ಶನಿವಾರ, 15 ನವೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ | ಈ ರಾಶಿಯವರಿಗೆ ಭೂ ವ್ಯವಹಾರಗಳು ಲಾಭದಾಯಕ
Published 19 ಅಕ್ಟೋಬರ್ 2025, 0:10 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕೆಲವು ವಿಷಯಗಳು ಹೀಗಾಗಬಹುದು ಎಂಬ ಅನುಭವವಿದ್ದರೂ ಅವಘಡವನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ. ಕುಲದೇವರ ದರ್ಶನ ಮಾಡುವ ಮನಸ್ಸಾಗಬಹುದು.
ವೃಷಭ
ಅನ್ವೇಷಣೆಯ ಸ್ವಭಾವವು ವೃತ್ತಿಯ ಬದುಕಿನಲ್ಲಿ ಹೊಸ ತಿರುವು ತರಲಿದೆ. ಅಮೂಲ್ಯ ವಸ್ತುವಿನ ಪ್ರಾಪ್ತಿಯಿಂದ ಸಂತೋಷ ಹೊಂದುವಿರಿ. ಜೀವನದ ಹಾದಿ ಬದಲಾಗುವುದನ್ನು ಕಾಣುವಿರಿ.
ಮಿಥುನ
ಒಂದೇ ಬಾರಿ ಹೆಚ್ಚು ಹಣವನ್ನು ಒಂದು ಕೆಲಸಕ್ಕೆ ವಿನಿಯೋಗಿಸುವುದರ ಬದಲು ಕಂತಿನಲ್ಲಿ ತೀರಿಸುವ ಬಗ್ಗೆ ಯೋಚಿಸಿ. ನಿತ್ಯದ ಕಾರ್ಯಗಳಿಂದ ಸ್ವಲ್ಪ ಮುಕ್ತಿ ಸಿಗುವ ಅವಕಾಶವಿದೆ. ಭೂ ವ್ಯವಹಾರಗಳು ಲಾಭದಾಯಕ.
ಕರ್ಕಾಟಕ
ಅಭಿರುಚಿಗೆ ಹೊಂದುವಂಥ ಜನರೊಂದಿಗೆ ಒಡನಾಟ ಬೆಳೆಸಿ ಕೊಳ್ಳುವಿರಿ. ಮೊಮ್ಮಗನ ವಯಸ್ಸಿಗೆ ಮೀರಿದ ಕೆಲವು ಆಟೋಟಗಳನ್ನು ನೋಡಿ ಮನಸ್ಸು ಪ್ರಫುಲ್ಲವಾಗುವುದು. ವೃತ್ತಿ ಉತ್ತಮ ಸ್ಥಿತಿಯಲ್ಲಿರುವುದು.
ಸಿಂಹ
ಹಲವು ದಿನಗಳಿಂದ ಪರ ಊರಿನ ಪ್ರಯಾಣ ಆಯಾಸ ಉಂಟುಮಾಡುವುದು. ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸಂಪಾದನೆ ಇರುತ್ತದೆ. ಆಪ್ತರೊಬ್ಬರು ನೆರವಿಗೆ ನಿಲ್ಲಲಿದ್ದಾರೆ.
ಕನ್ಯಾ
ಅಸೂಯೆಯಾಗದಂತೆ ಕಾರ್ಯಗಳನ್ನು ಸಾಧಿಸಿಕೊಳ್ಳುವ ಉತ್ತಮ ಗುಣ ನಿಮ್ಮಲ್ಲಿರುವುದರಿಂದ ಯಶಸ್ಸನ್ನು ಕಾಣುವಿರಿ. ನವಗ್ರಹ ಸ್ತೋತ್ರ ಪಠಿಸುವುದರಿಂದ ಶುಭವಾಗುತ್ತದೆ.
ತುಲಾ
ದೂರದ ಸಂಬಂಧಿಗಳು ವೈಯಕ್ತಿಕ ವಿಷಯದಲ್ಲಿ ಮೂಗುತೂರಿಸುವುದು ಮನಸ್ತಾಪಕ್ಕೆ ಕಾರಣವಾಗುತ್ತದೆ. ನಿಷ್ಠಾವಂತ ಸಂಗಾತಿಗೆ ವಿಶೇಷ ಉಡುಗೊರೆ ದೊರೆಯುವ ಸಂಭವವಿದೆ.
ವೃಶ್ಚಿಕ
ಮಿತ್ರರ ಸಹಕಾರದಿಂದ ಮತ್ತು ಅವರ ಚಾಣಾಕ್ಷ ವರ್ತನೆಯಿಂದ ವ್ಯಾಪಾರದಲ್ಲಿ ಪ್ರಗತಿ ಇರುವುದು. ಹಿರಿಯರ ಆರೋಗ್ಯ ಸುಧಾರಿಸುವುದರಿಂದ ಸಂತಸವಿರುತ್ತದೆ. ಅಭಿಮಾನಿಗಳ ಅಭಿಲಾಶೆಯನ್ನು ಕಡೆಗಣಿಸದಿರಿ.
ಧನು
ಮನೆ ಖರೀದಿಯ ವಿಷಯದ ಬಗ್ಗೆ ಮನೆಯವರಿಂದ ಮಾಹಿತಿಯನ್ನು ಪಡೆಯುವಿರಿ. ರಹಸ್ಯವಾಗಿ ಸಿಗುವ ಬೆಂಬಲದಿಂದ ಕನಸುಗಳು ನನಸಾಗಲಿವೆ. ಗೃಹೋಪಕರಣದ ತಯಾರಕರಿಗೆ ಅವಕಾಶಗಳು ಸಿಗಲಿವೆ.
ಮಕರ
ಮುಕ್ತ ಮಾತುಕತೆ ಮೂಲಕ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಇರುವ ಅವಕಾಶಗಳನ್ನು ಬಳಸಿಕೊಳ್ಳಿ. ರಾಜಕೀಯ ವಿದ್ಯಮಾನಗಳಿಂದಾಗಿ ಓಡಾಟವಾಗುವುದು. ಮಕ್ಕಳ ಮೇಲೆ ನಿಗಾ ಇರಲಿ.
ಕುಂಭ
ಯೋಜಿತ ಕೆಲಸ ಕಾರ್ಯಗಳನ್ನು ಕಾರ್ಯರೂಪಕ್ಕೆ ತರಲು ಪರಿಶ್ರಮ ಅಗತ್ಯವಿದೆ. ಮಧ್ಯಾಹ್ನದ ಸಮಯದಲ್ಲಿ ಸಂತಸ ಭರಿತ ಸುದ್ದಿ ತಲುಪುತ್ತದೆ. ಸೇವಾ ಸಂಸ್ಥೆಯವರಿಗೆ ಅನುಕೂಲವಿರುವುದು.
ಮೀನ
ರಾಜಕೀಯ ವರ್ಗದವರು ಸಾರ್ವಜನಿಕರ ಮನ್ನಣೆ ಪಡೆದುಕೊಂಡು ಉತ್ತಮ ಶುಭ ಫಲಗಳನ್ನು ಅನುಭವಿಸುವ ನಿರೀಕ್ಷೆಯನ್ನು ಮಾಡಬಹುದು. ಮನಸ್ಸಿನ ದುಗುಡದ ನಿವಾರಣೆಗೆ ತಾಳ್ಮೆ ಅತ್ಯವಶ್ಯ.
ADVERTISEMENT
ADVERTISEMENT