ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನಭವಿಷ್ಯ: ಈ ರಾಶಿಯ ಹೋಟೆಲ್ ಉದ್ಯಮದವರಿಗೆ ಅತ್ಯಧಿಕ ಲಾಭ ಪ್ರಾಪ್ತಿಯಾಗುವುದು
Published 20 ಆಗಸ್ಟ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವ್ಯಾಪಾರ ವ್ಯವಹಾರದಲ್ಲಿ ಲಾಭ, ನಷ್ಟ ಏನೇ ಆದರೂ ಅದನ್ನು ಮುಕ್ತವಾಗಿ ಸ್ವೀಕರಿಸುವ ಭಾವನೆ ಇರಲಿ. ತಿಂಡಿ ತಿನಿಸು ಪದಾರ್ಥಗಳ ಮಾರಾಟಗಾರರಿಗೆ ಲಾಭ ಸಿಗುವುದು. ಬಟ್ಟೆ ವ್ಯಾಪಾರ ಉತ್ತಮವಾಗಿರುತ್ತದೆ.
ವೃಷಭ
ಜೀವನದಲ್ಲಿ ನಡೆದ ಕೆಲವು ಘಟನೆಗಳು ಪ್ರಮುಖ ಘಟ್ಟಗಳಂತಾಗಿ ಜೀವನಶೈಲಿಯೇ ಬದಲಾಗುತ್ತದೆ. ಕೆಲವರ ಸಂಬಂಧವು ಕೊನೆಗೊಳ್ಳುವಂಥ ಪರಿಸ್ಥಿತಿ ಎದುರಾಗಬಹುದು. ವಿವೇಕರಹಿತ ಕೆಲಸದಲ್ಲಿ ತೊಡಗಿಸಿಕೊಳ್ಳದಿರಿ.
ಮಿಥುನ
ಹೊಸ ಯೋಜನೆಗಳಿಗೆ ಚಾಲನೆ ನೀಡುವ ವಿಚಾರವನ್ನು ಸ್ವಲ್ಪ ದಿನ ಮುಂದಕ್ಕೆ ತಳ್ಳುವುದು ಸೂಕ್ತ. ನಿಮ್ಮ ಕೌಶಲವನ್ನು ತೋರಲು ಹೆಚ್ಚಿನ ಅವಕಾಶ ಗಳು ನಿಮಗೆದುರಾಗಲಿದೆ. ಉಡುಪು ಮಾರಾಟಗಾರರಿಗೆ ವಿಶೇಷ ದಿನ.
ಕರ್ಕಾಟಕ
ಎಣ್ಣೆ ಮತ್ತು ಬೇಳೆಕಾಳು ವ್ಯಾಪಾರದಲ್ಲಿ ಮಾರಾಟ ಉತ್ತಮವಾಗಿರುವುದು. ವಿದ್ಯಾರ್ಜನೆಗೆಂದು ಪರ ಊರಿಗೆ ಹೋದ ನೀವು ಹಾದಿ ತಪ್ಪಿದ್ದು ಹೆತ್ತವರಿಗೆ ಸಂಕಟ ಉಂಟು ಮಾಡುವುದು. ತಾಳ್ಮೆಯ ಪರೀಕ್ಷೆ ಆಗಬಹುದು.
ಸಿಂಹ
ತಂದೆಯ ಮನಸ್ಸಿಗೆ ನೋವಾಗುವ ಸಂಗತಿ ನಿಮ್ಮಿಂದ ನಡೆಯಲಿದೆ. ತಾಂತ್ರಿಕ ಪರಿಣತರಿಗೆ ಉನ್ನತ ಸಂಸ್ಥೆಗಳಲ್ಲಿ ಉದ್ಯೋಗ ಸಿಗಲಿದೆ. ವಿದೇಶದಲ್ಲಿ ಇರುವವರು ಸ್ವದೇಶದ ಬಂಧುಗಳನ್ನು ಭೇಟಿಯಾಗಲು ಬರುವಂತೆ ಆಗುವುದು.
ಕನ್ಯಾ
ಪರಿಶ್ರಮಕ್ಕೆ ತಕ್ಕಂಥ ಆದಾಯವಿಲ್ಲದೆ ಸೊರಗಿದ್ದ ನಿಮಗೆ, ಅತಿ ಹೆಚ್ಚಿನ ವರಮಾನದ ಮಾರ್ಗವನ್ನು ಆಪ್ತ ಸ್ನೇಹಿತರೊಬ್ಬರು ತೋರುವರು. ಮನೆಯಲ್ಲಿ ಅಣ್ಣ-ತಮ್ಮಂದಿರ ಆಂತರಿಕ ವ್ಯವಹಾರಗಳು ಒಂದು ಹಂತ ತಲುಪುತ್ತವೆ.
ತುಲಾ
ಬುದ್ಧಿವಂತರಾದ, ತಿಳಿವಳಿಕೆ ಹೊಂದಿದವರಾದ ನೀವು ಇಂದು ಗ್ರಹಚಾರದ ಫಲವಾಗಿ ಮನೋಬಲದಿಂದ ಕಾರ್ಯ ಸಾಧಿಸುವಲ್ಲಿ ವಿಫಲರಾಗುವಿರಿ. ಹೋಟೆಲ್ ಉದ್ಯಮದವರಿಗೆ ಅತ್ಯಧಿಕ ಲಾಭ ಪ್ರಾಪ್ತಿ.
ವೃಶ್ಚಿಕ
ಕೆಲಸದಲ್ಲಿ ಒತ್ತಡ ಹೆಚ್ಚಿರುವುದರಿಂದ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ. ದಾಖಲೆ ಅಥವಾ ಒಪ್ಪಂದಗಳಿಗೆ ಎಚ್ಚರ ವಹಿಸಿ ಸಹಿ ಮಾಡಿರಿ. ಯುವ ಕೃಷಿಕರು ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ತೋರುವಿರಿ.
ಧನು
ವಿದೇಶಿ ಸಂಸ್ಥೆಗಳೊಡನೆ ಸಹಭಾಗಿತ್ವ ಒಪ್ಪಂದಗಳನ್ನು ಮಾಡಿಕೊಳ್ಳುವಂಥ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಸಮಂಜಸವಲ್ಲ. ಇಂದಿನ ನಿಮ್ಮ ಪ್ರಯಾಣದಲ್ಲಿ ಸುಖವಿರುವುದು.
ಮಕರ
ಮನೆಯ ಪರಿಸ್ಥಿತಿ ಅರಿವಿದ್ದರೂ ಆದರ್ಶ ವೃತ್ತಿಗಾಗಿಯೇ ಹಲವು ದಿನಗಳ ಕಾಯುವಿಕೆ ಸರಿಯಾದುದಲ್ಲ. ಗೃಹದಲ್ಲಿ ಶುಭ, ಮಂಗಳ ಕಾರ್ಯಗಳ ಚಟುವಟಿಕೆಗಳು ತೋರಿ ಬರುವವು.
ಕುಂಭ
ಜವಾಬ್ದಾರಿಯನ್ನು ಕಳೆದುಕೊಳ್ಳುವ ನಿಟ್ಟಿನಲ್ಲಿ ತೆಗೆದುಕೊಂಡ ನಿರ್ಧಾ ರಗಳು ಗೌರವ ಕಡಿಮೆಗೊಳಿಸಬಹುದು. ಬಯಸಿದ ಕೆಲಸಗಳನ್ನು ಇಂದು ತ್ವರಿತವಾಗಿ ಮಾಡಿ ಮುಗಿಸುತ್ತೀರಿ. ಅಭಿವೃದ್ಧಿಯಲ್ಲಿ ಹಿನ್ನಡೆ ಕಾಣಲಿದ್ದೀರಿ.
ಮೀನ
ಸ್ವಲ್ಪ ಎಚ್ಚರ ತಪ್ಪಿದಲ್ಲಿ ಶತ್ರುಗಳಿಂದ ತುಂಬಾ ಸುಲಭವಾಗಿ ಮೋಸ ಹೋಗುವಂಥ ಸಾಧ್ಯತೆಗಳೂ ಇವೆ. ಉತ್ತಮ ಯೋಚನಾ ಸಾಮರ್ಥ್ಯ ಹೊಂದಿದ್ದರೂ ಒತ್ತಡದಲ್ಲಿ ನಿರ್ಧಾರ ತೆಗೆದುಕೊಳ್ಳದಿರಿ.
ADVERTISEMENT
ADVERTISEMENT