ಶುಕ್ರವಾರ, 11 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಮನೆಯಲ್ಲಿ ಸಂತೋಷದ ವಾತಾವರಣ ಸೃಷ್ಟಿಯಾಗಲಿದೆ
Published 28 ಜೂನ್ 2025, 23:52 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಹೊಸ ಯೋಜನೆಗಳಿಗೆ ಚಾಲನೆ ನೀಡುವ ವಿಚಾರವನ್ನು ಸ್ವಲ್ಪ ದಿನ ಮುಂದಕ್ಕೆ ತಳ್ಳುವುದು ಸೂಕ್ತ. ಅನಿವಾರ್ಯದ ಪ್ರಯಾಣಗಳು ಹೆಚ್ಚಾಗಲಿದೆ. ಮನೆಯಲ್ಲಿ ಸಂತೋಷದ ವಾತಾವರಣ ನಿಮ್ಮಿಂದ ಸೃಷ್ಟಿಯಾಗಲಿದೆ.
ವೃಷಭ
ಸಂಸಾರದ ವಿಷಯಗಳತ್ತ ಗಮನ ಹರಿಸುವಿರಿ. ಯೋಜನೆಯೊಂದಕ್ಕೆ ನಿಮ್ಮ ಸೃಜನಾತ್ಮಕತೆಯನ್ನು ಉಪಯೋಗಿಸಿಕೊಳ್ಳುವರು, ಫಲವಾಗಿ ಸಮಾಜ ದಲ್ಲಿ ಗಮನಾರ್ಹ ವ್ಯಕ್ತಿಯಾಗುವಿರಿ. ಸಹವರ್ತಿಗಳು ಬೆಂಬಲ ನೀಡುವರು.
ಮಿಥುನ
ವೃತ್ತಿ ಅಥವಾ ಕೆಲಸಗಳಲ್ಲಿ ಬದಲಾವಣೆ ಸನ್ನಿಹಿತವಾಗಲಿದೆ. ಸಮಾನ ಮನಸ್ಕರ ಜೊತೆಗಿನ ವ್ಯವಹಾರದಲ್ಲಿ ಮಾನಸಿಕ ಭಿನ್ನಾಭಿಪ್ರಾಯಗಳು ಉದ್ಭವ ವಾಗಲಿದೆ. ಸ್ನೇಹಿತರೊಂದಿಗೆ ಕ್ಲಿಷ್ಟಕರ ಕ್ಷಣಗಳನ್ನು ಕಳೆಯುವಂತಾಗಲಿದೆ.
ಕರ್ಕಾಟಕ
ಹೆಚ್ಚಿನ ಕ್ರಿಯಾತ್ಮಕ ಶಕ್ತಿ ಇದೆ ಆದರೆ ಕೆಲಸಗಳು ಕಾರ್ಯಗತ ವಾಗಲು ಆತುರ ತೋರಬೇಡಿ. ಏಕಮುಖ ಪ್ರತಿಭೆಯನ್ನು ನಾಶಮಾಡಿ ಇತರ ವಿಷಯಗಳಿಗೂ ಪ್ರಾಮುಖ್ಯತೆ ನೀಡಿ. ದಲ್ಲಾಳಿಗಳಿಗೆ ತೃಪ್ತಿಕರ ದಿನವಾಗುವುದು.
ಸಿಂಹ
ಕೆಲಸದಲ್ಲಿ ಒತ್ತಡ ಹೆಚ್ಚಿರುವುದರಿಂದ ಅತಿಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿ. ಆಕಸ್ಮಿಕ ಧನಲಾಭ ಉಂಟಾಗಲಿದೆ. ಹೊಸ ಜವಾಬ್ದಾರಿ ಯನ್ನು ವಹಿಸಿಕೊಳ್ಳಬೇಕಾಗುವುದು. ಪ್ರಾಮಾಣಿಕತೆಗೆ ಅಡ್ಡಿ ಉಂಟಾಗುವುದು.
ಕನ್ಯಾ
ಸಮಸ್ಯೆ ಪರಿಸಿಕೊಳ್ಳಲು ಸೂಕ್ತ ಸಲಹೆ ಪಡೆಯುವುದು ಉತ್ತಮ. ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಿ. ಮನೆಯಲ್ಲಿನ ಭಿನ್ನಾಭಿಪ್ರಾಯ ದೂರಾವಾಗುವುದು. ಕಬ್ಬಿಣ ವ್ಯಾಪಾರಸ್ಥರಿಗೆ ಆಶಾದಾಯಕ ದಿನ.
ತುಲಾ
ಯೋಜನೆಗಳು ಕಾರ್ಯಗತಗೊಳ್ಳುವುದರ ಬಗ್ಗೆ ಶನೈಶ್ಚರನ ಆರಾಧನೆ ಮಾಡುವುದು ಉತ್ತಮ. ಕೆಲಸಗಳಿಗಾಗಿ ಓಡಾಟ ನಡೆಸುವಿರಿ. ಹೆಚ್ಚಿನ ಔದಾರ್ಯ ಬುದ್ಧಿಯನ್ನು ತೋರಿದಲ್ಲಿ ವಂಚನೆಗೆ ಒಳಗಾಗುವ ಸನ್ನಿವೇಶಗಳಿವೆ.
ವೃಶ್ಚಿಕ
ವಾಣಿಜ್ಯ ವ್ಯವಹಾರಗಳ ಸಂಬಂಧಪಟ್ಟ ವ್ಯಕ್ತಿಗಳನ್ನು ಭೇಟಿ ಮಾಡುವ ನಿಮ್ಮ ಕೆಲಸದಲ್ಲಿ ವಿಘ್ನ ಇರಲಿದೆ. ಹೊಸ ಒಪ್ಪಂದಗಳನ್ನು ಮಾಡಿಕೊಳ್ಳುವ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ವಿದ್ಯಾರ್ಥಿಗಳಿಗೆ ಪ್ರತಿಸ್ಪರ್ಧಿಗಳು ಹುಟ್ಟುವರು.
ಧನು
ನಿಮ್ಮ ಪ್ರಿಯಕರನಲ್ಲಿ ಭಾವನೆಗಳನ್ನು ಹಂಚಿಕೊಳ್ಳಲು ಸೂಕ್ತವಾದ ಸಮಯ. ಕಟ್ಟಡದ ಕೆಲಸಗಳು ಪೂರ್ತಿಗೊಂಡು ಮನಸ್ಸಿಗೆ ಸಮಾಧಾನ. ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ.
ಮಕರ
ನೆಮ್ಮದಿಯ ವಿಷಯವೇನೆಂದರೆ ಧನಾಗಮದಲ್ಲಿ ಚಿಂತೆ ಇರದು. ದೀರ್ಘಕಾಲಿಕ ಕೆಲಸಗಳು ನಿಧಾನವಾಗಿ ಸಾಗಲಿವೆ. ಇಂದು ಹಳೇ ಬಾಕಿ ಸಂದಾಯವಾಗುವುದು. ಸಂಜೆಯ ಸಮಯದಲ್ಲಿ ಶಿರೋವೇದನೆ ಕಾಡಲಿದೆ.
ಕುಂಭ
ಹಣಕಾಸು ಪರಿಸ್ಥಿತಿಗಳು ಉತ್ತಮಗೊಳ್ಳುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿಶೇಷ ತಯಾರಿ ನಡೆಸಿಕೊಳ್ಳಿ. ಕೆಲಸದಲ್ಲಿ ಬದಲಾವಣೆ ಬಯಸಿದ್ದಲ್ಲಿ ಬೇರೆ ಸ್ಥಳದಲ್ಲಿ ಕಾರ್ಯ ನಿರ್ವಹಿಸಲು ಸಿದ್ಧರಾಗಿ.
ಮೀನ
ಸಮಾರಂಭದಲ್ಲಿ ಭಾಗವಹಿಸುವುದರಿಂದ ಮಗನ ಮದುವೆಯ ವಿಚಾರದಲ್ಲಿ ಅನುಕೂಲವಾಗುವುದು. ಕಾರ್ಖಾನೆ ಕೆಲಸಗಾರರ ಬೇಡಿಕೆಗಳು ಇತ್ಯರ್ಥವಾಗಲಿದೆ. ವಾಹನ ಮಾರಾಟಗಾರರಿಗೆ ಉತ್ತಮ ಆದಾಯ ಲಭ್ಯ.
ADVERTISEMENT
ADVERTISEMENT