ಬುಧವಾರ, 18 ಫೆಬ್ರುವರಿ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಪಿತ್ರಾರ್ಜಿತ ಆಸ್ತಿಗಳ ವಿಚಾರದಲ್ಲಿ ಸಮಸ್ಯೆ ಆಗಲಿದೆ
Published 30 ನವೆಂಬರ್ 2024, 0:25 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
 ಹವಾಮಾನದಲ್ಲಿ ಉಂಟಾಗುತ್ತಿರುವ ಬದಲಾವಣೆಯು ನಿಮ್ಮ ಆರೋಗ್ಯದ ಮೇಲೆ ಅತ್ಯಂತ ಪ್ರಭಾವ ಬೀರಲಿದೆ. ನಿರ್ದಿಷ್ಟವಾದ ಕೆಲಸಗಳಿಗೆ ಮಾತ್ರ ಗಮನ ಕೊಡುವುದು ಒಳ್ಳೆಯದು. ಆಸ್ಪತ್ರೆ ಓಡಾಟ ನಿಲ್ಲುವುದು.
ವೃಷಭ
ಕೌಟುಂಬಿಕವಾಗಿ ಕೆಟ್ಟು ಹೋದ ಸಂಬಂಧ  ಮತ್ತೆ ಮರಳಿ ಬರಲಿದೆ. ಹಿರಿಯರ ಮಾತಿನಂತೆ ನಡೆದುಕೊಳ್ಳುವ ನಿರ್ಧಾರ ಶುಭಪ್ರದವಾಗುತ್ತದೆ. ಕಲಾವಿದರ ಆಸಕ್ತಿಯಿಂದ ಹೆಚ್ಚು ಅವಕಾಶಗಳು ಲಭ್ಯವಾಗಲಿದೆ.
ಮಿಥುನ
ವ್ಯವಹಾರದ ಜೀವನದಲ್ಲಿ ಕೆಲವು ವಿಚಾರಕ್ಕೆ ಆತಂಕ ಮೂಡಿ ಮನೋಧೈರ್ಯ ಕುಗ್ಗುತ್ತದೆ. ತುಂಬಾ ದಿನಗಳಿಂದ ಬರಬೇಕಿದ್ದ ಹಣ ಇಂದು ಕೈಸೇರಲಿದೆ. ಷೇರು ಖರೀದಿಸುವಾಗ ಎಚ್ಚರವಹಿಸಿ.
ಕರ್ಕಾಟಕ
ಯೋಜನೆಯನ್ನು ಪೂರ್ಣಗೊಳಿಸುವ ವಿಚಾರವಾಗಿ ಗಡಿಬಿಡಿಯ ವಾತಾವರಣ ಇರಲಿದೆ.  ಆರ್ಥಿಕತೆಗೆ ಇನ್ನೊಬ್ಬರ ಅಥವಾ ಹೆಂಡತಿಯ ಸಹಕಾರ ಅಗತ್ಯವೆನಿಸಲಿದೆ. ಎಲ್ಲಾ ಕೆಲಸಗಳೂ ಇಷ್ಟದಂತೆಯೇ ನಡೆಯುವುದು.
ಸಿಂಹ
ಪತ್ರಿಕೆ ಮತ್ತು ಕೆಲವು ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಕೆಲಸದ ಅಸ್ಥಿರತೆ ಅನುಭವಕ್ಕೆ ಬರಲಿದೆ. ಮಕ್ಕಳೊಂದಿಗೆ ಸುಖ ಭೋಜನ ನಡೆ ಯುವುದು. ಹೂವು, ಹಣ್ಣು, ತರಕಾರಿ ಹಾಗೂ ಹಾಲಿನ ವ್ಯಾಪಾರಿಗಳಿಗೆ ಲಾಭ .
ಕನ್ಯಾ
ಪಿತ್ರಾರ್ಜಿತ ಆಸ್ತಿಗಳ ವಿಚಾರದಲ್ಲಿ ನ್ಯಾಯಾಲಯದ ಮೆಟ್ಟಿಲು ಏರಬೇಕಾಗುತ್ತದೆ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ಸಿಗುತ್ತದೆ. ಸಾಂಸಾರಿಕವಾಗಿ ಸುಖ-ದುಃಖಗಳ ಸಮ್ಮಿಶ್ರ ಫಲವಿದೆ.
ತುಲಾ
ಸಂಧಾನ ಅಥವಾ ಕರಾರು ಒಪ್ಪಂದಗಳು ಅನುಕೂಲಕರ ಎನಿಸಲಿವೆ. ವಿದ್ಯಾರ್ಥಿಗಳಿಗೆ ವಿಫುಲ ಅವಕಾಶ ಒದಗಿ ಬಂದರೂ ಗುರಿ ಸಾಧನೆಗೆ ಅಡ್ಡಿ ಮಾಡುವುದು.
ವೃಶ್ಚಿಕ
ಗಣೇಶನ ಸೇವೆಯೊಂದಿಗೆ ಉತ್ಸಾಹದಿಂದ ಕೆಲಸ ಆರಂಭಿಸಿದರೆ ಸಮಸ್ಯೆಗಳು ಪರಿಹಾರಗೊಳ್ಳಲಿವೆ. ಈ ದಿನದ ಕಾರ್ಯ ಕಲಾಪಗಳು  ಯೋಚನೆಯಂತೆ ಸುಗಮವಾಗಿ ಸಾಗುವುದು. ಹಣದ ಅಭಾವ ಕಾಡುತ್ತದೆ.
ಧನು
ಕಾರಣಗಳೇ ಇಲ್ಲದೇ ಅಕ್ಕ-ತಂಗಿಯರಲ್ಲಿ ಕಲಹವಾಗುವ ಸಂಭವವಿದೆ. ವಕೀಲರಿಗೆ ಉದ್ಯೋಗದಲ್ಲಿ ಹೆಚ್ಚಿನ ಶ್ರಮ ಅಗತ್ಯವೆನಿಸಲಿದೆ. ದಿನವಿಡಿ ಸಂಯಮದಿಂದ ವರ್ತಿಸಿ.
ಮಕರ
ಯಾವುದೇ ವಿಚಾರವಾದರೂ ತೀರ್ಮಾನ ಕೈಗೊಳ್ಳುವ ಮುನ್ನ ಮನೆಯವರೊಂದಿಗೆ ಹಾಗೂ ತಿಳಿದವರೊಂದಿಗೆ ಚರ್ಚಿಸಿ ನಿರ್ಧರಿಸಿ. ಮಕ್ಕಳ ವಿಚಾರದಲ್ಲಿ ಹೆಮ್ಮೆ ಪಡುವಂತಹ ಕ್ಷಣಗಳು ಎದುರಾಗುವುದು.
ಕುಂಭ
ಸಮಯವನ್ನು ಅರಿತು ಅಧಿಕಾರಿ ವರ್ಗದವರಲ್ಲಿ ಎಚ್ಚರಿಕೆಯಿಂದ ವರ್ತಿಸುವುದರಿಂದ ಯಶಸ್ಸು . ಸ್ನೇಹಿತರೊಂದಿಗಿನ ಹರಟೆ ಮನಸ್ಸನ್ನು ಹಗುರಗೊಳಿಸಲು ಕಾರಣವಾಗುವುದು.
ಮೀನ
ನಾಲ್ಕಾರು ಮಾತುಗಳನ್ನು ಕೇಳಬೇಕಾದ ಸಂದರ್ಭ ಬರಬಹುದು. ವೃತ್ತಿರಂಗದಲ್ಲಿ ನಿಮ್ಮ ತಿಳಿವಳಿಕೆಯೇ ಅಂತಿಮವೆಂದು ತಿಳಿದುಕೊಳ್ಳಬೇಡಿ. ಪ್ರವಚನ ಕೇಳುವುದರತ್ತ ಮನಸ್ಸು ಹರಿಯಲಿದೆ.
ADVERTISEMENT
ADVERTISEMENT