‘ಶರಣರು–ಸೂಫಿ ನಾಡಿನಲ್ಲಿ ಶಾಂತಿ ಸ್ಥಾಪಿಸೋಣ’

7
ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿಕೆ; ಸನ್ಮಾನದ ಮಹಾಪೂರ

‘ಶರಣರು–ಸೂಫಿ ನಾಡಿನಲ್ಲಿ ಶಾಂತಿ ಸ್ಥಾಪಿಸೋಣ’

Published:
Updated:
Prajavani

ವಿಜಯಪುರ: ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಜಿಲ್ಲೆಗೆ ಮೊದಲ ಬಾರಿಗೆ ಭೇಟಿ ನೀಡಿದ ಎಂ.ಬಿ.ಪಾಟೀಲಗೆ ಗುರುವಾರ, ಶುಕ್ರವಾರ ಎರಡೂ ದಿನವೂ ಸನ್ಮಾನದ ಮಹಾಪೂರವೇ ಹರಿದು ಬಂದಿತು.

ಎಂ.ಬಿ.ಪಾಟೀಲ ಅಭಿಮಾನಿಗಳು, ಬೆಂಬಲಿಗರು, ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳು, ಕಾಂಗ್ರೆಸ್‌ ಕಾರ್ಯಕರ್ತರು, ಮುಖಂಡರು, ವಿವಿಧ ಇಲಾಖೆಗಳ ನೌಕರರು ಸಹ ಸನ್ಮಾನಿಸಿ, ಸಂಭ್ರಮಿಸಿದರು.

ವಿಜಯಪುರದಲ್ಲಿನ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಲಯಕ್ಕೆ ಶುಕ್ರವಾರ ಭೇಟಿ ನೀಡಿದ ಗೃಹ ಸಚಿವ ಎಂ.ಬಿ.ಪಾಟೀಲಗೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಸನ್ಮಾನಿಸಿದರು.

‘ಹಿಂದಿನ ಸರ್ಕಾರದಲ್ಲಿ ಜನಸಂಪನ್ಮೂಲ ಸಚಿವನಾಗಿ ಹಲವು ನೀರಾವರಿ ಯೋಜನೆ ಜಾರಿಗೆ ತರುವ ಮೂಲಕ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಬಹುತೇಕ ಯೋಜನೆಗಳು ಹಂತಿಮ ಹಂತದಲ್ಲಿವೆ. ಇದೀಗ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ನನ್ನ ಮೇಲೆ ಭರವಸೆಯಿಟ್ಟು, ಗೃಹ ಖಾತೆಯ ಜವಾಬ್ದಾರಿ ನೀಡಿದ್ದಾರೆ. ಅದನ್ನು ಸಹಿತ ಯಶಸ್ವಿಯಾಗಿ ನಿರ್ವಹಿಸುವುದಾಗಿ’ ಸನ್ಮಾನ ಸ್ವೀಕರಿಸಿದ ಎಂ.ಬಿ.ಪಾಟೀಲ ತಿಳಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ರವಿಗೌಡ ಪಾಟೀಲ ಮಾತನಾಡಿದರು. ಮಾಜಿ ಶಾಸಕರಾದ ರಾಜು ಆಲಗೂರ, ವಿಠ್ಠಲ ಕಟಕದೊಂಡ, ಮುಖಂಡರಾದ ಮಲ್ಲಣ್ಣ ಸಾಲಿ, ಬಿ.ಎಸ್.ಪಾಟೀಲ ಯಾಳಗಿ, ವೈಜನಾಥ ಕರ್ಪೂರಮಠ, ವಿಶ್ವಾನಾಥ ಮಠ, ಚಾಂದಸಾಬ್‌ ಗಡಗಲಾವ್‌, ಮಹಾದೇವಿ ಗೋಕಾಕ, ಗಂಗಾಧರ ಸಂಬಣ್ಣಿ, ಮಹಮ್ಮದ್‌ ರಫೀಕ್‌ ಟಪಾಲ ಇದ್ದರು.

ಮಹಿಳಾ ಪತ್ತಿನ ಸಹಕಾರಿ ಸಂಘ: ಬಗಳಾಮುಖಿದೇವಿ ಮಹಿಳಾ ಪತ್ತಿನ ಸಹಕಾರಿ ಸಂಘದ ವತಿಯಿಂದ ಗೃಹ ಸಚಿವ ಎಂ.ಬಿ.ಪಾಟೀಲರನ್ನು ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷೆ ಮಧುಮತಿ ಹಿರೇಮಠ, ನಿರ್ದೇಶಕರಾದ ರೀಟಾ ಮಠ, ಬೋರಮ್ಮ ವಿರಕ್ತಮಠ, ಪ್ರೇಮಾ ಹೊಸಮಠ, ಕುಲಸುಂಬಿ ಶಿವಣಗಿ, ಶೋಭಾ ಹಿರೇಮಠ, ಸುರೇಶ ಬಡಿಗೇರ, ಜಿ.ಬಿ.ಅಂಗಡಿ, ಚನ್ನಬಸಯ್ಯ ಹಿರೇಮಠ, ಗೀತಾಂಜಲಿ ದೇವರ್ಚಿ, ಮಹಾದೇವಿ ಗೋಡೇಕಾರ, ನೀಲವ್ವ ಹಿರೇಮಠ ಇದ್ದರು.

ಮರ್ಚಂಟ್ಸ್‌ ಅಸೋಸಿಯೇಷನ್‌: ಮರ್ಚಂಟ್ಸ್‌ ಅಸೋಸಿಯೇಷನ್‌ ವತಿಯಿಂದ ಗೃಹ ಸಚಿವ ಎಂ.ಬಿ.ಪಾಟೀಲ ಸನ್ಮಾನಿಸಲಾಯಿತು. ಅಸೋಸಿಯೇಷನ್‌ ಅಧ್ಯಕ್ಷ ರವೀಂದ್ರ ಬಿಜ್ಜರಗಿ, ಪದಾಧಿಕಾರಿಗಳಾದ ಜಯಾನಂದ ತಾಳಿಕೋಟಿ, ರಮೇಶ ನಿಡೋಣಿ, ಪ್ರವೀಣ ವಾರದ, ನೀಲೇಶ ಶಹಾ, ಮನೋಜ ಬಗಲಿ, ಗಂಗಾಧರ ಜೋಗೂರ, ಬಸನಗೌಡ ಬಿರಾದಾರ, ಶಾಂತಪ್ಪ ದೇಸಾಯಿ, ಶರಣಬಸಪ್ಪ ಗುಡ್ಡೋಡಗಿ, ಕುಮಾರ ಹಕ್ಕಾಪಕ್ಕಿ, ಕಮಲೇಶ ಪೋರವಾಲ ಇದ್ದರು.

ದೇವಸ್ಥಾನದಲ್ಲಿ ಪೂಜೆ; ದರ್ಗಾಕ್ಕೆ ಭೇಟಿ
ನಗರದ ಆರಾಧ್ಯ ದೈವ ಸಿದ್ಧೇಶ್ವರ ದೇಗುಲ ಹಾಗೂ ಹಾಸಿಂಪೀರ ದರ್ಗಾಕ್ಕೆ ಸಚಿವ ಎಂ.ಬಿ.ಪಾಟೀಲ ಭೇಟಿ ನೀಡಿ ದರ್ಶನ ಪಡೆದರು. ಎರಡೂ ಕಡೆ ಸಚಿವರನ್ನು ಸತ್ಕರಿಸಲಾಯಿತು.

ಸಿದ್ಧೇಶ್ವರ ದೇಗುಲದಲ್ಲಿ ಎಂ.ಎಂ.ಸಜ್ಜನ, ಸಂಗು ಸಜ್ಜನ, ಸದಾನಂದ ದೇಸಾಯಿ, ರಾಘು ಅಣ್ಣಿಗೇರಿ, ಬಿ.ಎಸ್.ಸುಗೂರ, ಸುರೇಶ ಜಾಧವ ಇದ್ದರು.

ಜ್ಞಾನಯೋಗಾಶ್ರಮ: ‘ಗೃಹ ಸಚಿವನಾಗಿದ್ದರೂ; ನೀರಾವರಿ ನನ್ನ ನೆಚ್ಚಿನ ವಿಷಯ. ಜಿಲ್ಲೆಯ ನೀರಾವರಿ ಯೋಜನೆಗಳ ಅನುಷ್ಠಾನಕ್ಕಾಗಿ ನಾನು ಸದಾ ಶ್ರಮಿಸುತ್ತೇನೆ’ ಎಂದು ಎಂ.ಬಿ.ಪಾಟೀಲ ಹೇಳಿದರು.

ಜ್ಞಾನಯೋಗಾಶ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ನೀರಾವರಿ ಇಲಾಖೆಯಂತೆ ಇಲ್ಲಿಯೂ ಕೂಡಾ ಅತ್ಯುತ್ತಮ ಕಾರ್ಯ ಮಾಡಿ ವಿಜಯಪುರ ಜಿಲ್ಲೆಯ ಜನರಿಗೆ ಹೆಸರು ತರುತ್ತೇನೆ’ ಎಂದರು.

ಜ್ಞಾನಯೋಗಾಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಶ್ರೀ ಮಾತನಾಡಿದರು. ಇದೇ ಸಂದರ್ಭದಲ್ಲಿ ಬಿ.ಎಲ್.ಡಿ.ಇ ನೌಕರರ ಬಡಾವಣೆಯ ಪರವಾಗಿ ಸಚಿವರನ್ನು ಸನ್ಮಾನಿಸಲಾಯಿತು.

ಡಾ.ಶ್ರದ್ಧಾನಂದ ಶ್ರೀ, ಅಭಯಾನಂದ ಶ್ರೀ ವೇದಿಕೆಯಲ್ಲಿದ್ದರು. ವಿ.ಸಿ.ನಾಗಠಾಣ ಸ್ವಾಗತಿಸಿದರು, ಎಂ.ಐ.ಕುಮಟಗಿ, ಜಂಬುನಾಥ ಕಂಚ್ಯಾಣಿ, ಬಿ.ಎಚ್.ಹಿರೇಮಠ, ಡಾ.ಎಂ.ಎಸ್.ಮದಭಾವಿ, ಎ.ಎಸ್.ಪಾಟೀಲ ಹೊನ್ನುಟಗಿ ಉಪಸ್ಥಿತರಿದ್ದರು.

ಪೊಲೀಸ್ ತರಬೇತಿ ಶಾಲೆ; ನೂತನ ಜೈಲು
‘ಗೃಹ ಇಲಾಖೆಯಿಂದ ನನ್ನ ತವರು ಜಿಲ್ಲೆಗೆ ಹಲವು ವಿಶೇಷ ಕೊಡುಗೆ ನೀಡುವೆ’ ಎಂದು ಸಚಿವ ಎಂ.ಬಿ.ಪಾಟೀಲ ಘೋಷಿಸಿದರು.

‘ನಗರದ ಹೊರವಲಯ ತೊರವಿ ಬಳಿ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಜಾಗವಿದೆ. ಇಲ್ಲಿ ಪೊಲೀಸ್ ತರಬೇತಿ ಅಕಾಡೆಮಿ ಸ್ಥಾಪನೆಗೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಆದಿಲ್‌ಶಾಹಿ ಅರಸರ ಆಳ್ವಿಕೆಯಲ್ಲಿ ವಿದೇಶಿ ವ್ಯಾಪಾರಿಗರ ಕೇಂದ್ರವಾಗಿದ್ದ ಸ್ಥಳವಿಂದು ಜೈಲಾಗಿ ಪರಿವರ್ತನೆಗೊಂಡಿದೆ. ನೂತನ ಜೈಲು ನಿರ್ಮಾಣಕ್ಕೆ ಹಲ ವರ್ಷಗಳ ಬೇಡಿಕೆಯಿದ್ದು, ಅರಕೇರಿ ಬಳಿ 40 ಎಕರೆ ವಿಸ್ತಾರದ ಪ್ರದೇಶದಲ್ಲಿ ನೂತನ ಕಾರಾಗೃಹ ನಿರ್ಮಾಣಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಗೃಹ ಸಚಿವರು ಪ್ರಕಟಿಸಿದರು.

‘ವಿಜಯಪುರ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ರೂಪಿಸುವ ಕನಸು ಕಂಡಿದ್ದೇನೆ. ಇದಕ್ಕಾಗಿ ಅಗತ್ಯವಿರುವ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸುವೆ. ಬಸವ ನಾಡಿನಲ್ಲಿ ಶಾಂತಿಯ ಬಾವುಟ ಶಾಶ್ವತವಾಗಿ ನೆಲೆಸುವಂತೆ ಪ್ರತಿ ಪೊಲೀಸ್‌ ಠಾಣೆಗೆ ‘ಹೊಯ್ಸಳ’ ವಾಹನದ ಮಾದರಿಯಲ್ಲಿ ಜೀಪುಗಳನ್ನು ಒದಗಿಸಲಾಗುವುದು.

ವಿಜಯಪುರ ಜಿಲ್ಲಾ ಪೊಲೀಸ್‌ ಕಂಟ್ರೋಲ್‌ ರೂಂ ಶಿಥಿಲಾವಸ್ತೆಯಲ್ಲಿದ್ದು, ನವೀಕರಣಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಕೋರಿಕೆ ಬಂದಿದೆ. ಪೊಲೀಸರಿಗೆ ನೂತನವಾಗಿ ವಸತಿ ಗೃಹ ನಿರ್ಮಿಸಿಕೊಡಲು ಯೋಜನೆ ರೂಪಿಸುವಂತೆ ಈಗಾಗಲೇ ಸೂಚಿಸಿದ್ದೇನೆ’ ಎಂದು ಎಂ.ಬಿ.ಪಾಟೀಲ ತಮ್ಮ ಇಲಾಖೆಯಿಂದ ಜಿಲ್ಲೆಗೆ ನೀಡುವ ಕೊಡುಗೆಗಳ ಮಹಾಪೂರವನ್ನು ಪ್ರಕಟಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !