ಬುಧವಾರ, 22 ಏಪ್ರಿಲ್ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ಅವಿವಾಹಿತರಿಗೆ ಕಂಕಣ ಭಾಗ್ಯ ಪ್ರಾಪ್ತಿಯಾಗಲಿದೆ
Published 14 ಮಾರ್ಚ್ 2026, 23:57 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಣ್ಣ ಸಣ್ಣ ಕಾರಣಗಳಿಗೆ ಅಥವಾ ಕಾರಣಗಳೇ ಇಲ್ಲದೇ ಅಕ್ಕ-ತಂಗಿಯರಲ್ಲಿ ಕಲಹ ಉಂಟಾಗಬಹುದು. ಹೂಡಿಕೆ ಅಥವಾ ಆಸ್ತಿ ಕೊಳ್ಳುವ ವಿಚಾರವನ್ನು ಮಡದಿಯೊಂದಿಗೆ ಪ್ರಸ್ತಾಪಿಸುವುದು ಫಲಕಾರಿ
ವೃಷಭ
ವೈದ್ಯಕೀಯ ಖರ್ಚಿನ ಹಣವನ್ನು ಸಂಸ್ಥೆಯಿಂದ ಪಡೆದುಕೊಳ್ಳುವಂತಾಗುವುದು. ಕೃಷಿಕರು, ವ್ಯಾಪಾರಸ್ಥರು ದಲ್ಲಾಳಿಗಳಿಂದ ಮೋಸ ಹೋಗುವ ಸ್ಥಿತಿ ಬರುವುದು ಎಚ್ಚರ. ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿ ಲಾಭವಿರುವುದು
ಮಿಥುನ
ಅವಕಾಶಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸುವ ಮನಃಸ್ಥಿತಿಯನ್ನು ಬೆಳಸಿಕೊಳ್ಳಿ. ಹೃದಯಕ್ಕೆ ಸಂಬಂಧಪಟ್ಟಂತಹ ಸಮಸ್ಯೆಗಳು ಬಾಧಿಸಬಹುದು ಆದ್ದರಿಂದ ಎಚ್ಚರಿಕೆ ವಹಿಸಿ
ಕರ್ಕಾಟಕ
ಕುಟುಂಬದಲ್ಲಿನ ವೈಮನಸ್ಸು, ಭಿನ್ನಾಭಿಪ್ರಾಯಗಳು ದೂರಾಗಲಿವೆ. ಪತ್ರಿಕೆಯವರ ಸಹಕಾರದಿಂದ ಬಟ್ಟೆ ವ್ಯಾಪಾರಿಗಳು ರಿಯಾಯಿತಿ ದರದ ವ್ಯಾಪಾರದ ಕುರಿತು ಹೆಚ್ಚಿನ ಪ್ರಚಾರ ಪಡೆಯಬಹುದು
ಸಿಂಹ
ಇಲೆಕ್ಟ್ರಿಕಲ್ ಕಂಟ್ರಾಕ್ಟರುಗಳಿಗೆ ಉತ್ತಮ ಅವಕಾಶಗಳು ಸಿಗಲಿವೆ. ಅದೇ ರೀತಿ ಅಪಾಯದ ಸೂಚನೆಯೂ ಇದೆ. ಇಂದು ಯಾವುದೇ ಕೆಲಸವನ್ನು ಮಾಡಿದರೂ ಆಲೋಚಿಸಿ ಮಾಡುವುದು ಒಳ್ಳೆಯದು
ಕನ್ಯಾ
ಮಿತ್ರರಲ್ಲಿ ನಿಷ್ಠೆಯ ಸ್ನೇಹವೂ, ಬಂಧುಗಳಲ್ಲಿ ಸಹಕರಿಸುವ ಸಂಬಂಧವನ್ನು ಉಳಿಸಿಕೊಂಡು ಹೋಗುವುದು ಇಹಕ್ಕೂ ಹಾಗು ಪರಕ್ಕೂ ಒಳಿತು. ಮನೆಯಲ್ಲಿ ದೇವತಾ ಕಾರ್ಯಗಳನ್ನು ನಡೆಸುವ ಬಗ್ಗೆ ಯೋಚಿಸಿ
ತುಲಾ
ನೀವು ತೋರಿದ ಸಾಮಾಜಿಕ ಕಳಕಳಿಗಾಗಿ ಸಂಘ– ಸಂಸ್ಥೆಗಳವರು ನಿಮ್ಮನ್ನು ಸಮಾಜದ ಆಸ್ತಿ ಎಂದು ಪರಿಗಣಿಸಲಿದ್ದಾರೆ. ನಿಮ್ಮ ಉಸ್ತುವಾರಿಯಲ್ಲಿ ಶುಭ ಕಾರ್ಯವು ನಿರ್ವಿಘ್ನವಾಗಿ ನಡೆಯುವುದು
ವೃಶ್ಚಿಕ
ಬೆಳ್ಳಿ-ಬಂಗಾರದ ಮಾರಾಟಗಾರರಿಗೆ ಉದ್ಯೋಗದಲ್ಲಿ ಬಿಡುವಿಲ್ಲದಂತಹ ವ್ಯಾಪಾರ. ನೀವು ನಿಮ್ಮ ಕಾರ್ಯಕ್ಷೇತ್ರದಲ್ಲಿ ಪರಿಣಾಮಕಾರಿಯಾದ ಬದಲಾವಣೆ ಉಂಟು ಮಾಡಲಿದ್ದೀರಿ. ಚಿತ್ರಕಲೆ ಮತ್ತು ಸಾಹಿತ್ಯಕಾರರಿಗೆ ಶುಭವಾರ್ತೆ ಬರಲಿದೆ
ಧನು
ವ್ಯವಹಾರದ ಪ್ರಯುಕ್ತ ಇರುವ ಪ್ರವಾಸವು ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಪ್ರಗತಿಯನ್ನೂ, ಅನಿರೀಕ್ಷಿತ ಲಾಭವನ್ನೂ ತಂದು ಕೊಡುವುದು. ಕೃಷಿ ಕೆಲಸಗಳು ಸಮರ್ಪಕವಾಗಿ ನಡೆದು ಮನಸ್ಸಿಗೆ ನೆಮ್ಮದಿ ಇರುವುದು
ಮಕರ
ತುಂಬಾ ದಿನಗಳಿಂದ ಬರಬೇಕಿದ್ದ ಹಣ ಇಂದು ನಿಮ್ಮ ಕೈ ಸೇರಲಿದೆ. ಉಳಿತಾಯದ ಹಣವನ್ನು ಸುವ್ಯವಸ್ಥಿತವಾಗಿ ಇರಿಸಲು ಬೇಕಾದ ಮಾರ್ಗವನ್ನು ತಿಳಿದುಕೊಳ್ಳಿ. ಅವಿವಾಹಿತರಿಗೆ ಕಂಕಣ ಭಾಗ್ಯ ಪ್ರಾಪ್ತಿಯಾಗಲಿದೆ
ಕುಂಭ
ಇನ್ನೊಬ್ಬರಿಗೆ ಮೋಸ ಮಾಡುವ ಮನಃಸ್ಥಿತಿಯನ್ನು ದೂರಮಾಡಿಕೊಂಡು ಜೀವನ ನೆಡೆಸಿ. ನಿಮ್ಮ ದುರಾಲೋಚನೆಗಳನ್ನು ಬದಲಿಸಿಕೊಳ್ಳುವ ಸಮಯ ಈ ದಿನವಾಗಿದೆ. ನಿರೀಕ್ಷಿತ ಕಡೆಗಳಿಂದ ಹಣ ಒದಗಿ ಬರುವುದು
ಮೀನ
ದಿನಸಿ ವರ್ತಕರಿಗೆ ಹೋಟೆಲ್ ಉದ್ಯಮದವರಿಗೆ ವ್ಯಾಪಾರ ಹೆಚ್ಚಿರಲಿದೆ. ಚಾಣಾಕ್ಷತನದ ನಿರ್ಧಾರಗಳು ನಿಮ್ಮನ್ನು ಊರಿನ ಪ್ರಮುಖ ವ್ಯಕ್ತಿಯನ್ನಾಗಿ ಮಾಡಲಿದೆ. ಕಾರ್ಯ ಒಪ್ಪಂದದ ಬಗ್ಗೆ ದೃಢ ನಿರ್ಧಾರ ಮಾಡಿ
ADVERTISEMENT
ADVERTISEMENT