ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನಭವಿಷ್ಯ: ಈ ರಾಶಿಯವರಿಗೆ ಉದ್ಯೋಗದಲ್ಲಿ ಸ್ಥಳ ಬದಲಾವಣೆಯಾಗುವ ಸಾಧ್ಯತೆಯಿದೆ
Published 21 ಆಗಸ್ಟ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ದವಸ ಧಾನ್ಯಗಳ ಸಗಟು ವ್ಯಾಪಾರಿಗಳು ಹಾಗೂ ದಲ್ಲಾಳಿಗಳು ಅನುಕೂಲವನ್ನು ಪಡೆಯುವರು. ಬೆಲೆ ಬಾಳುವ ವಸ್ತುವನ್ನು ಕಳೆದುಕೊಳ್ಳುವುದರಿಂದ ಜಾಗ್ರತೆ ವಹಿಸಿ. ಮಿತ್ರರಿಂದ ಸಂತಸ ಹೊಂದುವಿರಿ.
ವೃಷಭ
ಕುಟುಂಬದವರ ಮಾತುಗಳಿಗೆ ಬೆಲೆ ಕೊಡುವುದು ಮತ್ತು ಎಲ್ಲರಲ್ಲೂ ಸಹನೆಯಿಂದ ವರ್ತಿಸುವುದನ್ನು ರೂಢಿಸಿಕೊಳ್ಳುವುದು ಉತ್ತಮ. ವಿದ್ಯುತ್ತಿನ ಜತೆಯಲ್ಲಿ ಕಾರ್ಯನಿರ್ವಹಿಸುವವರು ಜಾಗರೂಕತೆ ವಹಿಸಬೇಕು.
ಮಿಥುನ
ಉದ್ಯೋಗದಲ್ಲಿ ವೈಯಕ್ತಿಕ ಅನಿಸಿಕೆಯು ಕಂಪನಿಗಳಿಗೆ ಉತ್ತಮ ರೀತಿಯಲ್ಲಿ ಸಹಾಯಕಾರಿ ಆಗುವುದು. ಉತ್ತಮ ಕಾರ್ಯವನ್ನು ಮಾಡಿದವರನ್ನು ಮುಕ್ತವಾಗಿ ಶ್ಲಾಘಿಸುವ ಮನಸ್ಥಿತಿ ವೃದ್ಧಿಸಿಕೊಳ್ಳಿ.
ಕರ್ಕಾಟಕ
ದೇವತಾಕಾರ್ಯದ ಹೆಸರಿನಲ್ಲಿ ಕಠಿಣ ವ್ರತ ಮಾಡುವ ನಿಟ್ಟಿನಲ್ಲಿ ಆರೋಗ್ಯವನ್ನು ಕಡೆಗಣಿಸಬೇಡಿ. ಹಿರಿಯರನ್ನು ತೀರ್ಥಯಾತ್ರೆಗೆ ಕಳುಹಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಿ. ಪರಿಶ್ರಮಕ್ಕೆ ಲಾಭ ಸಿಗುತ್ತದೆ.
ಸಿಂಹ
ಉದ್ಯೋಗದಲ್ಲಿ ಸ್ಥಳ ಬದಲಾವಣೆ ಅಥವಾ ಅಧಿಕ ಜವಾಬ್ದಾರಿ ಹೊರಬೇಕಾಗುವ ಸಾಧ್ಯತೆಗಳಿವೆ. ಧರ್ಮ ಕಾರ್ಯಗಳಲ್ಲಿ ಭಾಗವಹಿಸುವುದು ಅಥವಾ ಆಸಕ್ತಿ ಬೆಳೆಸಿಕೊಳ್ಳುವುದು ಅಗತ್ಯವಾಗುವುದು.
ಕನ್ಯಾ
ಬಂಧುಗಳ ಮನೆಯ ಶುಭಕಾರ್ಯಗಳಲ್ಲಿ ಜವಾಬ್ದಾರಿ ಮತ್ತು ಓಡಾಟವಿರುವುದು. ದವಸ ಧಾನ್ಯಗಳ ದಾಸ್ತಾನಿಗಾಗಿ ಬಂಡವಾಳ ಹೂಡುವುದು ಸರಿಯಲ್ಲ. ಉನ್ನತ ವ್ಯಾಸಂಗದವರಿಗೆ ನೇರ ಆಯ್ಕೆ ಸಂಭವವಿದೆ.
ತುಲಾ
ಪುಣ್ಯ ಸಂಪಾದನೆ ಮುಖ್ಯ ಧ್ಯೇಯವಾಗಿರಲಿ. ಹಿರಿಯ ಅಧಿಕಾರಿಗಳ ಅಥವಾ ಆಪ್ತರ ಸಹಾಯ ಸಿಗುವುದು. ಸಾಧ್ಯವಾದಷ್ಟು ತಾಳ್ಮೆಯಿಂದ ಮುಂದುವರಿದಲ್ಲಿ ಮಾನಸಿಕ ನೆಮ್ಮದಿ ಕಾಣುವಿರಿ.
ವೃಶ್ಚಿಕ
ಸಾಧಿಸಲೇಬೇಕೆಂಬ ಛಲವಿರುವ ನಿಮಗೆ ಕಾರ್ಯಗಳೆಲ್ಲವೂ ಕಷ್ಟಕರವಾಗಿ ಸಿದ್ಧಿಸಲಿದೆ. ತಾಂತ್ರಿಕ ವಿದ್ಯಾಭ್ಯಾಸದಲ್ಲಿ ಉನ್ನತ ಯಶಸ್ಸು ದೊರೆತು ಆನಂದವಾಗುತ್ತದೆ. ಅವಲಂಬನೆ ಬೇಡವೆನಿಸುತ್ತದೆ.
ಧನು
ಮನೆಯಲ್ಲಿ ದೇವತಾ ಕಾರ್ಯಗಳನ್ನು ನಡೆಸುವ ಯೋಚನೆ ಬರಲಿದೆ. ವ್ಯವಹಾರ ಒಪ್ಪಂದಗಳು ಲಾಭ ತರಲಿದೆ. ಸ್ನೇಹಿತರಿಗೆ ಸಹಾಯ ಮಾಡುವ ಬಗ್ಗೆ ನಿರ್ಧರಿಸಿ. ವೈಯಕ್ತಿಕ ಜೀವನ ಸಮಸ್ಯೆ ಬಗೆಹರಿದು ನೆಮ್ಮದಿ ಮೂಡಲಿದೆ.
ಮಕರ
ಆದಾಯ ಅಧಿಕವಾಗಿಯೇ ಇದ್ದರೂ ಖರ್ಚಿಗೆ ಬೇಕಾದಂಥ ಸಂದರ್ಭದಲ್ಲಿ ಅದು ಕೈಗೆ ಎಟುಕದೇ ಇರುವಂಥ ಪರಿಸ್ಥಿತಿ ಉಂಟಾಗುತ್ತದೆ. ವಾದವಿವಾದಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿ.
ಕುಂಭ
ಕಹಿ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಕೈಗೆ ಎಟಕುವ ವಿಷಯಗಳ ಬಗ್ಗೆ ಮಾತ್ರ ಚಿಂತಿಸಿ. ರಬ್ಬರ್ ಹಾಗೂ ಪ್ಲಾಸ್ಟಿಕ್‌ನ ವ್ಯಾಪಾರಗಳಿಂದ ಅಧಿಕ ಲಾಭವಿದೆ.
ಮೀನ
ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿರಲು ಶಿಸ್ತಿನ ಜೀವನವನ್ನು ನಡೆಸಬೇಕಾಗುತ್ತದೆ. ದೇವರ ಅನುಗ್ರಹದಿಂದ ಎಲ್ಲಾ ಕೆಲಸಗಳಲ್ಲೂ ಜಯಶಾಲಿಯಾಗುವ ಲಕ್ಷಣವಿರುವುದು. ಅಚ್ಚರಿಯ ಸುದ್ದಿ ಕೇಳಲಿರುವಿರಿ.
ADVERTISEMENT
ADVERTISEMENT