ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ವೈದ್ಯರನ್ನು ಭೇಟಿ ಮಾಡಬೇಕಾದ ಸ್ಥಿತಿ ಎದುರಾಗಬಹುದು
Published 22 ಸೆಪ್ಟೆಂಬರ್ 2024, 18:36 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವೈದ್ಯರ ತಪಾಸಣೆಯಿಂದ ಬಂದ ಫಲಿತಾಂಶ ಆತಂಕವನ್ನು ಸೃಷ್ಟಿ ಮಾಡಲಿದೆ. ಸ್ನೇಹಿತನ ಸಹಾಯದಿಂದ ಬೇರೆ ಉದ್ಯಮಕ್ಕೆ ಕೈ ಹಾಕುವ ಸಾಹಸವನ್ನು ಮಾಡಬಹುದು.
ವೃಷಭ
ಸ್ವರ್ಣ, ಲೋಹ ಹಾಗೂ ಗೃಹೋಪಕರಣಗಳ ವ್ಯವಹಾರಗಳಲ್ಲಿ ಉತ್ತಮ ಆದಾಯ ಹೊಂದಬಹುದು. ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ ದೊರೆತು ಬಡ್ತಿ ಸಿಗುವುದು. ಕೆಲಸ ಕಾರ್ಯಗಳಲ್ಲಿ ಗಮನವಿರಲಿ.
ಮಿಥುನ
ಸಂಗೀತದ ಕಲಿಕೆಯಲ್ಲಿ ಅತೀವ ಆಸಕ್ತಿಗೆ ನಿಮ್ಮ ತಂದೆ-ತಾಯಿಅವರಿಂದ ಪ್ರೋತ್ಸಾಹ ಸಿಗಲಿದೆ. ವೈದ್ಯರನ್ನು ಭೇಟಿ ಮಾಡಬೇಕಾದ ಸ್ಥಿತಿ ಎದುರಾಗಬಹುದು. ಸಂಶೋಧಕರು ಸಾಧನೆಯ ಕುರಿತು ಹೆಮ್ಮೆ ಪಡೆಯುವಿರಿ.
ಕರ್ಕಾಟಕ
ದೈವಾನುಕೂಲದಿಂದ ನಡೆಯಬೇಕಾದ ಶುಭ ಕಾರ್ಯಗಳನ್ನು ಹಿರಿಯರೊಂದಿಗೆ ಕುಳಿತು ನಿಶ್ಚಯ ಮಾಡಬಹುದು. ಆಫೀಸಿನ ಕೆಲಸಗಳಲ್ಲಿ ಕೆಲವೊಂದು ವಿಷಯಗಳನ್ನು ಪರಾಮರ್ಶಿಸಲೇಬೇಕಾದ ಸಮಯ ಬರಲಿದೆ.
ಸಿಂಹ
ಸಣ್ಣ ಪುಟ್ಟ ವಿಚಾರಗಳನ್ನೂ ಉಪೇಕ್ಷಿಸದೆ ಮನೆಯವರೊಂದಿಗೆ ಮಾತನಾಡುವಿರಿ. ಬೆಳ್ಳಿ ವಸ್ತುಗಳ ಮಾರಾಟ ಮಾಡುವವರು ಆದಾಯವನ್ನು ಗಳಿಸುವಿರಿ. ಆತಂಕವಿಲ್ಲದೆ ಕೆಲಸ ಕಾರ್ಯಗಳು ಸಾಗುವುದು.
ಕನ್ಯಾ
ಕುಟುಂಬದವರೊಡನೆ ಸಂತೋಷದಲ್ಲಿ ಇರಬೇಕೆಂಬ ನಿಮ್ಮ ಈ ದಿನದ ಆಲೋಚನೆಗೆ ಅಡ್ಡಿ ಎದುರಾಗಲಿದೆ. ದಾಖಲೆ ಪರಿಶೀಲನೆ ತೀರ್ಮಾನದಿಂದ ನಿಸ್ಸಂಶಯವಾಗಿ ಮನೋವ್ಯಾಧಿ ದೂರಾಗುತ್ತದೆ.
ತುಲಾ
ಮಗನ ಸಹಾಯದಿಂದ ಸಂಬಂಧಿಕರೊಬ್ಬರ ಕೆಲಸ ಸುಗಮವಾಗಿ ಕೈಗೂಡುವುದರಿಂದ ಮನಸ್ಸಿಗೆ ಹೆಚ್ಚಿನ ಸಂತಸವಿರುವುದು. ಚರ್ಚೆ ಹಾಗೂ ವ್ಯಾಪಾರ ವ್ಯವಹಾರಗಳಲ್ಲಿ ಬಹಳ ಜಾಗರೂಕತೆ ವಹಿಸಿರಿ.
ವೃಶ್ಚಿಕ
ಯೋಗ್ಯ ವಯಸ್ಕರಿಗೆ ಆಲೋಚನೆಗೆ ಸರಿಸಮಾನಾದ ರೀತಿಯಲ್ಲಿ ವಿವಾಹ ಭಾಗ್ಯ ಒದಗಿ ಬರಲಿದೆ. ಮಗಳಿಗೆ ಅನಿರೀಕ್ಷಿತವಾಗಿ ಹೊಸ ಕೆಲಸ ಸಿಕ್ಕಿ ಸಂತೋಷವಾಗುವುದು. ಪ್ರಮುಖ ಸ್ಥಾನ ಪಡೆಯಲು ತಯಾರಿ ನಡೆಸುವಿರಿ.
ಧನು
ಉದ್ಯೋಗದ ಅನ್ವೇಷಣೆಯಲ್ಲಿರುವವರು ವಾಣಿಜ್ಯ ಸಂಸ್ಥೆಯೊಂದರಲ್ಲಿ ಕೆಲಸ ಸಂಪಾದಿಸಿಕೊಳ್ಳಬಹುದು. ಸಮೀಪವರ್ತಿಗಳ ಸಹಾಯದಿಂದ ಕೆಲಸ ಪೂರ್ತಿಗೊಳಿಸುವಿರಿ. ಮೇಲಧಿಕಾರಿಗಳ ವರ್ತನೆಗೆ ಆಕ್ಷೇಪಣೆ ಸಲ್ಲದು.
ಮಕರ
ಸುತ್ತಮುತ್ತಲಿನ ಜನರೊಂದಿಗೆ ಬೆರೆಯುವುದರ ಪ್ರಯೋಜನ ಅನುಭವಕ್ಕೆ ಬರಲಿದೆ. ಅವಿಶ್ವಾಸವನ್ನು ಮುಕ್ತ ಮನಸ್ಸಿನ ಮಾತುಕತೆಗಳಿಂದ ಸರಿಪಡಿಸಿಕೊಳ್ಳಬಹುದು. ಸಮಾರಂಭ ನಡೆಸಲು ದಿನ ಗೊತ್ತು ಮಾಡುವಿರಿ.
ಕುಂಭ
ವೈದ್ಯರು ಅದರಲ್ಲೂ ನರರೋಗ ತಜ್ಞರು ಅಭ್ಯಾಸದಲ್ಲಿ ತೋರಿದ ಬೇಜವಾಬ್ದಾರಿತನದಿಂದ ಪಾಪ ಸಂಗ್ರಹಣೆಯಾಗುವುದು. ವಿಲಾಸೀ ಜೀವನದ ಶೈಲಿಯನ್ನು ಅನುಭವಿಸುವ ಆಸೆ ಈಡೇರುವುದು.
ಮೀನ
ಕೌಟುಂಬಿಕವಾಗಿ ಸಹೋದರನ ಏಳಿಗೆಯನ್ನು ಸಹಿಸುವ ಮನೋಧರ್ಮ ಬೆಳೆಸಿಕೊಳ್ಳಿರಿ. ಕೆಲಸದಲ್ಲಿದ್ದ ಸಣ್ಣ ಪುಟ್ಟ ತೊಡಕು ನಿವಾರಿಸಿಕೊಳ್ಳುವುದನ್ನು ಸ್ವಂತವಾಗಿ ಅಭ್ಯಾಸಿಸಿ. ವಸ್ತ್ರಾಭರಣ ಖರೀದಿ ಯೋಗವಿದೆ.
ADVERTISEMENT
ADVERTISEMENT