ಬುಧವಾರ, 22 ಏಪ್ರಿಲ್ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ವೃತ್ತಿಯಲ್ಲಿ ಎಚ್ಚರವಹಿಸುವುದು ಲೇಸು
Published 8 ಮಾರ್ಚ್ 2026, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಯಾವುದೇ ವಾದ ವಿವಾದಗಳು ನಡೆದರೂ ಕಾರ್ಯಸಾಧನೆಗೆ  ಅಡ್ಡಿಯಾಗಲಾರದು. ದ್ವಂದ್ವ ರೀತಿಯ ಆಲೋಚನೆಗಳಿಂದ ನಿರ್ಧಾರ ಕೈಗೊಳ್ಳುವಲ್ಲಿ ವಿಳಂಬವು ಮುಂದುವರಿಯುವುದು.
ವೃಷಭ
ದೂರ ದೃಷ್ಟಿ ಇಟ್ಟುಕೊಂಡು ಪ್ರಪಂಚದ ಓಟಕ್ಕೆ ಸರಿಯಾಗಿ ಕಾರ್ಯಪ್ರವೃತ್ತರಾಗುವುದು ಉತ್ತಮ. ಸಾಲದ ರೂಪದಲ್ಲಿ ಯಾರಿಗೂ ಹಣ ನೀಡಬೇಡಿ. ಅತಿಥಿಗಳ ಆಗಮನ ಸಂತಸ ತಂದೀತು.
ಮಿಥುನ
ಹೊಸ ಹೂಡಿಕೆ ಮತ್ತು ಒಪ್ಪಂದ ನಿಶ್ಚಿತ ಹಂತ ತಲುಪಿದ್ದಕ್ಕೆ ಸಂತೃಪ್ತಿಯ ಭಾವವಿರುವುದು. ಧಾರ್ಮಿಕ ವಿಚಾರಗಳತ್ತ ಮನಸ್ಸು ಹರಿಯುವುದು. ಅತಿಥಿ ಸತ್ಕಾರದಂಥ ಕಾರ್ಯವನ್ನು ಕೈಗೊಳ್ಳಬಹುದು.
ಕರ್ಕಾಟಕ
ವಿಜಯ ನಿಮ್ಮದೇ ಆದ್ದರಿಂದ ನೂತನ ಚರ ಅಥವಾ ಸ್ಥಿರ ಆಸ್ತಿ ಸಂಪಾದಿಸುವ ಬಗ್ಗೆ  ಪ್ರಯತ್ನವಿರಲಿ.ವಿದ್ಯುತ್ ಇಲಾಖೆ ಸಿಬ್ಬಂದಿಗೆ ತುರ್ತು ಕೆಲಸಗಳ ನಿರ್ವಹಣೆ ಹೆಚ್ಚಾಗಲಿದೆ.
ಸಿಂಹ
ನೂತನವಾಗಿ ಪರಿಚಯವಾದ ರಾಜಕೀಯ ವ್ಯಕ್ತಿಯೊಂದಿಗೆ ಸಂಬಂಧವು ಉತ್ತಮಗೊಳ್ಳುವುದು. ಗುರುಗಳ ಮಾರ್ಗದರ್ಶನದ ಮಹತ್ವ ತಿಳಿಯುವುದು. ಒದಗಿಬರುವ ಅವಕಾಶಗಳು  ಅನುಕೂಲವಾಗಿರುವುದು.
ಕನ್ಯಾ
ಉನ್ನತ ವ್ಯಾಸಂಗ ಮಾಡುತ್ತಿರುವವರಿಗೆ ಉದ್ಯೋಗದ ಬಗ್ಗೆ ಆಸಕ್ತಿ ಹೆಚ್ಚುವುದು, ಆದರೆ ವಿದ್ಯಾಭ್ಯಾಸ ನಿಲ್ಲಿಸುವುದು ಸರಿಯಲ್ಲ. ವೃತ್ತಿಯಲ್ಲಿ ಸಮಸ್ಯೆಗಳು ಬಂದರೂ ಧೈರ್ಯದಿಂದ ಎದುರಿಸಲು ಹಿಂಜರಿಕೆ ಬೇಡ.
ತುಲಾ
ಜವಾಬ್ದಾರಿಯುತ ಹುದ್ದೆಯನ್ನು ಅಲಂಕರಿಸಲು ಅವಕಾಶ ಇದ್ದರೂ ಸಾಮರ್ಥ್ಯದ ಕೊರತೆ ಕಾಣುವುದು. ಉದ್ಯೋಗದ ಕಾರಣ ಪರಸ್ಥಳದಲ್ಲಿ ವಾಸ ಮಾಡುವ ಅನಿವಾರ್ಯತೆ ಬರಬಹುದು.
ವೃಶ್ಚಿಕ
ಹಣದ ವಿಚಾರದಲ್ಲಿ ಸರಿಯಾಗಿ ಲೆಕ್ಕ ಪತ್ರವನ್ನು ಕಾಪಾಡುವುದು ಅಗತ್ಯ. ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಂದರ್ಶನಕ್ಕಾಗಿ  ಪೂರ್ವ ತಯಾರಿ  ಮಾಡಿಕೊಳ್ಳಿರಿ. ವೃತ್ತಿಯಲ್ಲಿ ಎಚ್ಚರವಹಿಸುವುದು ಲೇಸು.
ಧನು
ಜೀವನದಲ್ಲಿ ಉನ್ನತವಾದ ಸ್ಥಾನ ಅಲಂಕರಿಸಬೇಕು ಎಂಬ ಉತ್ಕಟ ಅಭಿಲಾಷೆ ಕಾಣುವುದು. ಕೈಗಾರಿಕೆ ಹಾಗೂ ವಾಣಿಜ್ಯ ಉದ್ಯಮದ ಸುಧಾರಣೆಗೆ ಸಾಕಷ್ಟು ಅವಕಾಶಗಳು ಒದಗಿ ಬರಲಿವೆ.
ಮಕರ
ಸ್ವಾರ್ಥದ ಕೆಲವು ನಿರ್ಧಾರದ ಫಲವಾಗಿ ಆತ್ಮೀಯರು ದೂರಾಗಲಿದ್ದಾರೆ. ಮನರಂಜನೆಗಾಗಿ ಹಣ ವ್ಯಯ ಮಾಡುವುದು ಸರಿಯಲ್ಲ. ಮನಸ್ಸಿನ ಅಸ್ಥಿರತೆ  ಅಧ್ಯಾತ್ಮ ಚಿಂತನೆಗೆ ತೊಂದರೆ ಮಾಡಲಿದೆ.
ಕುಂಭ
ನೆಮ್ಮದಿಗಾಗಿ ಜಗವನ್ನು ಬೆಳಗುವ ಸೂರ್ಯನಾರಾಯಣನನ್ನು ನಮಸ್ಕರಿಸಿ, ಪ್ರಾರ್ಥಿಸಿ. ಕಾನೂನು ಕಾಯಿದೆ ವಿಚಾರದಲ್ಲಿ ಹೋರಾಟ ನಡೆಸಿದರೆ ಜಯ ಸಿಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ತೋರಿ.
ಮೀನ
ದಾಂಪತ್ಯದಲ್ಲಿ ವಿಚಾರಗಳನ್ನು ಹಂಚಿಕೊಳ್ಳುವುದು ಸಮಸ್ಯೆ ಬಾರದಂತೆ ಕಾಪಾಡುತ್ತದೆ. ಕುಟುಂಬದಲ್ಲಿ ನೆಮ್ಮದಿ ಕಾಪಾಡಿಕೊಳ್ಳಲು ಹೆಂಡತಿಯ ಮಾತುಗಳಿಗೆ ಆದ್ಯತೆ ನೀಡಿರಿ.
ADVERTISEMENT
ADVERTISEMENT