ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಗುರುವಾರ, 25 ಮೇ 2023
Published 24 ಮೇ 2023, 18:30 IST
ಪ್ರಜಾವಾಣಿ ವಿಶೇಷ
author
ಮೇಷ
ಆರ್ಥಿಕ ವಂಚನೆಯಾಗುವ ಲಕ್ಷಣಗಳಿದೆ. ಅಕ್ಕ ತಂಗಿಯರ ಆಸೆ ಈಡೇರಿಸುವ ಪ್ರಯತ್ನ ನಿಮ್ಮದಾಗುವುದು. ಕ್ರೀಡಾಪಟುಗಳು ತಮ್ಮ ಕ್ರೀಡೆಯಲ್ಲಿ ಉತ್ತಮ ಸಾಧನೆಯಿಂದ ಬಹುಮಾನದ ಜೊತೆ ಗೌರವವನ್ನು ಗಳಿಸುವಿರಿ.
ವೃಷಭ
ಮಕ್ಕಳ ಹೆಸರಿನಲ್ಲಿ ನಿವೇಶನ ಖರೀದಿಸುವ ಯೋಚನೆಗಳು ಬರಲಿದೆ. ಸ್ನೇಹಿತರ ಸಲಹೆ ಸಹಕಾರದಿಂದ ಪ್ರಾರಂಭಿಸಿದ ವ್ಯವಹಾರದಲ್ಲಿ ಒಳ್ಳೆಯ ಫಲಿತಾಂಶವನ್ನು ಎದುರು ನೋಡಬಹುದು.  ದಾಂಪತ್ಯ ಜೀವನ ಸುಖಮಯವಾಗಿರುವುದು.
ಮಿಥುನ
ವಿದ್ಯಾರ್ಥಿಗಳಿಗೆ ತಮ್ಮ ಅಭ್ಯಾಸದಲ್ಲಿ ಉದಾಸೀನತೆ ತೋರಿಬಂದರೂ ಬುದ್ಧಿ ಬಲದಿಂದ ಮತ್ತು ಶ್ರದ್ಧೆಯಿಂದ ಆಲೈಸುವ ಗುಣದಿಂದಾಗಿ ಫಲಿತಾಂಶಕ್ಕೆ ಚ್ಯುತಿ ಬರುವುದಿಲ್ಲ. ಹೊಸ ಆಲಂಕಾರಿಕ ವಸ್ತುಗಳನ್ನು ಖರೀದಿಸುವಿರಿ.
ಕರ್ಕಾಟಕ
ಕುಟುಂಬದಲ್ಲಿ ನಡೆಯುತ್ತಿದ್ದ ದೇವತಾರಾಧನೆಯು ನಿಂತಿರುವ ಕಾರಣದಿಂದಾಗಿ ಹಲವು ತೊಂದರೆಗಳು ಉಂಟಾಗುತ್ತಿರಬಹುದಾದ ಕಾರಣ ಅದನ್ನುಪರಿಹರಿಸುವ ಮಾರ್ಗ ಕಂಡುಕೊಳ್ಳಿ. ನಂಜು ನಿವಾರಕ ಆಹಾರವನ್ನು ಸೇವಿಸಿ.
ಸಿಂಹ
ಓಡುತ್ತಿರುವಂಥ ಕಾಲದ ಜೊತೆಯಲ್ಲಿ  ಚಲಿಸುವ ಗುಣವನ್ನು ಹೊಂದಿದರಷ್ಟೇ ನಿಮ್ಮ ಉದ್ಯೋಗದಲ್ಲಿ ಪ್ರಶಂಸೆಗೊಳಗಾಗುವಿರಿ. ಶಿಕ್ಷಕರ ಹೆಸರನ್ನು ಉತ್ತಮ ಪಾಠನ ಕ್ರಮದಿಂದ ವಿದ್ಯಾರ್ಥಿಗಳು ಉನ್ನತಮಟ್ಟಕ್ಕೆ ಕೊಂಡೊಯ್ಯುವರು.
ಕನ್ಯಾ
ದೊಡ್ಡದಾದ ಧಾರ್ಮಿಕ ಕಾರ್ಯಕ್ರಮದಲ್ಲಿ ನಿಭಾಯಿಸಿದ ಪಾತ್ರ ನಿಮ್ಮನ್ನು ಸಂತೃಪ್ತರನ್ನಾಗಿ ಆಗಿಸುತ್ತದೆ. ಕಷ್ಟಗಳನ್ನು ಎದುರಿಸುವಂತಹ ಶಕ್ತಿಯು ನಿಮಗಿಂತಲು ಕಷ್ಟಪಡುತ್ತಿರುವಂತಹಾ ವ್ಯಕ್ತಿಗಳನ್ನು ನೋಡಿ ಪಡೆದುಕೊಳ್ಳುವಿರಿ.
ತುಲಾ
ಮುಜುಗರದ ತೆರೆಗಳನ್ನು ದಾಟಿ ನಿಮ್ಮ ಮನೋಭಿಲಾಷೆಯಂತೆ ತವರು ಮನೆಯಂತೆಯೇ ಪತಿಯ ಗೃಹದಲ್ಲಿಯು ಜೀವನ  ಪ್ರಾರಂಭಿಸುವಿರಿ.ಆರಾಧ್ಯ ದೇವತೆಯು ಅಭೀಷ್ಟವನ್ನು ನೆರವೇರಿಸಿದರಿಂದ ಹರಕೆ ತೀರಿಸುವಿರಿ.
ವೃಶ್ಚಿಕ
ವಿದ್ವಜ್ಜನರ ಎದುರು ಮಾತನಾಡುವ ಬದಲು ಮೌನವೇ ಗೌರವವನ್ನು ಹೆಚ್ಚುಗೊಳಿಸುತ್ತದೆ. ವಿದೇಶೀಯ ಸ್ನೇಹಿತನನ್ನು ಮೊದಲ ಬಾರಿ ಮುಖತಃ  ಭೇಟಿಯಾಗುವ ಅವಕಾಶ ದೊರಕಲಿದೆ. ಮುಂದಿನ ಓದಿನ ಬಗ್ಗೆ ಯೋಚಿಸುವಿರಿ.
ಧನು
ಹಲವು ದಿನಗಳ ಬಿಗುವಾದ ದಿನಚರಿಯ ನಂತರ ನಿಮ್ಮ ಹಳೆಯ ದಿನಚರಿಗೆ ಮರಳುವಿರಿ. ಇಷ್ಟವೆಂದು ಅಧಿಕವಾಗಿ ಸೇವಿಸಿದ ಆಹಾರವು ಅನಾರೋಗ್ಯಕ್ಕೆ ಎಡೆಮಾಡಿಕೊಡುತ್ತದೆ. ಅಧಿಕ ಲಾಭದಲ್ಲಿ ಕಚ್ಚಾವಸ್ತು ಖರೀದಿಸುವಿರಿ.
ಮಕರ
ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾದವರನ್ನು ಆ ಜಾಲದಿಂದ ಹೊರ ತರಲು ವಿಧ ವಿಧವಾದ ಪ್ರಯತ್ನ ನಡೆಸುವಿರಿ. ಚಿನ್ನಾಭರಣಾವನ್ನು ಅಥವ ಬೆಳ್ಳಿಯಸಾಮಗ್ರಿಗಳನ್ನು ಖರೀದಿಸುವ ಸಾಧ್ಯತೆ ಇದೆ. ಮರೆವಿನಿಂದ ಕಷ್ಟಗಳಾಗುವವು.
ಕುಂಭ
ಸಮಾರಂಭ ಒಂದರಲ್ಲಿ ಬಂದಂಥ ಉಡುಗೊರೆಗಳನ್ನು ನೋಡುವ ಸಾಧ್ಯತೆ ಇದೆ. ಆಕಾಶ ವೀಕ್ಷಣೆ  ನಿಯಮಬದ್ಧವಾಗಿ ಮಾಡುವವರಿಗೆ ಉತ್ತಮಜತೆಗಾರರೊಬ್ಬರು ದೊರೆಯಲಿದ್ದಾರೆ. ಮಾತು ಕಡಿಮೆ ಆಡಿದಷ್ಟೂ ಒಳ್ಳೆಯದಾಗುತ್ತದೆ.
ಮೀನ
 ಸಣ್ಣ ವಯಸ್ಸಿಗೆ ವಯಸ್ಸನ್ನು ಮೀರಿದ ಜವಾಬ್ದಾರಿಯನ್ನು ಹೊರಬೇಕಾದಂತಹ ಸಂದರ್ಭ ಬರುತ್ತದೆ. ಯಾವುದೇ ಸವಾಲುಗಳು ಎದುರಾದದರು ಬುದ್ಧಿವಂತಿಕೆ ಹಾಗೂ ಧೈರ್ಯದಿಂದ ಅದನ್ನು ಎದುರಿಸುವಿರಿ.