ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ವಿವಾಹದ ವಿಚಾರದಲ್ಲಿ ಅಂತಿಮ ತೀರ್ಮಾನಕ್ಕೆ ಬರುವುದು
Published 16 ಸೆಪ್ಟೆಂಬರ್ 2024, 22:59 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಆಪ್ತರ ಕಷ್ಟಗಳ ಕಡೆಗೆ ಗಮನಹರಿಸುವುದು ಪುಣ್ಯದ ಕೆಲಸವೆಂದು ಭಾವಿಸಿ. ಅದರ ಹೊರತಾಗಿ ಪ್ರತಿಫಲ ಅಪೇಕ್ಷಿಸಬೇಡಿ. ಒಳಾಂಗಣವಿನ್ಯಾಸಕ್ಕೆ ಸಂಬಂಧಪಟ್ಟ ಕೋರ್ಸ್ ಕಲಿಯುವಂಥ ಆಸೆ ಹೊಂದಿದವರಿಗೆ ಶುಭ ಕಾಲ.
ವೃಷಭ
ಯಾವುದೇ ಉದ್ವೇಗಕ್ಕೆ ಒಳಗಾಗದೆ ಸ್ಫೂರ್ತಿಯಿಂದ ಕಾರ್ಯನಿರ್ವಹಿಸುವಿರಿ. ಸಾಮಾಜಿಕವಾಗಿ ಜನರ ಸಂಪರ್ಕ ಬೆಳೆಸಿಕೊಳ್ಳಿ. ನೆರೆಯವರೊಂದಿಗೆ ಸೌಹಾರ್ದಯುತವಾಗಿ ವರ್ತಿಸಿ.
ಮಿಥುನ
ಆಯ್ಕೆ ಸರಿಯಾಗಿದ್ದು, ಕೆಲಸಗಳನ್ನು ನಿರ್ಭಯವಾಗಿ ಮಾಡಿ ಮುಗಿಸುವಲ್ಲಿ ಯಶಸ್ವಿಯಾಗುವಿರಿ. ಎಲ್ಲರೊಂದಿಗೂ ತಾಳ್ಮೆಯಿಂದ ವರ್ತಿಸಿ. ಮನೆಯವರ ಅಥವಾ ಹಿರಿಯರ ಮಾತಿನಂತೆ ಕೆಲಸ ಕೈಗೊಳ್ಳುವುದು ಉತ್ತಮ.
ಕರ್ಕಾಟಕ
ಅಧಿಕಾರಿಗಳ ಜತೆ ಮುಕ್ತ ಚರ್ಚೆ ನಡೆಸುವುದರಿಂದ ಸಮಸ್ಯೆಗಳ ಪರಿಹಾರವನ್ನು ಶಾಶ್ವತವಾಗಿ ಕಂಡುಕೊಳ್ಳುವಿರಿ. ತೆರಿಗೆ ಅಧಿಕಾರಿಗಳಿಗೆ ಪ್ರಶಂಸೆಯ ಮಾತುಗಳು ಇರುವುದು. ನೂತನ ವಾಹನ ಖರೀದಿ ಯೋಗವಿದೆ.
ಸಿಂಹ
ಮಹತ್ವದ ವಿಷಯಕ್ಕೆ ಗಂಭೀರ ಚಿಂತನೆ ಅಗತ್ಯ. ವಕೀಲರ ಸಲಹೆ, ಮಾರ್ಗದರ್ಶನ ಪಡೆದು ಮುನ್ನುಗ್ಗಿ. ಕ್ಷೇತ್ರದಲ್ಲಿ ಉಳಿದುಕೊಳ್ಳಬೇಕಾದರೆ ಅವಿರತ ದುಡಿಮೆಯೊಂದೇ ಮಾರ್ಗ.
ಕನ್ಯಾ
ವಿವಾಹದ ವಿಚಾರದಲ್ಲಿ ಅಂತಿಮ ತೀರ್ಮಾನಕ್ಕೆ ಬರುವುದು ಉತ್ತಮವೆಂದು ಕಾಣುತ್ತದೆ. ಆಂಜನೇಯನ ಸೇವೆ ಮಾಡುವುದರಿಂದ ಗೊಂದಲ ನಿವಾರಣೆ. ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಗತಿಯನ್ನು ಕಾಣುವಿರಿ.
ತುಲಾ
ನ್ಯಾಯಾಂಗ ಇಲಾಖೆಯಲ್ಲಿ ಜೀವನ ನಡೆಸುತ್ತಿರುವವರಿಗೆ ಹಣದ ಆಸೆ ತೋರಿಸಿ ತಪ್ಪು ಕೆಲಸವನ್ನು ಮಾಡುವಂತೆ ಪ್ರಚೋದಿಸುವವರು ಎದುರಾಗಲಿದ್ದಾರೆ. ಸಂಬಂಧಿಗಳಲ್ಲಿ ಇದ್ದಂತಹ ಸಾಲದ ಹಣ ಹಿಂತಿರುಗಿ ಬರುವುದು.
ವೃಶ್ಚಿಕ
ಹಿತೈಷಿಗಳಾಗಿದ್ದ ಬಂಧು-ಮಿತ್ರರು ಹಿತಶತ್ರುಗಳಾಗುವ ಸಾಧ್ಯತೆ. ಹೊಸ ಕೆಲಸ ಕಾರ್ಯಗಳ ಬಗ್ಗೆ ಮನೆಯವರೊಂದಿಗೆ ಸುದೀರ್ಘವಾದ ಮಾತುಕತೆ ನಡೆಸಿ. ಈ ದಿನ ಆದಾಯವು ಸಾಕಷ್ಟು ಕೂಡಿ ಬರಲಿದೆ.
ಧನು
ಬಂಧು-ಮಿತ್ರರ ಸಹಾಯ ಸಕಾಲಕ್ಕೆ ಒದಗುವುದರಿಂದ ನಿರಾಳ ಭಾವ. ಸಂಜೆಯ ಸಮಯದಲ್ಲಿ ಶಿರೋವೇದನದಿಂದ ಬಳಲುವ ಸಾಧ್ಯತೆ ಇರುವುದು. ತಾಯಿಯವರ ಮಾನಸಿಕ ಆರೋಗ್ಯ ಸುಧಾರಿಸಲಿದೆ.
ಮಕರ
ಕಠಿಣ ಪರಿಶ್ರಮದಿಂದ ಕಾರ್ಯ ನಿರ್ವಹಿಸಿದಲ್ಲಿ ಕಹಿಯ ಸನ್ನಿವೇಶಗಳು ಸಹಜ ಸ್ಥಿತಿಗೆ ಮರಳಲಿವೆ. ನಾಳೆಯ ಬಗ್ಗೆ ಯೋಚಿಸಿ ಬುದ್ಧಿವಂತಿಕೆಯಿಂದ ಬದುಕ ಬೇಕಾದ ದಿನ. ವಿದೇಶಿ ಪ್ರಯಾಣ ಸುಖಕರವಾಗಿರುವುದು.
ಕುಂಭ
ಸಹಭಾಗಿಗೆ ಅಥವಾ ಮಕ್ಕಳಿಗೆ ಸಹಾಯ ಮಾಡುವುದರಲ್ಲಿ ಹೆಚ್ಚು ಆನಂದ ಸಿಗಬಹುದು. ಸಣ್ಣ ಪುಟ್ಟ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಕ್ಕಾಗಿ ಹೊಸ ಕಾರ್ಯವು ಲಭ್ಯ.
ಮೀನ
ಗೃಹಸೌಖ್ಯ ಉತ್ತಮವಿದ್ದು, ಸಾಮಾಜಿಕವಾಗಿ ಸ್ಥಾನಮಾನ ಪ್ರಾಪ್ತಿ. ವ್ಯವಹಾರದ ಜೀವನದಲ್ಲಿ ಕೊರತೆ ಕಾಣುವುದಿಲ್ಲ. ಚರ್ಮದ ವಸ್ತುಗಳ ತಯಾರಿ ಅಥವಾ ಮಾರಾಟದಿಂದ ಲಾಭ ಬರಲಿದೆ.
ADVERTISEMENT
ADVERTISEMENT