ಬದಲಾದ ಮನೆಗೆಲಸದ ದಿನಚರಿ

ಬುಧವಾರ, ಜೂನ್ 19, 2019
25 °C

ಬದಲಾದ ಮನೆಗೆಲಸದ ದಿನಚರಿ

Published:
Updated:
Prajavani

ನಾನು, ನನ್ನ ಪತಿ ಇಬ್ಬರೂ ಸರ್ಕಾರಿ ಶಾಲೆಯ ಶಿಕ್ಷಕರು. ಅಂದ ಮೇಲೆ ಸಮಯಕ್ಕೆ ಸರಿಯಾಗಿ ಕೆಲಸಗಳು ಜರುಗುವ ದರ್ದು ಹೇಗಿರುತ್ತದೆ ಎಂಬುದು ಥಟ್ಟನೆ ವೇದ್ಯವಾಗುತ್ತದೆ. ನಾನು ಮದುವೆಯಾಗಿ ಅತ್ತೆಮನೆಗೆ ಬಂದ ಮೇಲೆ, ಮನೆಯಲ್ಲಿ ಚಿಕ್ಕಮ್ಮನ ಮಗಳಿದ್ದಳು. ಅವಳು, ನಾನು ಕೂಡಿ ಮನೆಗೆಲಸ ಮಾಡುತ್ತಿದ್ದೆವು. ಆ ನಂತರ ನನಗೆ ತುಸು ಯೋಚನೆಯಾಯಿತು. ಏಕೆಂದರೆ ಪ್ರತಿದಿನ ಮುದ್ದೆ-ಸಾರು, ಟಿಫನ್ ಇಷ್ಟೂ ರೆಡಿಯಾಗಬೇಕಿತ್ತು. ಅತ್ತೆ ಏನೂ ಮಾಡುತ್ತಿರಲಿಲ್ಲ. ನಾನು ಈ ಎಲ್ಲವನ್ನೂ ಹೇಗೆ ನಿಭಾಯಿಸುವುದು? ಎನ್ನುವಷ್ಟರಲ್ಲಿ, ನೆರವಿಗೆ ಬಂದವರು ನಮ್ಮೆಜಮಾನ್ರು ಮಂಜುನಾಥ್. ‘ಡೋಂಟ್‌‌ವರಿ, ನಾವಿಬ್ಬರೂ ಕೂಡಿ ಕೆಲಸ ಮಾಡಿದರಾಯ್ತು’ ಎಂದು ನನಗೆ ಸಮಾಧಾನ ಮಾಡಿದರು. ಅಡುಗೆ ಕೆಲಸ, ಮನೆಯ ಸ್ವಚ್ಛತೆ, ಮಕ್ಕಳಿಗೆ ಶಾಲೆಗೆ ಹೊರಡಲು ತಯಾರಿ ಎಲ್ಲವನ್ನೂ ಮಾಡಿಕೊಳ್ಳುತ್ತಿದ್ದೆವು. ಇದನ್ನು ಸಹಿಸದ ನಮ್ಮ ಮಾವನವರು ನನ್ನ ಪತಿಯನ್ನು ನಿಂದಿಸತೊಡಗಿದರು ‘ಹೆಂಡ್ತಿ ಹೇಳಿದ ಹಾಗೆ ಮಾಡುವವನು’ ಎಂದು ಜರಿಯುತ್ತಿದ್ದರು. ಇದರಿಂದ ಬೇಸರಗೊಂಡು ನಮ್ಮವರಿಗೆ ‘ನೀವು ಕೆಲಸದಲ್ಲಿ ಸಹಾಯ ಮಾಡಬೇಡಿ’ ಎಂದು ಕೇಳಿಕೊಂಡಿದ್ದೆ. 

ನಾನು ಮುಂಜಾನೆಯಿಂದ ಎಷ್ಟು ವೇಗವಾಗಿ ಕೆಲಸ ಮಾಡಿದರೂ ಒಮ್ಮೊಮ್ಮೆ ತಿಂಡಿ ತಿನ್ನಲು ಸಮಯ ಸಿಗದೆ ಹಾಗೆಯೇ ಶಾಲೆಗೆ ಹೋಗುತ್ತಿದ್ದೆ. ಸಂದರ್ಭವನ್ನು ಅರ್ಥಮಾಡಿಕೊಂಡ ನನ್ನವರು, ಸಂಸಾರವೆಂಬ ನೊಗ ಹೊತ್ತ ಜೋಡೆತ್ತುಗಳು ಸದಾ ಸಮ ಸಮ ನಡೆದರೇನೆ ಬಾಳ ಹೊಲ ಹಸನಾಗುವುದು, ಇಲ್ಲಿ ಯಾರಿಗೆ ಯಾರೂ ಹೇಳಿದಂತೆ ಕೇಳುತ್ತಿಲ್ಲ; ಮನೆಗೆಲಸದಲ್ಲಿ ಇಬ್ಬರ ಸಹಯೋಗ ಅಗತ್ಯ’ ಎಂಬ ನಿಲುವು ತಳೆದರು. ನಂತರ ಯಾರ ಮಾತಿಗೂ ನಾವು ಸೊಪ್ಪು ಹಾಕಲಿಲ್ಲ; ಅಂದಿನಿಂದಲೂ ನಾವಿಬ್ಬರೂ ಕೂಡಿ ಮನೆಗೆಲಸಗಳನ್ನು ಮಾಡಿಕೊಳ್ಳುತ್ತೇವೆ. ರೂಮ್‍ಗಳನ್ನು ನಾನು ಸ್ವಚ್ಛ ಮಾಡಿದರೆ ಹಾಲ್‌ ಅನ್ನು ಅವರು ಕ್ಲೀನ್ ಮಾಡುತ್ತಾರೆ. ಹಂಡೆ, ಬಿಂದಿಗೆಗಳನ್ನು ನಾನು ತೊಳೆದಿಟ್ಟರೆ ನೀರನ್ನು ಅವರು ತುಂಬಿಸುತ್ತಾರೆ, ನಾನು ಚಪಾತಿ ಲಟ್ಟಿಸಿಕೊಟ್ಟರೆ, ಅವರು ಹೆಂಚಿನ ಮೇಲೆ ಚಪಾತಿ ಸುಡುತ್ತಾರೆ. ನಾನು ಸಾರು ಮಾಡಿದರೆ, ಅವರು ಒಗ್ಗರಣೆ ಹಾಕುತ್ತಾರೆ. ಒಮ್ಮೊಮ್ಮೆ ನನಗೆ ಸೊಂಟ ನೋವು ಬಂದಾಗ ಮುದ್ದೆ ತೊಳೆಸಿಕೊಡುವವರೂ ಅವರೇ. ಹೀಗೆ, ಗಂಡಸರು ಮನೆಗೆಲಸವನ್ನು ಮಾಡಬಾರದೆಂಬ ಹಳೆಯ ಗೊಡ್ಡು ಸಂಪ್ರದಾಯವನ್ನು ನಾನು, ನನ್ನ ಪತಿ ಅಳಿಸಿಹಾಕಿದ್ದೇವೆ.

ಸುಶೀಲಾ ಮಂಜುನಾಥ್, ಚಿಕ್ಕಬಳ್ಳಾಪುರ

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !