ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ನಿರುದ್ಯೋಗಿಗಳಿಗೆ ನಿರೀಕ್ಷೆಗೂ ಮೀರಿದ ಕೆಲಸ ಸಿಗುವ ಸಾಧ್ಯತೆ
Published 6 ಆಗಸ್ಟ್ 2024, 23:40 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮಾರ್ಗದರ್ಶಕರ ಸಲಹೆ ಪಡೆದು ಆರಂಭಿಸಿದ ಯೋಜನಾಬದ್ಧ ಕೆಲಸಗಳಲ್ಲಿ ಅನುಕೂಲ ಉಂಟಾಗಲಿದೆ. ನಿರುದ್ಯೋಗಿಗಳಿಗೆ ನಿರೀಕ್ಷೆಗೂ ಮೀರಿದ ಕೆಲಸ ಸಿಗುವ ಸಾಧ್ಯತೆ ಇದೆ.
ವೃಷಭ
ಶಿಕ್ಷಕ ವೃತ್ತಿಯವರಿಗೆ  ಅಸಾಮಾನ್ಯ ಬುದ್ಧಿವಂತಿಕೆಯಿಂದ ತರಬೇತಿಯ ಅಗತ್ಯ ಕಾಣುವುದು. ಅಡಿಕೆ ಬೆಳೆಗಾರರು ದಾಸ್ತಾನು ಬೆಳೆಯಿಂದ ಲಾಭ ಹೊಂದುವಿರಿ. ಎಂಥ ಜವಾಬ್ದಾರಿಗಳನ್ನೂ ನಿಭಾಯಿಸಲು ಸರ್ವಸಿದ್ಧರಾಗಿ.
ಮಿಥುನ
ಸಂಘದಲ್ಲಿ ನಾಯಕತ್ವ ವಹಿಸುತ್ತಿರುವುದರಿಂದ ತಪ್ಪುಗಳಿಗೆ ನೇರವಾಗಿ ಅಲ್ಲದಿದ್ದರೂ ಹೊಣೆ ಮಾಡಲಾಗುತ್ತದೆ. ಭೂ ವ್ಯವಹಾರದ ಬಂಡವಾಳದಲ್ಲಿ ಮೋಸಹೋಗುವ ಸ್ಥಿತಿ ಬರಬಹುದು.
ಕರ್ಕಾಟಕ
ಹಿರಿಯರು ಮೊದಲಿನಿಂದ ಕುಟುಂಬದಲ್ಲಿ ನಡೆಸಿಕೊಂಡು ಬಂದ ಧಾರ್ಮಿಕ ವಿಧಿವಿಧಾನವನ್ನು ಆಚರಿಸುವ ಬಗ್ಗೆ ತೀರ್ಮಾನಿಸಿ. ಕೃಷಿಯನ್ನು ಮಾಡುವವರು ಸಂಬಂಧಪಟ್ಟ ಇಲಾಖೆಯವರಿಂದ ಸಹಾಯ ಪಡೆದುಕೊಳ್ಳಿರಿ.
ಸಿಂಹ
ಹೆತ್ತವರೊಂದಿಗೆ ವಾಗ್ವಾದಕ್ಕಿಳಿಯುವುದು ಅಶ್ರೇಯಸ್ಸಿಗೆ ಕಾರಣವಾಗುತ್ತದೆ. ಸಮಾರಂಭಗಳಲ್ಲಿ ಭಾಗವಹಿಸುವುದರ ಜತೆಯಲ್ಲಿ ಜವಾಬ್ದಾರಿಯನ್ನು ಹೊರಬೇಕಾಗುವುದು. ಕೆಲಸಗಳಲ್ಲಿ ಆಸಕ್ತಿ ವೃದ್ಧಿಯಾಗುವುದು.
ಕನ್ಯಾ
ಉದ್ದೇಶ ನೆರವೇರಿಸಿಕೊಳ್ಳುವುದಕ್ಕೆ ನಡೆಸಿರುವ ಪ್ರಯತ್ನಗಳು ನಿಧಾನ ವಾಗಿಯಾದರೂ ಸಿದ್ಧಿಸಲಿದೆ.   ಕೆಲಸದ ಲಾಭ ನಷ್ಟಗಳ ಬಗ್ಗೆ ಬಹಳವಾಗಿ ಕಾಡಬಹುದು. ವರ್ತಕ ವರ್ಗಕ್ಕೆ ಸ್ವಲ್ಪ ಬಿಡುವು ಸಿಕ್ಕೀತು.
ತುಲಾ
ನಿಮಗೆ ಯಾವುದೇ ಸಮಸ್ಯಗೆ ಪರಿಹಾರ ಕಂಡುಹಿಡಿಯಲು ಕಷ್ಟವಾಗುವುದಿಲ್ಲ.  ಜೀವನದ ಶೈಲಿಯಲ್ಲಿ ಬದಲಾವಣೆಯ ಗಾಳಿ ಬೀಸಲು ಆರಂಭಿಸುತ್ತದೆ. ದುಡ್ಡಿನ ವಿಷಯದಲ್ಲಿ ಮೋಸ ಹೋಗುವ ಸಂಭವವಿದೆ.
ವೃಶ್ಚಿಕ
ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಹೆಚ್ಚಾಗಿ ಸ್ನೇಹಿತರಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ. ಸತ್ಕಾರ್ಯಗಳಲ್ಲಿ ಆದಾಯ  ಮೀರಿ ಖರ್ಚುಗಳಿದ್ದರೂ ಚಿಂತಿಸುವ ಅಗತ್ಯವಿಲ್ಲ. ವೃತ್ತಿರಂಗದಲ್ಲಿ ಪ್ರತಿ ಹೆಜ್ಜೆಗೂ ಎಚ್ಚರವಿರಿ.
ಧನು
ಬದುಕಿನಲ್ಲಿ ಹೊಸ ವ್ಯಕ್ತಿಯ ಪ್ರವೇಶವಾಗಲಿದೆ ಹಾಗೂ ಅವರಿಂದ ಸಿಗುವ ಸಹಕಾರ ಜೀವನ ಪರ್ಯಂತ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಇರುವುದು. ತಾಯಿಯವರ ಆರೋಗ್ಯ ಸುಧಾರಿಸಲಿದೆ.
ಮಕರ
ನಾಟಕ ಹಾಗೂ ಸಿನಿಮಾ ರಂಗದಲ್ಲಿ ಕೆಲಸ ನಿರ್ವಹಿಸುವವರಿಗೆ ಯಶಸ್ಸು ಇದ್ದು, ಪ್ರೋತ್ಸಾಹ ದೊರೆತು ಸಮಾಜದಲ್ಲಿ ಸ್ಥಾನಮಾನಗಳಿಂದ ಉನ್ನತ ಸ್ಥಿತಿಗೆ ಬರುವಿರಿ. ಆರೋಗ್ಯದ ವಿಚಾರದಲ್ಲಿ ಅಸಡ್ಡೆ ತೋರದಿರಿ.
ಕುಂಭ
ಸೇವಕ ವರ್ಗದವರಿಗೆ ಆದಾಯ ಹೆಚ್ಚಿದಂತೆ ಕೆಲಸದ ಸಮಯ ಅಥವಾ ವಿಸ್ತೀರ್ಣ ಹೆಚ್ಚುವುದು. ಬುದ್ಧಿವಂತಿಕೆಯ ಬಲದಿಂದ ಶತ್ರುಗಳ ಬಾಧೆಯನ್ನು ಉಪಶಮನಗೊಳಿಸಿಕೊಳ್ಳುವ ಮಾರ್ಗವನ್ನು ಹುಡುಕಿರಿ.
ಮೀನ
ಪ್ರೀತಿಸುವವರ ಮಾರ್ಗದರ್ಶನದಿಂದ ಜೀವನದಲ್ಲಿನ ನಿರುತ್ಸಾಹವು ದೂರಾಗಲಿದೆ. ಮಹಾಗಣಪತಿಯನ್ನು ಭಾವ ಪೂರ್ವಕವಾಗಿ ಪೂಜಿಸಿ ಪುಣ್ಯ ಸಂಪಾದನೆ ಮಾಡಿ. ಮುಖ್ಯ ಕೆಲಸಗಳಿಗೆ ಆಪ್ತರ ಸಲಹೆ ಅಗತ್ಯ.