ದಿನ ಭವಿಷ್ಯ: ಈ ರಾಶಿಯವರು ನಗದು ವ್ಯವಹಾರಗಳಲ್ಲಿ ಮೋಸ ಹೋಗುವಿರಿ, ಎಚ್ಚರವಹಿಸಿ
Published 14 ಏಪ್ರಿಲ್ 2026, 21:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕಂಪ್ಯೂಟರ್‌ನ ಬಿಡಿ ಭಾಗಗಳಂತಹ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟಗಾರರಿಗೆ ಮತ್ತು ರಿಪೇರಿ ಮಾಡುವವರಿಗೆ ಅಧಿಕ ಆದಾಯ. ಮಾನಸಿಕ ಅಸ್ಥಿರತೆಯಿಂದ ಕಾರ್ಯಗಳಲ್ಲಿದ್ದ ಉದಾಸೀನತೆ ದೂರಾಗಲಿದೆ.
14 ಏಪ್ರಿಲ್ 2026, 21:30 IST
ವೃಷಭ
ಕೆಲಸದಲ್ಲಿ ಎಲ್ಲರನ್ನು ಜತೆಗೂಡಿಸಿಕೊಂಡು ಗುಂಪಾಗಿ ಕೆಲಸ ನಿರ್ವಹಿಸುವುದರಿಂದ ಶೀಘ್ರ ಮುಗಿಸುವಿರಿ. ನಿರ್ದಿಷ್ಟ ಗುರಿ ಮತ್ತು ಕಠಿಣ ಶ್ರಮ ಯಶಸ್ಸಿನತ್ತ ಕೊಂಡೊಯ್ಯಲಿದೆ. ಮಾತಿನ ಕೌಶಲದಿಂದ ಕಾರ್ಯಸಾಧನೆ.
14 ಏಪ್ರಿಲ್ 2026, 21:30 IST
ಮಿಥುನ
ಜಮೀನು ಖರೀದಿ ಅಥವಾ ನಿವೇಶನಗಳ ಖರೀದಿಯವ್ಯವಹಾರಗಳಿಂದ ಲಾಭ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಜವಾಬ್ದಾರಿ ನಿಭಾಯಿಸಲು ಶ್ರಮಪಡಬೇಕಾಗಿಲ್ಲ.
14 ಏಪ್ರಿಲ್ 2026, 21:30 IST
ಕರ್ಕಾಟಕ
ವಾಹನ ಮಾರಾಟದ ಯೋಚನೆಯಲ್ಲಿರುವವರು ಆ ಯೋಚನೆಯನ್ನು ಸದ್ಯದ ಮಟ್ಟಿಗೆ ಕೈಬಿಡುವುದೇ ಸರಿಯಾದ ಮಾರ್ಗ. ಸಮಸ್ಯೆಗಳನ್ನು ಸ್ನೇಹಿತರೊಂದಿಗೆ ಚರ್ಚಿಸಿದಲ್ಲಿ ಪರಿಹಾರ ಸಿಗಲಿದೆ
14 ಏಪ್ರಿಲ್ 2026, 21:30 IST
ಸಿಂಹ
ಬಳಕೆಯ ಜ್ಞಾನದ ಕೊರತೆಯಿಂದಾಗಿ ಅಥವಾ ಅತಿಯಾದ ಬಳಕೆಯಿಂದಾಗಿ ವಸ್ತು ನಷ್ಟವಾಗಬಹುದು. ಶ್ರೇಯಸ್ಸು ನಿಮ್ಮನ್ನು ಹುಡುಕಿಕೊಂಡು ಬರುವುದರಿಂದ ಸಂತಸ ಸಿಗಲಿದೆ.
14 ಏಪ್ರಿಲ್ 2026, 21:30 IST
ಕನ್ಯಾ
ಸುತ್ತಮುತ್ತಲಿನ ಜನರು ನಾಟಕವನ್ನು ಮಾಡುತ್ತಿದ್ದಾರೆ ಎಂದು ತಿಳಿದರೂ ಏನೂ ಮಾಡದ ಪರಿಸ್ಥಿತಿಯನ್ನು ಹೊಂದುವಿರಿ. ಮನರಂಜನೆಗಾಗಿ ಅಧಿಕ ಮಟ್ಟದಲ್ಲಿ ಖರ್ಚು ಮಾಡುವಿರಿ. ಧನಾಗಮನ ನಿರಂತರವಾಗಿ ಇರಲಿದೆ.
14 ಏಪ್ರಿಲ್ 2026, 21:30 IST
ತುಲಾ
ಸಹವರ್ತಿಗಳ ಅಭಿಪ್ರಾಯಗಳನ್ನು ತಿರಸ್ಕರಿಸುವುದು ಸರಿಯಲ್ಲ, ಆಲಿಸಿ ಉಪಯೋಗಕ್ಕೆ ಬರುವ ಅಂಶವನ್ನು ಸ್ವೀಕರಿಸಿ. ಇಂದಿನ ಸಂತೋಷದ ಬಗ್ಗೆ ಗಮನ ಕೊಡುವುದಕ್ಕಿಂತ ಭವಿಷ್ಯದ ಬಗ್ಗೆ ಗಮನಹರಿಸಿ. ಪರಿವರ್ತನೆಗೆ ಸಕಾಲ.
14 ಏಪ್ರಿಲ್ 2026, 21:30 IST
ವೃಶ್ಚಿಕ
ವಿಚಾರಗಳನ್ನು ಭಿನ್ನ ದೃಷ್ಟಿಯಿಂದ ನೋಡುವ ಅಭ್ಯಾಸದಿಂದ ನಷ್ಟ ವಾಗುವ ವಿಚಾರದಲ್ಲಿ ಜವಾಬ್ದಾರಿವಹಿಸಬಹುದು. ಹಾಲು ಉತ್ಪನ್ನ ಪದಾರ್ಥಗಳ ಮಾರಾಟದಿಂದ ವರಮಾನ ಹೆಚ್ಚುವುದು.
14 ಏಪ್ರಿಲ್ 2026, 21:30 IST
ಧನು
ಕಥೆಗಾರರು, ಕಾದಂಬರಿಕಾರರು ಅನುಭವಕ್ಕೆ ಬರುವ ಘಟನೆಗಳನ್ನೆ ಬರವಣಿಗೆಯಲ್ಲಿ ತರುವ ಪ್ರಯತ್ನವನ್ನು ನಡೆಸಬಹುದು. ವೈವಾಹಿಕ ವಿಚಾರದಲ್ಲಿ ಮನೋಭಿಲಾಷೆಗಳನ್ನು ವ್ಯಕ್ತಪಡಿಸಲು ಹಿಂಜರಿಯಬೇಡಿ.
14 ಏಪ್ರಿಲ್ 2026, 21:30 IST
ಮಕರ
ಸಮಯವನ್ನು ಇನ್ನೊಬ್ಬರಿಗಾಗಿ ಬಳಸಬೇಕಾದ ಪರಿಸ್ಥಿತಿ ಎದುರಾಗುವ ಕಾರಣದಿಂದ ದೈನಂದಿನ ರೀತಿ ರಿವಾಜುಗಳನ್ನುಉಳಿಸಿಕೊಳ್ಳುವುದಕ್ಕೆ ವೇಗವಾಗಿ ಕೆಲಸ ಮಾಡಬೇಕಾಗುತ್ತದೆ.
14 ಏಪ್ರಿಲ್ 2026, 21:30 IST
ಕುಂಭ
ಜೀವನ ಶೈಲಿಯನ್ನು ಸುಸಂಸ್ಕೃತವಾಗಿ ಬದಲಾಯಿಸಿಕೊಳ್ಳಲು ಈ ದಿನ ದಿಂದ ಪ್ರಾರಂಭಿಸಿ. ಸದಾ ನಿಮ್ಮ ಬೆಂಬಲಕ್ಕೆ ನಿಲ್ಲುವ ಗೆಳೆಯನೊಬ್ಬ ಸಿಗಲಿದ್ದಾನೆ. ಕಫ ಪ್ರಕೃತಿಯ ದೇಹ ಹೊಂದಿದವರು ಆರೋಗ್ಯದದ ಬಗ್ಗೆ ಜಾಗ್ರತೆವಹಿಸಿ.
14 ಏಪ್ರಿಲ್ 2026, 21:30 IST
ಮೀನ
ದೈಹಿಕವಾಗಿ ಬಲಾಢ್ಯರಾಗಿರುವ ನಿಮಗೆ ಮಾನಸಿಕವಾಗಿ ದೊಡ್ಡ ಹೊಡೆತ ಬೀಳಲಿದೆ. ನಗದು ವ್ಯವಹಾರವನ್ನು ಮಾಡುವಲ್ಲಿ ಮೋಸ ಹೋಗುವ ಸಾಧ್ಯತೆಗಳಿವೆ. ಹಿರಿಯರು ಅಭ್ಯುದಯಕ್ಕಾಗಿ ಮಾರ್ಗದರ್ಶನ ನೀಡಲಿದ್ದಾರೆ.
14 ಏಪ್ರಿಲ್ 2026, 21:30 IST