ ಹರಿದು, ರೋಗಾಣುಗಳು ನೀರನ್ನು ಕಲುಷಿತಗೊಳಿಸುವ ಅಪಾಯವೂ ಇದೆ.

ಇದಕ್ಕೆ ಪೂರಕ ಎಂಬಂತೆ 1980 ಮತ್ತು 2009ರ ನಡುವೆ ಐದು ಲಕ್ಷಕ್ಕೂ ಹೆಚ್ಚು ಜನರ ಸಾವಿಗೆ ಮಳೆಯಿಂದಾಗಿ ಉಂಟಾದ ಪ್ರವಾಹವೇ ಕಾರಣ ಎಂದು ಅಧ್ಯಯನ ವಿವರಿಸಿದೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !