ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಸೋಮವಾರ, 22 ಮೇ 2023
Published 21 ಮೇ 2023, 18:30 IST
ಪ್ರಜಾವಾಣಿ ವಿಶೇಷ
author
ಮೇಷ
ಉದ್ಯೋಗದಲ್ಲಿ ಬದಲಾವಣೆ ಬಯಸಿದರೆ ಸ್ವಲ್ಪ ದಿನಗಳ ಕಾಲ ಕಾಯುವುದು ಅವಶ್ಯವಾಗಲಿದೆ. ಸಂಸಾರದ ವಿಷಯಗಳತ್ತ ಹೆಚ್ಚು ಗಮನಹರಿಸ ಬೇಕಾಗುವುದು. ಸ್ನೇಹಿತರ ಸಹಕಾರ ದೊರೆತು ಅಭಿಲಾಷೆ ಪೂರೈಸುವುದು.
ವೃಷಭ
ಚಟುವಟಿಕೆಗಳ ಒತ್ತಡದ ನಡುವೆ ಇತರರಿಗೆ ಸಹಾಯ ಮಾಡುವ ನಿಮ್ಮ ಪರೋಪಕಾರ ಮನೋಭಾವದಿಂದ ಯಶಸ್ಸು ಲಭಿಸಲಿದೆ. ಎಲೆಕ್ಟ್ರಾನಿಕ್‌ ಉಪಕರಣಗಳ ಮೇಲೆ ಬಂಡವಾಳ ತೊಡಗಿಸುವುದು ಸರಿಯಲ್ಲ
ಮಿಥುನ
ಸಹೋದರನ ವ್ಯಾಪಾರ ವಹಿವಾಟುಗಳ ವಿಚಾರಗಳಿಗೆ ಸಹಕಾರವಾಗುವಂತಹ ಸಲಹೆಗಳನ್ನು ತಿಳಿಹೇಳಬಹುದು. ರಾಜಕಾರಣದ ರಹಸ್ಯ ಮಾತುಕತೆಗಳಲ್ಲಿ ನಿಮ್ಮ ಸ್ಥಾನ ಪ್ರಮುಖವಾಗಿರುವುದು. ಶಿವನನ್ನು ಆರಾಧಿಸಿ.
ಕರ್ಕಾಟಕ
ಬಂಧು ಮಿತ್ರರ ಸಲಹೆಗಳಿಗೆ ಗಮನ ನೀಡಿದ್ದರಿಂದಾಗಿ ನೀವು ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಲಿದ್ದೀರಿ. ಅತಿಯಾದ ಖರ್ಚುವೆಚ್ಚಗಳು ತಗ್ಗುವುದು. ದಿನ ಹಂತ ಹಂತವಾಗಿ ಪ್ರಗತಿ ಪ್ರಾಪ್ತಿಯಾಗಲಿದೆ.
ಸಿಂಹ
ಯಾವುದೇ ಸಂದರ್ಭದಲ್ಲೂ ಒತ್ತಡಕ್ಕೆ ಸಿಲುಕದೆ ಕಾರ್ಯನಿರ್ವಹಿಸುವ ನೀವು ಎಲ್ಲರಿಂದಲೂ ಗುರುತಿಸಲ್ಪಡುವಿರಿ. ಬಹುದಿನಗಳಿಂದ ನಿರೀಕ್ಷಿಸಿದ ಪುತ್ರನ ಉದ್ಯೋಗವು ಹತ್ತಿರದಲ್ಲಿ ಕೆಲಸ ಪ್ರಾಪ್ತಿಯಾಗುವುದು.
ಕನ್ಯಾ
ಮುಕ್ತ ಮನೋಭಾವದಿಂದಾಗಿ ನೀವಾಡುವ ಮಾತುಗಳಿಂದಲೇ ಗುಪ್ತ ವಿಷಯಗಳು ಇತರರ ಮುಂದೆ ಬಹಿರಂಗಗೊಳ್ಳಲಿದೆ. ರಾಜಕೀಯ ರಂಗದವರಿಗೆ ವರಿಷ್ಠರೊಂದಿಗಿನ ಮಾತುಕತೆ ಅನುಕೂಲ ಉಂಟುಮಾಡಲಿದೆ
ತುಲಾ
ವ್ಯವಹಾರದಲ್ಲಿ ಎದುರಾಗಿರುವ ಸಮಸ್ಯೆಯನ್ನು ಬಗೆಹರಿಸಿಕೊಂಡು ಮುಂದಿನ ಹೆಜ್ಜೆ ಹಾಕುವುದು ಉತ್ತಮ. ವರಮಾನದಲ್ಲಿ ಈ ದಿನ ಯಾವುದೇ ರೀತಿಯ ಕೊರತೆ ಇರುವುದಿಲ್ಲ. ವೃತ್ತಿಯಲ್ಲಿ ಪೈಪೋಟಿ ಎದುರಿಸುವಿರಿ.
ವೃಶ್ಚಿಕ
ಮಾನಸಿಕ ನೋವನ್ನು ಮರೆಯಲು ಪ್ರೀತಿಪಾತ್ರರೊಂದಿಗೆ ಮಾತ ನಾಡುವುದು ಒಳ್ಳೆಯದು. ನಿಮ್ಮ ಪ್ರಯತ್ನಗಳು ವ್ಯರ್ಥವಲ್ಲ ಎಂಬುದು ಈ ದಿನ ತಿಳಿಯುವುದು. ಕಾಗದಪತ್ರಗಳಿಗೆ ಓದಿ ಸಹಿ ಹಾಕುವುದನ್ನು ಅಭ್ಯಸಿಸಿಕೊಳ್ಳಿರಿ.
ಧನು
ಬಟ್ಟೆಯ ವ್ಯಾಪಾರ ನಡೆಸುವವರು ಉದ್ಯೋಗದಲ್ಲಿ ಬಂಡವಾಳ ಹೂಡುವಂಥ ಕೆಲಸ ಈ ದಿನ ಮಾಡುವುದು ಸಮಂಜಸವಲ್ಲ. ದೈವಾನುಗ್ರಹದಿಂದ ಸಾಹಸ ಕಾರ್ಯಗಳು ಕೈಗೂಡಿ ಬಹು ಮಟ್ಟಿಗೆ ನಿರೀಕ್ಷಿತ ಫಲ ಲಭಿಸಲಿದೆ.
ಮಕರ
ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ ದೊರೆಯುವ ಸಂಭವ. ನೂತನ ಗೃಹ ಖರೀದಿ ಇಲ್ಲವೇ ಗೃಹ ನಿರ್ಮಾಣ ಕಾರ್ಯ ಮುಂದೂಡುವುದು ಉತ್ತಮ. ತೆರೆಮರೆಯಲ್ಲಿ ನಡೆಸಿದ ಕೆಲಸಗಳಿಂದ ಅಧಿಕಾರ ಪಡೆದುಕೊಳ್ಳುವಿರಿ.
ಕುಂಭ
ಕೈಗೊಂಡ ಕೆಲಸಗಳ ಬಗೆಗೆ ಮುತುವರ್ಜಿ ವಹಿಸುವುದರಿಂದ ಮನಸ್ಸಿಗೆ ಒಪ್ಪುವ ರೀತಿಯಲ್ಲಿ ಕೆಲಸ ಪೂರ್ಣಗೊಳ್ಳುವುದು. ಸ್ವಾರ್ಥದಿಂದ ವ್ಯವಹರಿಸಿದ ಪರಿಣಾಮ ಪಶ್ಚಾತಾಪ ಪಡುವಂತಾಗುವುದು.
ಮೀನ
ಮುಂದೂಡಲ್ಪಟ್ಟಿದ್ದ ದೂರದ ಪ್ರಯಾಣ ಅನಿವಾರ್ಯತೆ ಸನ್ನಿವೇಶದಿಂದ ಕೈಗೊಳ್ಳಬೇಕಾಗುತ್ತದೆ. ಸಂಸಾರದ ಘನತೆ ಹೆಚ್ಚಿಸುವುದಕ್ಕಾಗಿ ಸಾಹಸ ಪಡುತ್ತಿರುವ ನಿಮಗೆ ಹೆಂಡತಿ ಮಕ್ಕಳು ನೆರವಾಗುವರು.