ಮನೆಯ ಕೀಲಿ ತೆಗೆದು ಕಳವು

7

ಮನೆಯ ಕೀಲಿ ತೆಗೆದು ಕಳವು

Published:
Updated:

ವಿಜಯಪುರ: ನಗರದ ಸುಭಾಷ ಕಾಲೊನಿಯಲ್ಲಿ ನಿವೃತ್ತ ಶಿಕ್ಷಕಿ ಸುಶೀಲಾ ಈರಸೂರ ಎಂಬುವರ ಮನೆಯ ಕೀಲಿ ತೆಗೆದು, ಮಂಗಳವಾರ ಮಧ್ಯಾಹ್ನವೇ ಕಳವು ಮಾಡಲಾಗಿದೆ.

ಮನೆಯವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದ್ದಾರೆ. ಈ ಸಂದರ್ಭ ಕೀಲಿ ಹಾಕಿ, ಕೀಯನ್ನು ಅಲ್ಲೇ ಇಟ್ಟಿದ್ದಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿರುವ ಖದೀಮರು, ಯಾರೂ ಹೊರಗೆ ಇಲ್ಲದ್ದನ್ನು ಪರಿಗಣಿಸಿ, ಬೀಗ ತೆಗೆದು ಮನೆಯೊಳಗೆ ತೆರಳಿ ₹ 10000 ಕಳವು ಮಾಡಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ ಎಂದು ಗೋಳಗುಮ್ಮಟ ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !