ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ:ಈ ರಾಶಿಯ ಉದ್ಯೋಗಾಕಾಂಕ್ಷಿಗಳಿಗೆ ಖಾಸಗಿ ಸಂಸ್ಥೆಯಲ್ಲಿ ನೌಕರಿ ಸಿಗಲಿದೆ
Published 26 ಸೆಪ್ಟೆಂಬರ್ 2024, 19:02 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಿನಿಮಾ ರಂಗದವರು ಮತ್ತು ಜವಳಿ ವ್ಯಾಪಾರಿಗಳು ನೂತನ ಯೋಜನೆಗೆ ಹೂಡಿಕೆ ಮಾಡುವುದು ಉತ್ತಮವಲ್ಲ. ಉದ್ಯೋಗಾಕಾಂಕ್ಷಿಗಳಿಗೆ ಖಾಸಗಿ ಸಂಸ್ಥೆಯಲ್ಲಿ ನೌಕರಿ ಸಿಗಲಿದೆ. ತಾಯಿಯ ಆರೋಗ್ಯ ಸುಧಾರಿಸಲಿದೆ.
ವೃಷಭ
ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ. ಇಂದು ನಡೆಯುವ ಘಟನೆಯಿಂದಾಗಿ ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕೆಂಬುದು ನಿಮ್ಮ ಅರಿವಿಗೆ ಬರಲಿದೆ. ಆಸ್ತಿ ಸಂಬಂಧಿತ ಕೆಲಸಗಳು ಸರಾಗವಾಗಿ ನಡೆಯಲಿವೆ.
ಮಿಥುನ
ಚಿತ್ರರಂಗದವರಿಗೆ ಖ್ಯಾತಿ, ನೂತನ ಅವಕಾಶಗಳು ದೊರೆಯಲಿವೆ. ಬದಲಾಗುವ ಬದುಕಿನ ಗತಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವಿ ಆಗುವಿರಿ. ಚರ್ಮದ ವಸ್ತುಗಳ ಮಾರಾಟದಿಂದ ಲಾಭವಾಗುತ್ತದೆ.
ಕರ್ಕಾಟಕ
ಸಂಗೀತ, ಸಾಹಿತ್ಯ, ಚಿತ್ರರಂಗದ ಕಲಾವಿದರಿಗೆ ಕೈತುಂಬಾ ಕೆಲಸವಿದ್ದರೂ ಶ್ರಮಕ್ಕೆ ತಕ್ಕ ಆರ್ಥಿಕ ಪ್ರತಿಫಲ ಸಿಗಲಾರದು. ಮಸಾಲೆ ಪದಾರ್ಥಗಳ ಮಾರಾಟಗಾರರಿಗೆ ಹೆಚ್ಚಿನ ಬೇಡಿಕೆ ಬರಲಿದೆ.
ಸಿಂಹ
ನಿಮ್ಮ ಗೋಪ್ಯ ವಿಚಾರವೊಂದು ಕುಟುಂಬದವರ ಗಮನಕ್ಕೆ ಬರಲಿದೆ. ಸಹಚರರಿಂದ ಅಥವಾ ಅಧಿಕಾರಿಗಳಿಂದ ಅಸಹಕಾರದ ಪರಿಸ್ಥಿತಿ ಎದುರಾಗಬಹುದು. ಶ್ರಮಕ್ಕೆ ತಕ್ಕ ಪ್ರತಿಫಲ ಶೀಘ್ರ ದೊರೆಯಲಿದೆ.
ಕನ್ಯಾ
ಹಿರಿಯ ಅಧಿಕಾರಿಗಳೊಬ್ಬರ ಭೇಟಿಯಿಂದ ಎಲ್ಲ ಕಾರ್ಯಗಳು ಸರಾಗವಾಗಿ ನಡೆಯಲಿವೆ. ಸ್ತ್ರೀಯರಿಗೆ ಗೌರವ, ಮನ್ನಣೆ ದೊರೆಯಲಿದೆ. ರೈತಾಪಿ ವರ್ಗದವರಿಗೆ ಈ ದಿನದ ವಾತಾವರಣ ಉಪಕಾರಿಯಾಗುವುದು.
ತುಲಾ
ಷೇರು ಮಾರುಕಟ್ಟೆಯಲ್ಲಿನ ಬದಲಾವಣೆಗಳನ್ನು ಗಮನಿಸಿ ನೀವು ತೆಗೆದುಕೊಂಡಂತಹ ತೀರ್ಮಾನ ಸರಿಯಾದದ್ದಾಗಲಿದೆ. ಕೊಟ್ಟ ಮಾತಿನಂತೆ ಕೆಲಸ ನೆರವೇರಿಸಿ ಕೊಡುವುದರಿಂದ ಹೆಸರು ಗಳಿಸಬಹುದು.
ವೃಶ್ಚಿಕ
ಏಕಾಗ್ರತೆಯಿಂದ ಎಲ್ಲ ಕೆಲಸಗಳನ್ನು ಸಾಧಿಸಲು ಯತ್ನಿಸುವುದರಿಂದ ಯಶಸ್ಸು ಸಿಗುವುದು. ಪರೀಕ್ಷಾ ಅಧಿಕಾರಿಗಳು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಬಹುದು.
ಧನು
ಇಂದಿನ ದಿನಚರಿಯನ್ನು ಹೊರತು ಪಡಿಸಿದ ಕೆಲಸಗಳತ್ತ ನಿಮ್ಮ ಮನಸ್ಸು ಹರಿಯಲಿದೆ. ಆಡಳಿತಾತ್ಮಕ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮ ದಿನವಾಗಿದ್ದು, ಸಂತಸ ಮೂಡಲಿದೆ.
ಮಕರ
ವೃತ್ತಿರಂಗದಲ್ಲಿ ಅಕಸ್ಮಿಕವಾಗಿ ಘಟಿಸುವ ಕೆಲವು ಬದಲಾವಣೆಗಳಿಂದ ಹೆಚ್ಚಿನ ಅನುಕೂಲಗಳು ಸೃಷ್ಟಿಯಾಗಲಿವೆ. ನಿಮ್ಮ ಆಶಾವಾದಕ್ಕೆ ಪುಷ್ಟಿ ದೊರಕುವ ಘಟನೆಗಳು ನಡೆಯಲಿವೆ.
ಕುಂಭ
ಗಿಡ ಮೂಲಿಕೆ ಔಷಧದ ಬಳಕೆಯಿಂದ ಪತ್ನಿಯ ಆರೋಗ್ಯ ಸಾಕಷ್ಟು ಸುಧಾರಿಸಲಿದೆ. ವೃತ್ತಿ ರಂಗದಲ್ಲಿ ನಿಮ್ಮ ಕಾರ್ಯ ವೈಖರಿಗೆ ಎಲ್ಲರಿಂದ ಮೆಚ್ಚುಗೆ ಸಿಗಲಿದೆ. ಹಣಕಾಸು ವಿಚಾರದಲ್ಲಿ ಬಿಗಿ ನಿಲುವು ಉತ್ತಮ.
ಮೀನ
ಹಠದ ಸ್ವಭಾವದಿಂದ ಸವಾಲಿನ ಪರಿಸ್ಥಿತಿ ನಿರ್ಮಾಣವಾಗಬಹುದು. ಹಣಕಾಸಿನ ವಿಷಯದಲ್ಲಿ ಯಾವುದೇ ರೀತಿಯ ತೊಂದರೆ ಕಾಣಿಸದು. ಗುರಿ ಸಾಧನೆಗೆ ತಂದೆಯ ಆಶೀರ್ವಾದ ಸಿಗಲಿದೆ.
ADVERTISEMENT
ADVERTISEMENT