ದಿನ ಭವಿಷ್ಯ: ಈ ರಾಶಿಯವರಿಗೆ ಪ್ರಯತ್ನಿಸಿದ ಕಾರ್ಯಗಳಲ್ಲಿ ಜಯ, ಆದಾಯ ಲಭಿಸುವುದು
Published 22 ಮಾರ್ಚ್ 2026, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಆರ್ಥಿಕವಾಗಿ ಉತ್ತಮ ಪ್ರಗತಿ ಇದ್ದರೂ ಧನವ್ಯಯದಲ್ಲಿ ಆಗುತ್ತಿರುವ ಅನವಶ್ಯಕ ಖರ್ಚುಗಳನ್ನು ತಡೆಗಟ್ಟುವ ಪ್ರಯತ್ನ ಮಾಡುವುದರಿಂದ ಲಾಭ ಗಳಿಸಬಹುದು. ಸುಗಂಧ ದ್ರವ್ಯದ ಮಾರಾಟದಲ್ಲಿ ಲಾಭ ಸಿಗಲಿದೆ.
22 ಮಾರ್ಚ್ 2026, 23:30 IST
ವೃಷಭ
ಅಧಿಕಾರಿಗಳಿಗೆ ಅಪನಂಬಿಕೆ ಮೂಡುವಂತಹ ಘಟನೆಗಳು ಸಂಭವಿಸಬಹುದು. ತಾಯಿ ಆರೋಗ್ಯ ತಪಾಸಣೆ ನಡೆಸಲು ವೈದ್ಯರನ್ನು ಕಾಣುವಿರಿ. ಬಿಳಿ ಬಣ್ಣ ಅದೃಷ್ಟ ತರುವುದು.
22 ಮಾರ್ಚ್ 2026, 23:30 IST
ಮಿಥುನ
ವ್ಯವಹಾರಗಳನ್ನು ಇತರರೊಂದಿಗೆ ಹೇಳಿಕೊಂಡರೂ ಒಳಗುಟ್ಟನ್ನು ಬಿಟ್ಟುಕೊಡದಿರಿ. ನೆಮ್ಮದಿಯ ವಿಷಯವೇನೆಂದರೆ ಖರ್ಚಿಗೆ ತಕ್ಕಂತೆ ಧನಾಗಮನ ಇರಲಿದೆ.
22 ಮಾರ್ಚ್ 2026, 23:30 IST
ಕರ್ಕಾಟಕ
ವ್ಯಾಪಾರದ ಅಭಿವೃದ್ಧಿಗೆ ಬೇಕಾದ ಆರ್ಥಿಕ ಬಲದ ಜತೆ ವ್ಯಾಪಾರದ ಉಪಾಯಗಳನ್ನು ಬಳಸಿ. ಸ್ಥಗಿತಗೊಂಡಿದ್ದ ಕಾರ್ಯಗಳಿಗೆ ಚಾಲನೆ ದೊರೆಯುವುದು. ಗೌರವಕ್ಕೆ ಚ್ಯುತಿ ಬಾರದಂತೆ ಕಾಪಾಡಿಕೊಳ್ಳಿ.
22 ಮಾರ್ಚ್ 2026, 23:30 IST
ಸಿಂಹ
ವಿದ್ಯಾರ್ಥಿ ವರ್ಗಕ್ಕೆ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಸೂಕ್ತ ದಿನ. ಸಂಬಂಧಿಕರ ವಲಯದಲ್ಲಿದ್ದ ತಪ್ಪು ಅಭಿಪ್ರಾಯಗಳು ದೂರಾಗಲಿವೆ.
22 ಮಾರ್ಚ್ 2026, 23:30 IST
ಕನ್ಯಾ
ಎಂತಹ ಪರಿಸ್ಥಿತಿಯನ್ನೂ ಎದುರಿಸಬಲ್ಲೆನೆಂಬ ಆತ್ಮವಿಶ್ವಾಸದಿಂದ ಜೀವನ ನಡೆಸಿ. ಅದರಿಂದ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಹಿತಶತ್ರುಗಳ ಕಾಟದಿಂದ ತಪ್ಪಿಸಿಕೊಳ್ಳಲು ಬುದ್ಧಿವಂತಿಕೆ ಉಪಯೋಗಿಸಿರಿ.
22 ಮಾರ್ಚ್ 2026, 23:30 IST
ತುಲಾ
ಮಕ್ಕಳೊಂದಿಗೆ ಮನರಂಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೋಗಲಿದ್ದೀರಿ. ಸಂಸ್ಥೆಯಿಂದ ತರಬೇತಿ ಪಡೆದುಕೊಳ್ಳುವ ಅವಕಾಶಗಳು ಎದುರಾದರೆ ಸದುಪಯೋಗ ಪಡಿಸಿಕೊಳ್ಳಿ.
22 ಮಾರ್ಚ್ 2026, 23:30 IST
ವೃಶ್ಚಿಕ
ದೈಹಿಕ ಮತ್ತು ಆರ್ಥಿಕ ಶಕ್ತಿಯನ್ನು ವ್ಯಯಿಸದೇ ಸಮಯಕ್ಕಾಗಿ ಕಾದು, ಕಾರ್ಯವೆಸಗುವ ಚಾಣಾಕ್ಷತನ ನಿಮ್ಮಲ್ಲಿ ಇರುವುದು. ಸಾಲ ತೀರಿಸಲು ಹೊಸದೊಂದು ಮಾರ್ಗ ಕಾಣಲಿದೆ.
22 ಮಾರ್ಚ್ 2026, 23:30 IST
ಧನು
ಪ್ರಯತ್ನಿಸಿದ ಕಾರ್ಯಗಳಲ್ಲಿ ಜಯವಿದ್ದು, ಆದಾಯ ಲಭಿಸುವುದು. ಜನರಿಗೆ ಮಾರ್ಗದರ್ಶನ ಮಾಡುವ ಯೋಗವಿದೆ. ನಿರ್ಣಯ ಕೈಗೊಳ್ಳುವ ಸಮಯದಲ್ಲಿ ಸಹನೆ ಮುಖ್ಯ.
22 ಮಾರ್ಚ್ 2026, 23:30 IST
ಮಕರ
ಹಲವು ಕಾರಣಗಳಿಗೆ ಸ್ನೇಹಿತರು ಮಾರ್ಗದರ್ಶನ, ಬೆಂಬಲ ಹಾಗೂ ಸಹಕಾರವನ್ನು ಅಪೇಕ್ಷಿಸಬಹುದು. ತಾಯಿಯ ಆರೋಗ್ಯ ಅದರಲ್ಲೂ ಕಣ್ಣಿನ ದೃಷ್ಟಿಗೆ ಸಂಬಂಧಿಸಿದಂತೆ ಕಾಳಜಿಯನ್ನು ತೆಗೆದು ಕೊಳ್ಳಬೇಕಾಗುತ್ತದೆ.
22 ಮಾರ್ಚ್ 2026, 23:30 IST
ಕುಂಭ
ಸಾಮಾಜಿಕವಾಗಿ ಜನೋಪಕಾರದಿಂದ ಪ್ರಶಂಸೆ ಹಾಗೂ ಗುರು-ಹಿರಿಯರಿಂದ ಮೆಚ್ಚುಗೆಯ ನುಡಿ ಲಭಿಸಲಿದೆ. ಕಾರ್ಯಕ್ಷೇತ್ರದ ಸಮಸ್ಯೆಯನ್ನು ಹಂತ ಹಂತವಾಗಿ ಸುಧಾರಣೆ ಮಾಡುವಿರಿ.
22 ಮಾರ್ಚ್ 2026, 23:30 IST
ಮೀನ
ದೈವಾನುಕೂಲದಿಂದ ಶುಭ ಕಾರ್ಯಗಳನ್ನು ನಿಶ್ಚಯ ಮಾಡಬಹುದು. ಜೀವನೋಪಾಯಕ್ಕೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳುವಿರಿ. ಶ್ವಾಸಕೋಶಕ್ಕೆ ಸಂಬಂಧ ಪಟ್ಟ ಕಾಯಿಲೆ ನಿವಾರಣೆಯಾಗಲಿದೆ.
22 ಮಾರ್ಚ್ 2026, 23:30 IST