ಗುರುವಾರ, 12 ಫೆಬ್ರುವರಿ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಸಜ್ಜನರ ಒಡನಾಟದಿಂದ ಯಶೋಭಿವೃದ್ಧಿ ಉಂಟಾಗಲಿದೆ..
Published 29 ಮೇ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಂಬಂಧಿಕರ ವಲಯದಲ್ಲಿ  ತಪ್ಪು  ಅಭಿಪ್ರಾಯಗಳು ದೂರಾಗಲಿವೆ. ಹೊಸಮನೆಯ ಅಲಂಕಾರಕ್ಕಾಗಿ ಹೆಚ್ಚಿನ ವಸ್ತುಗಳನ್ನು ಕೊಳ್ಳುವಿರಿ. ಕಾರ್ಮಿಕ ವರ್ಗದವರಿಗೆ ಪರಿಶ್ರಮದಿಂದ ಹೆಚ್ಚಿನ ಆದಾಯ ಉಂಟಾಗಲಿದೆ.
ವೃಷಭ
ವಿಚಾರಗಳನ್ನು ವಿವಾದಕ್ಕೊಳಗಾಗದಂತೆ ಅರ್ಥ ಮಾಡಿಸುವಲ್ಲಿ ಯಶಸ್ವಿಯಾಗುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿನ ಪ್ರಗತಿ ಕಂಡು ಮನೆಯವರಿಗೆಲ್ಲ ಸಮಾಧಾನ. ಕೆಲಸಗಳೆಲ್ಲವೂ ತನ್ನಷ್ಟಕ್ಕೆ ತಾನೆಯೇ ಪೂರ್ಣಗೊಳ್ಳುವುದು.
ಮಿಥುನ
ಸಮಸ್ಯೆಗಳನ್ನು ನಾಜೂಕಾಗಿ ಬಗೆಹರಿಸಿಕೊಳ್ಳುವ ಬಗ್ಗೆ ಗಮನ ನೀಡಿ. ಕುಶಲಕರ್ಮಿಗಳಿಗೆ ಪ್ರದರ್ಶನ ಮಾರಾಟಗಳಿಂದ ಅಧಿಕ ಆದಾಯವಿರುವುದು. ಲೇವಾದೇವಿ ವ್ಯವಹಾರದಲ್ಲಿ ವಿಚಾರಿಸಿ ತೀರ್ಮಾನ ಕೈಗೊಳ್ಳುವುದು ಉತ್ತಮ.
ಕರ್ಕಾಟಕ
ಈ ದಿನ ರಾಜಕೀಯ ವ್ಯಕ್ತಿಗಳಿಗೆ ಸ್ಥಾನ ಬಲಪಡಿಸುವ ಕಾರ್ಯದಲ್ಲಿ ಹಿರಿಯ ಅಧಿಕಾರಿಗಳಿಂದ ಬಹಳ ಉಪಯೋಗವಾಗಲಿದೆ. ಇಂದು ಮನಸ್ಸನ್ನು ಜಾಗ್ರತೆಯಾಗಿ ಇಟ್ಟುಕೊಳ್ಳಿ. ಷೇರು ವ್ಯವಹಾರಗಳಿಂದ ಲಾಭ ಬರುವುದು.
ಸಿಂಹ
ಮನೆಯಲ್ಲಿ ನಡೆಯಬೇಕಾದ ಮಂಗಳ ಕಾರ್ಯದ ಕುರಿತು ಹಿರಿಯರೊಂದಿಗೆ  ಸಮಾಲೋಚನೆ ನಡೆಸುವಿರಿ. ಲಾಭ ತರುವ ಅವಕಾಶ ನೀಡುವ ವ್ಯಕ್ತಿಗಳ ಸ್ನೇಹ ಸಂಪಾದನೆ ಆಗಲಿದೆ.
ಕನ್ಯಾ
ಆರ್ಥಿಕ ಸ್ಥಿತಿಯಲ್ಲಿ ಮತ್ತು ಉದ್ಯೋಗದಲ್ಲಿ ಏರಿಳಿತದ ನಡುವೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇದೆ. ವಾಹನ ಮಾರಾಟಗಾರರಿಗೆ ಉದ್ಯೋಗದಲ್ಲಿ ಬಿಡುವಿಲ್ಲದ ಕಾರ್ಯ. ವಿದೇಶಕ್ಕೆ ತೆರಳುವ ಅವಕಾಶ ಒದಗಲಿದೆ.
ತುಲಾ
ಪಾಲುದಾರಿಕೆ ವಿಷಯವಾಗಿ ಕೌಟುಂಬಿಕ ಕಲಹಗಳು ಆಗಾಗ ಗೋಚರಕ್ಕೆ ಬಂದಾವು. ನ್ಯಾಯಾಲಯದ ಮೊರೆ ಹೋಗುವಂಥ ಕೃತ್ಯಗಳು ನಡೆಯಲಿವೆ. ಸಜ್ಜನರ ಒಡನಾಟದಿಂದ ಯಶೋಭಿವೃದ್ಧಿ ಉಂಟಾಗಲಿದೆ.
ವೃಶ್ಚಿಕ
ಹೂವು-ಹಣ್ಣು, ತರಕಾರಿಗಳ ಮಾರಾಟಗಾರರಿಗೆ ತಾವು ನಿರೀಕ್ಷಿಸಿದಕ್ಕಿಂತ ಲಾಭವನ್ನು ವ್ಯಾಪಾರದಲ್ಲಿ ಪಡೆದಕೊಳ್ಳುವುದರಿಂದ ಸಂತೋಷ ಇರುವುದು. ದಾಂಪತ್ಯದಲ್ಲಿ ಹೊಂದಾಣಿಕೆಯಿಂದ ಜೀವನ ಹಸನಾಗಲಿದೆ.
ಧನು
ಋಣಬಾಧೆಯಿಂದ ಮುಕ್ತರಾಗಲು ಗಮನ ನೀಡಿ. ವಸ್ತ್ರ ವಿನ್ಯಾಸ, ಚಿತ್ರಕಲೆ, ಕಥೆ-ಕವನಗಳ ಬರವಣಿಗೆಯಲ್ಲಿ ಹೆಚ್ಚಿನ ಆಸಕ್ತಿ ಮೂಡಲಿದೆ. ಮಲ್ಲಿಕಾರ್ಜುನನ ಅನುಗ್ರಹ ಸಂಪಾದಿಸಿ.
ಮಕರ
ಕೆಲಸಗಳನ್ನು ಸಮರ್ಪಕವಾಗಿ ಮಾಡಿದ ತೃಪ್ತಿಕರ ಭಾವ ಉಂಟಾಗಲಿದೆ. ದಿನದಲ್ಲಿ ಅಧಿಕ ಸಮಯ ಸಂತೋಷವಿರುವುದು. ಸಂಘ ಸಂಸ್ಥೆಗಳ ಪದಾಧಿಕಾರ ಆಕಸ್ಮಿಕವಾಗಿ ದೊರಕುವ ಸಂಭವವಿದೆ.
ಕುಂಭ
ಸ್ವಯಂ ಸಾಮರ್ಥ್ಯದ ಬಗ್ಗೆ  ವಿಶ್ವಾಸವಿರಲಿ.  ಮಾನಸಿಕ ವ್ಯಥೆಗಳು ನಿವಾರಣೆಯಾಗಲಿವೆ. ಉದ್ಯೋಗದಲ್ಲಿ ಸಿಗುವಂಥ ವರ್ಗಾವಣೆಯ ಅವಕಾಶಗಳನ್ನು ಬಿಡಬೇಡಿ.
ಮೀನ
ಉದಯೋನ್ಮುಖ ತಾರೆಯರಿಗೆ ಮತ್ತು ಕಲಾವಿದರಿಗೆ ಅವಕಾಶ ಲಭಿಸಲಿದೆ. ಹಿಂದಿನ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವ ಬಗ್ಗೆ ಗಮನ ನೀಡಿ.   ನೆರೆಹೊರೆಯವರ ಕಿರಿಕಿರಿ ತಪ್ಪದು.
ADVERTISEMENT
ADVERTISEMENT