12 ಬಗೆಯ ತರಕಾರಿಗಳು, ಪ್ರತಿ ಕೆ.ಜಿಗೆ ₹20

7
ಇದೇ 6 ರಿಂದ 8ರವರೆಗೆ ತರಕಾರಿ ಮಾರಾಟ ಮೇಳ

12 ಬಗೆಯ ತರಕಾರಿಗಳು, ಪ್ರತಿ ಕೆ.ಜಿಗೆ ₹20

Published:
Updated:

ಬೆಂಗಳೂರು: ಸದ್ಯ ತರಕಾರಿಗಳ ಬೆಲೆ ಕುಸಿತಗೊಂಡಿದ್ದು, ರೈತರು ಕಂಗಾಲಾಗಿದ್ದಾರೆ. ಈ ನಿಟ್ಟಿನಲ್ಲಿ ಬೆಳೆದ ಬೆಳೆಗಳನ್ನು ಹಾಳಾಗಲು ಬಿಡಬಾರದು ಎನ್ನುವ ಉದ್ದೇಶದಿಂದ ಹಾಪ್‌ಕಾಮ್ಸ್‌ ರಿಯಾಯಿತಿ ದರದಲ್ಲಿ ಮಾರಾಟ ಮೇಳವನ್ನು ಆಯೋಜಿಸಿದೆ.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಾ‍ಪ್‌ಕಾಮ್ಸ್‌ನ ಅಧ್ಯಕ್ಷ ಎ.ಎಸ್‌.ಚಂದ್ರೇಗೌಡ, ‘ಇದೇ 6 ರಿಂದ 8ರವರೆಗೆ ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್‌, ಹಡ್ಸನ್‌ ವೃತ್ತದ ಹಾಪ್‌ಕಾಮ್ಸ್‌ ಮಳಿಗೆಗಳಲ್ಲಿ ರಿಯಾಯಿತಿ ದರದಲ್ಲಿ ತರಕಾರಿ ಮಾರಾಟ ಮೇಳ ನಡೆಯಲಿದೆ’ ಎಂದು ತಿಳಿಸಿದರು.

‘ಹಬ್ಬದ ನಿಮಿತ್ತ ರಿಯಾಯಿತಿ ದರದಲ್ಲಿ 12 ಬಗೆಯ ತರಕಾರಿಗಳನ್ನು ಪ್ರತಿ ಕೆ.ಜಿಗೆ ₹20 ರಂತೆ ಮಾರಾಟ ಮಾಡಲಾಗುವುದು. ನೇರವಾಗಿ ರೈತರಿಂದ ಖರೀದಿ ಮಾಡುವುದರಿಂದ ಗ್ರಾಹಕರಿಗೆ ಗುಣಮಟ್ಟದ ತರಕಾರಿಗಳು ಸಿಗಲಿವೆ. ಅಲ್ಲದೇ, ರೈತರಿಗೂ ಉತ್ತಮ ಮಾರುಕಟ್ಟೆ ಸೌಲಭ್ಯವನ್ನು ಕಲ್ಪಿಸಿದಂತಾಗುತ್ತದೆ. ನಗರದ ಎಲ್ಲ ಹಾಪ್‌ಕಾಮ್ಸ್‌ ಮಳಿಗೆಗಳಲ್ಲೂ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ’ ಎಂದು ಹೇಳಿದರು. 

12 ಬಗೆಯ ತರಕಾರಿಗಳು: ಬದನೇಕಾಯಿ, ಬೀಟ್‌ರೂಟ್‌, ನವಿಲುಕೋಸು, ಸೌತೇಕಾಯಿ, ಸೀಮೆಬದನೇಕಾಯಿ, ಎಲೆಕೋಸು, ಮೂಲಂಗಿ, ಸೋರೇಕಾಯಿ, ಪಡವಲಕಾಯಿ, ಹಾಗಲಕಾಯಿ, ಬಜ್ಜಿಮೆಣಸಿನಕಾಯಿ, ಸಾಂಬಾರು ಸೌತೇಕಾಯಿ. 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !