ಗುರುವಾರ, 17 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಸಂಘ ಸಂಸ್ಥೆಯ ಜವಾಬ್ದಾರಿಯಿಂದ ಸದ್ಯಕ್ಕೆ ವಿಮುಖರಾಗಬೇಡಿ
Published 28 ಜೂನ್ 2025, 0:06 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ರೈತಾಪಿ ವರ್ಗದವರಿಗೆ ನಿರಂತರ ಕೆಲಸ ಕಾರ್ಯಗಳಿಂದಾಗಿ ದಣಿದ ನಿಮಗೆ ಸ್ವಲ್ಪಮಟ್ಟಿನ ಬಿಡುವು ಆರಾಮವೆನಿಸುವುದು. ಜಗದ್ಗುರುವಿನ ದರ್ಶನದಿಂದ ಮನಸ್ಸಿನಲ್ಲಿರುವ ಪ್ರಶ್ನೆಗೆ ಸರಿಯಾದ ಉತ್ತರ ದೊರೆಯುತ್ತದೆ.‌
ವೃಷಭ
ತಾಯಿಗೆ ನುರಿತ ವೈದ್ಯರಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲು ವಿಶ್ವಾಸಿಗಳಿಂದ ವೈದ್ಯರ ಸಂಪರ್ಕ ಸಹಾಯ ಹಸ್ತ ಸಿಗುವುದು. ಉನ್ನತ ಶಿಕ್ಷಣವನ್ನು ಪಡೆದವರು ಓದಿಗೆ ತಕ್ಕ ಕೆಲಸವನ್ನು ನಿರೀಕ್ಷಿಸುತ್ತಿದ್ದರೆ ಸದ್ಯದಲ್ಲಿ ಸಿಗುವುದು ಕಷ್ಟಕರ.
ಮಿಥುನ
ಈಗ ನಿರ್ಮಾಣವಾಗಿರುವ ಸಂಚಾರ ಪ್ರವೃತ್ತಿಯನ್ನು ನಿಗದಿತ ವೇಳಾಪಟ್ಟಿಯನ್ನು ಮಾಡಿಕೊಳ್ಳುವುದರ ಮೂಲಕ ಸರಿಪಡಿಸಿಕೊಳ್ಳಬಹುದು. ನಿರ್ಜಲೀಕರಣದಂಥ ಸಮಸ್ಯೆಗಳು ಕಾಡಬಹುದು.
ಕರ್ಕಾಟಕ
ದುರ್ಜನರ ಮೂಲಕ ಉಂಟಾಗಬಹುದಾದ ಅಪಾಯದ ಸೂಚನೆ ಇದ್ದರೆ ಈ ತಕ್ಷಣವೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಿ. ಸಂಘ ಸಂಸ್ಥೆಯ ಜವಾಬ್ದಾರಿಯಿಂದ ಸದ್ಯಕ್ಕೆ ವಿಮುಖರಾಗಬೇಡಿ.
ಸಿಂಹ
ಉದ್ಯೋಗ ಅಥವಾ ಉದ್ಯಮ ಕ್ಷೇತ್ರದಲ್ಲಿ ಬದಲಾವಣೆ ಬಯಸಿದ ರೀತಿಯಲ್ಲಿ ನಿಸ್ಸಂಶಯವಾಗಿ ಸಿಗಲಿದೆ. ಕಷ್ಟದಲ್ಲಿರುವ ವ್ಯಕ್ತಿಗಳಿಗೆ ಹಣ ಸಹಾಯ ಮಾಡುವ ಮುನ್ನ ಯೋಚಿಸಿ.
ಕನ್ಯಾ
ಸಾಮಾಜಿಕ ಕಾರ್ಯಗಳಿಗೆ ಸಾರ್ವಜನಿಕ ವಲಯದಿಂದ ಮನ್ನಣೆ ಸಿಗುವುದು. ಹಿರಿಯ ಅಧಿಕಾರಿಗಳ ನಿಯಮಕ್ಕೆ ಸರಿಯಾಗಿ ನಡೆದುಕೊಂಡರೆ ಬುದ್ಧಿವಂತರಾಗುತ್ತೀರಿ. ಆರ್ಥಿಕ ವಿಚಾರದಲ್ಲಿ ಸಮತೋಲನ ಅಗತ್ಯವಿದೆ.
ತುಲಾ
ಹೆಚ್ಚಿನ ನಿಗಾವಹಿಸಿ ಮಾಡಿದ ಕೆಲಸ ಕಾರ್ಯಗಳ ಬಗ್ಗೆ ಅಧಿಕಾರಿಗಳಿಂದ ಪ್ರಶಂಸೆಯ ಬದಲಾಗಿ ಅವಹೇಳನೆ ಮಾತುಗಳನ್ನು ಕೇಳಬೇಕಾಗಬಹುದು. ದೇಹಾಲಸ್ಯ ತೋರಿ ವಿಶ್ರಾಂತಿ ಬಯಸುವಿರಿ.
ವೃಶ್ಚಿಕ
ಅಧಿಕಾರಿಗಳು, ಆಡಳಿತ ಮಂಡಳಿಯವರು ಮೇಲಿಟ್ಟಿದ್ದ ಭರವಸೆ ಹುಸಿಯಾಗದಂತೆ ನೋಡಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ವಿದ್ಯಾರ್ಥಿಗಳಿಗೆ ಯಾವುದೇ ತರಹದ ಅಳುಕುವ ಪ್ರಮೇಯವಿರುವುದಿಲ್ಲ.
ಧನು
ಮನಸ್ಸಿನ ಭಾವನೆಗಳಿಗೆ ಸ್ಪಂದಿಸುವ ಗೆಳೆಯರ ಪರಿಚಯ, ಸ್ನೇಹಿತ ರೊಂದಿಗಿನ ಮಾತುಕತೆ ಉಪಯುಕ್ತವೆನಿಸಲಿದೆ. ಆಯ್ಕೆ ಸರಿಯಾಗಿದೆ. ಸ್ವಂತ ಉದ್ಯೋಗದಲ್ಲಿ ಪ್ರಗತಿ ಕಾಣಲಿದ್ದೀರಿ.
ಮಕರ
ನಿಮ್ಮ ವಿರುದ್ಧವಾಗಿ ನಡೆಯುವವರಿಗೆ, ಮಾತನಾಡುವವರಿಗೆ ಯಾವುದೇ ಪ್ರತಿಕ್ರಿಯೆ ನೀಡಬೇಡಿ. ಕಾಲವೇ ಉತ್ತರ ಕೊಡುತ್ತದೆ. ಮಾತುಗಳು ಕೆಲವರಿಗೆ ಪ್ರೇರಣೆಯಾಗುವುದರಿಂದ ಮಾತಿನ ಮೇಲೆ ನಿಗಾವಿರಲಿ.
ಕುಂಭ
ಆರೋಗ್ಯದಲ್ಲಿ ರಕ್ತದೊತ್ತಡಕ್ಕೆ ಸಂಬಂಧಿಸಿದಂತೆ ಏರುಪೇರಾಗುವ ಲಕ್ಷಣ ಇರಲಿದೆ. ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬೇಡಿ. ಅಸಹಾಯಕರಿಗೆ ಸಹಾಯ ಮಾಡುವುದರಿಂದ ಪುಣ್ಯ ಸಂಪಾದಿಸಬಹುದು.
ಮೀನ
ಅಂತರರಾಜ್ಯದ ಅತಿ ಮುಖ್ಯ ವ್ಯಕ್ತಿಯೊಬ್ಬರ ಪರಿಚಯ ವ್ಯಾಪಾರ ಅಭಿವೃದ್ಧಿಯ ದಾರಿ ಹಿಡಿಯಲು ಕಾರಣವಾಗುವುದು. ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವಂಥವರ ಸಮಸ್ಯೆಗಳಿಗೆ ಸಮಾಧಾನ ದೊರೆಯಲಿದೆ.
ADVERTISEMENT
ADVERTISEMENT