ಮಂಗಳವಾರ, 21 ಏಪ್ರಿಲ್ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಸಹೋದ್ಯೋಗಿಗಳ ಮಾತಿನಂತೆ ನಡೆದುಕೊಳ್ಳುವುದು ಉತ್ತಮ
Published 7 ಏಪ್ರಿಲ್ 2026, 0:06 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮನೆಯ ಹತ್ತಿರದ ನೀವು ನಂಬುವ ದೇವಸ್ಥಾನದ ಸೇವೆ ಮಾಡುವುದರಿಂದ ಗೊಂದಲಗಳು ನಿವಾರಣೆಯಾಗಲಿವೆ. ರಾಸಾಯನಿಕ ವಸ್ತುಗಳ ಬಳಕೆಯಲ್ಲಿ ಜಾಗ್ರತೆ ಇರಲಿ.
ವೃಷಭ
ಕುಟುಂಬ ನಿರ್ವಹಣೆಯಲ್ಲಿ ಒಡಹುಟ್ಟಿದವರ ತಪ್ಪು ಕಲ್ಪನೆಗಳಿಗೆ ಆತ್ಮವಿಶ್ವಾಸದ ಮಾತುಗಳು ನಿಜವನ್ನು ತೋರಿಸಿಕೊಡುತ್ತವೆ. ಬುದ್ಧಿವಂತಿಕೆಯಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸುಗಳಿಸಿಕೊಳ್ಳುವಿರಿ. ಹಳದಿ ವಸ್ತ್ರ ಶುಭ ತರಲಿದೆ.
ಮಿಥುನ
ಭಾವನೆಗಳ ಜೊತೆಗೆ ಅಭಿಪ್ರಾಯವು ಬದಲಾಗುವ ಕಾಲ ಇದಾಗಿದೆ. ಹಾಗಾಗಿ ಯಾವುದೇ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ. ಸಂಸಾರದ ವಿಷಯಗಳತ್ತ ಗಮನ ಹರಿಸಿ.
ಕರ್ಕಾಟಕ
ವೃತ್ತಿ ಜೀವನದಲ್ಲಿ ಸಹೋದ್ಯೋಗಿಗಳ ಮಾತಿನಂತೆ ನಡೆದುಕೊಳ್ಳುವುದು ಉತ್ತಮ. ಕೈಗೊಂಡ ಪೂರ್ವನಿಯೋಜಿತ ಕಾರ್ಯಗಳೆಲ್ಲಾ ಉತ್ತಮ ರೀತಿಯಲ್ಲಿ ನಡೆದು ಹೋಗುವುದು.
ಸಿಂಹ
ಸಂಚಾರದ ವೃತ್ತಿಯಲ್ಲಿ ಅಧಿಕ ಶ್ರಮ ಮತ್ತು ಜವಾಬ್ದಾರಿಗಳಿದ್ದರೂ ಅದಕ್ಕೆ ತಕ್ಕ ಪ್ರತಿಫಲ ಹೊಂದುವಿರಿ. ಅಪರೂಪದ ಅವಕಾಶಗಳಿಂದ ವರ್ಚಸ್ಸನ್ನು ಬೆಳೆಸಿಕೊಳ್ಳುವಿರಿ.
ಕನ್ಯಾ
ಬಂಧುಗಳ ಟೀಕೆಯ ಮಾತುಗಳು ಸ್ವಂತ ವಾಹನ ಖರೀದಿಸುವ ಸನ್ನಿವೇಶಕ್ಕೆ ನಾಂದಿಯಾಗಲಿವೆ. ಗುರಿ ಸಾಧನೆಗಳ ಬಗ್ಗೆ ಲಕ್ಷ್ಯವಿರಿಸಲು ಮಕ್ಕಳಿಗೆ ಬುದ್ಧಿ ಹೇಳುವುದು ಒಳ್ಳೆಯದು. ಸಣ್ಣ ವಿಹಾರಕ್ಕೆ ತೆರಳುವಿರಿ.
ತುಲಾ
ವೃತ್ತಿರಂಗದಲ್ಲಿ ಹಿರಿಯ ಅಧಿಕಾರಿಗಳ ಒತ್ತಡದ ಮೇರೆಗೆ ಅನಿವಾರ್ಯ ಗ್ರಾಹಕರಿಗೆ ಮೋಸ ಮಾಡಬೇಕಾದ ಸಂದರ್ಭಗಳು ಎದುರಾಗಲಿವೆ. ಮರೆಯಲಾರದ ಘಟನೆಯೊಂದು ಸಂಗಾತಿಯೊಂದಿಗೆ ನಡೆಯಲಿದೆ.
ವೃಶ್ಚಿಕ
ಮಕ್ಕಳ ನಡವಳಿಕೆಯಿಂದ ಅಗೌರವಕ್ಕೆ ಕಾರಣವಾಗುವಿರಿ. ನೈತಿಕವಾಗಿ ಪರಸ್ಪರ ಬೆಂಬಲವಾಗಿರುವ ಸ್ನೇಹ ಸಂಬಂಧ ಮುಂದುವರಿಯಲಿದೆ. ಹೈನು ವ್ಯವಸಾಯದಲ್ಲಿ ಆದಾಯ ವೃದ್ಧಿ.
ಧನು
ಹಣಕಾಸಿನ ಕೊರತೆ ಇರುವುದಿಲ್ಲ. ವಿದೇಶಿ ವಸ್ತುಗಳ ಖರೀದಿಗೆ ಧನ ವ್ಯಯವಾಗುವುದನ್ನು ಕಡಿಮೆ ಮಾಡುವುದು ಉತ್ತಮ. ಲೆಕ್ಕಪರಿಶೋಧಕರಿಗೆ ಆದಾಯದಿಂದ ತೃಪ್ತಿ.
ಮಕರ
ಕುಟುಂಬದ ಆಸ್ತಿಯ ವಿಷಯಕ್ಕೆ ಸಂಬಂಧಿಸಿದಂತೆ ಮನಸ್ತಾಪ ಬರದಂತೆ ನೋಡಿಕೊಳ್ಳುವುದು ಉತ್ತಮ. ನೂತನ ದಂಪತಿಗೆ ಸಂಸಾರದಲ್ಲಿ ಸಂತೋಷದ ಅನುಭವ ಸಿಗಲಿದೆ. ರೋಮಾಂಚನಕಾರಿ ವಿಷಯಗಳು ಕಾದಿವೆ.
ಕುಂಭ
ನಂಬಿಕಸ್ಥರಿಂದ ಮೋಸ ಕೃತ್ಯಗಳು ನಡೆಯಲಿವೆ. ವ್ಯವಹಾರಗಳ ಬಗ್ಗೆ ನೀವೇ ಹೆಚ್ಚಿನ ಗಮನಹರಿಸುವುದು ಉತ್ತಮ. ನಾಯಕತ್ವದ ಹೊಣೆ ನಿಭಾಯಿಸುವುದು ಅನಿವಾರ್ಯ.
ಮೀನ
ಹಣವಂತರ ಸಹಾಯ ಹಸ್ತ ನಿಮ್ಮ ಮೇಲಿದೆ. ಮಂಗಳ ಕಾರ್ಯಗಳಿಗೆ ಹೆದರುವ ಅವಶ್ಯಕತೆ ಇಲ್ಲ. ಶಸ್ತ್ರ ವೈದ್ಯ ವೃತ್ತಿಯವರಿಗೆ ಸವಾಲು ಎನ್ನಿಸುವ ಪರಿಸ್ಥಿತಿಯನ್ನು ಎದುರಿಸಬೇಕಾಗುವುದು.
ADVERTISEMENT
ADVERTISEMENT