ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಸಕಾಲದಲ್ಲಿ ಮಿತ್ರರ ನೆರವು ಸಿಗುವುದು
Published 14 ಆಗಸ್ಟ್ 2024, 1:50 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವ್ಯವಹಾರವನ್ನು ವಿಸ್ತರಿಸುವ ಯೋಜನೆ ಹಾಕಿಕೊಂಡಿದ್ದರೆ ಅದನ್ನು ಅನುಷ್ಠಾನಕ್ಕೆ ತರಲು ಸಕಾಲ. ಟ್ರಾವೆಲ್ಸ್ ಏಜೆನ್ಸಿ ಉದ್ಯೋಗದವರಿಗೆ ಲಾಭದಾಯಕ ಬೆಳವಣಿಗೆ ಇರುತ್ತದೆ.
ವೃಷಭ
ಕೋರ್ಟಿನ ಕೆಲಸಗಳನ್ನು ತ್ವರಿತಗತಿಯಲ್ಲಿ ನಡೆಸಿಕೊಡುವಂತೆ ವಕೀಲರಲ್ಲಿ ಕೇಳಿಕೊಳ್ಳಿ. ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಪರಿಶ್ರಮದ ಅಗತ್ಯವಿದೆ. ಬೇಕರಿ ಪದಾರ್ಥಗಳ ಮಾರಾಟದಿಂದ ಲಾಭ ಇರುವುದು.
ಮಿಥುನ
ದಾರಿಹೋಕರ ಟೀಕೆಗಳಿಗೆ ಹೆದರದೆ ಸಕಾರಾತ್ಮಕವಾಗಿ ಮುಂದುವರಿಯಿರಿ. ಶನೈಶ್ಚರನ ಆರಾಧನೆಯಿಂದ ಜಟಿಲ ಸಮಸ್ಯೆ ಇತ್ಯರ್ಥಗೊಂಡು ಪ್ರತಿವಾದಿಗಳು ನಿರುತ್ತರರಾಗುವರು.
ಕರ್ಕಾಟಕ
ಮೇಲಧಿಕಾರಿಗಳಿಂದ ಹೊಸ ಅವಕಾಶಗಳು ಹಾಗೂ ಪ್ರಶಂಸೆಯ ಮಾತುಗಳನ್ನು ಕೇಳುವಿರಿ. ನಿರೀಕ್ಷಿತ ಧನಾಗಮನವಿದ್ದರೂ ಆರ್ಥಿಕ ವಿಷಯಗಳಲ್ಲಿ ಎಚ್ಚರವಹಿಸಿ.
ಸಿಂಹ
ಕುಟುಂಬದಲ್ಲಿ ಊಹೆಗೂ ನಿಲುಕದಂಥ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. ವಿದ್ಯಾರ್ಥಿಗಳು ಸ್ವಲ್ಪ ಶ್ರಮವಹಿಸಿ ಓದಿದರೆ ನಿರೀಕ್ಷೆಗಿಂತ ಯಶಸ್ಸು ಲಭ್ಯವಾಗುವುದು. ಹೊಸ ಒಪ್ಪಂದಗಳಿಂದ ಲಾಭವಿರಲಿದೆ.
ಕನ್ಯಾ
ಆಹಾರ ಪದಾರ್ಥ, ಉಕ್ಕು (ಕಬ್ಬಿಣ) ಗೃಹ ಬಳಕೆ ಸಾಮಾನುಗಳ ವರ್ತಕರಿಗೆ ದಿನದ ಪೂರ್ವದಲ್ಲಿ ಅಧಿಕ ಲಾಭ. ಬಂಧುಗಳ ಸಹಾಯದಿಂದ ಪುತ್ರನಿಗೆ ಕಾರ್ಯಾನುಕೂಲವಾಗುವುದು.
ತುಲಾ
ಉದ್ಯೋಗದಲ್ಲಿನ ವರ್ಗಾವಣೆ ರದ್ದು ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಅವಕಾಶಗಳು ಎದುರಾಗುವುದರಿಂದ ಗೊಂದಲಕ್ಕೆ ಈಡಾಗುವಿರಿ. ಮಾನಸಿಕ ಸ್ಥೈರ್ಯ ದೃಢವಾಗಿರಲಿ.
ವೃಶ್ಚಿಕ
ಸಂಶೋಧಕರಿಗೆ ಅಧ್ಯಯನಕ್ಕೆ ಅನುಕೂಲಕರ ಪುಸ್ತಕ ದೊರೆಯಲಿದೆ. ಬದುಕಿನ ಕವಲುದಾರಿಯಲ್ಲಿರುವ ನಿಮಗೆ ಮಾರ್ಗದರ್ಶನ ದೊರೆಯಲಿದೆ. ಆರೋಗ್ಯದಲ್ಲಿ ಉದಾಸೀನತೆ ತೋರುವುದು ಸರಿಯಲ್ಲ.
ಧನು
ಕಾರ್ಯಕ್ಷೇತ್ರದಲ್ಲಿನ ಹೆಚ್ಚುವರಿ ಕೆಲಸದಿಂದ ಆದ ಒತ್ತಡಗಳಿಂದ ಹೊರಬರಲು ವಿಶ್ರಾಂತಿಯ ಅಗತ್ಯವಿದೆ. ಒತ್ತಾಯಕ್ಕೆ ಬೇಡದಿರುವ ತೀರ್ಮಾನ ತೆಗೆದುಕೊಳ್ಳಬೇಡಿ. ಜೀವನದ ಬಗ್ಗೆ ನಿರುತ್ಸಾಹವನ್ನು ತಾಳದಿರಿ.
ಮಕರ
ಕೆಲಸದಲ್ಲಿ ಬದಲಾವಣೆ ಕಾಣಲಿದ್ದೀರಿ. ಜೀವನಶೈಲಿಯೂ ವಿಭಿನ್ನವಾಗಿ ಬದಲಾಗಲಿದೆ. ಅವಕಾಶಗಳನ್ನು ಸೂಕ್ತ ಬಳಸಿಕೊಂಡಲ್ಲಿ ಮುನ್ನಡೆ ಸಾಧಿಸುವಿರಿ. ಹೂವಿನ ವ್ಯಾಪಾರಿಗಳಿಗೆ ಯಶಸ್ಸು.
ಕುಂಭ
ಪಾಲಿಗೆ ಬಂದದ್ದನ್ನು ಸಂತೋಷದಿಂದ ಸ್ವೀಕರಿಸಿದಲ್ಲಿ ಅಸ್ತಿತ್ವವು ಮತ್ತು ನೆಮ್ಮದಿಯು ಉಳಿದುಕೊಳ್ಳುವುದು. ಸ್ವಂತ ಕೆಲಸವನ್ನು ಜರೂರಾಗಿ ಮಾಡಬೇಕಾಗುತ್ತದೆ. ಸಕಾಲದಲ್ಲಿ ಮಿತ್ರರ ನೆರವು ಸಿಗುವುದು.
ಮೀನ
ನಾಳೆಯ ನಿಮ್ಮ ಯೋಜನೆಗಳ ಪೂರೈಕೆಗೆ ಸಾಕಷ್ಟು ಸಮಯ ದೊರಕುವಂತೆ ಯೋಜನೆಗಳನ್ನು ಹಾಕಿಕೊಳ್ಳುವುದು ಉತ್ತಮ. ಮಕ್ಕಳ ಕೆಲವೊಂದು ವಿಚಾರಗಳು ಮಾನಸಿಕ ಸ್ಥಿತಿಯನ್ನು ಕೆಡಿಸಲಿವೆ.