ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಹಸಿರು ಬಣ್ಣ ಶುಭ ತರಲಿದೆ
Published 16 ಆಗಸ್ಟ್ 2024, 0:20 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕೌಟುಂಬಿಕ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಹಿರಿಯರ ಸಲಹೆ ಪಡೆದು, ಅಂತಿಮ ತೀರ್ಮಾನಕ್ಕೆ ಬರುವುದು ಉತ್ತಮ. ದಂತ ವೇದನೆಯಿಂದ ದಂತವೈದ್ಯರನ್ನು ಸಂಪರ್ಕಿಸಬೇಕಾಗಬಹುದು.
ವೃಷಭ
ಸಮಾಜದಲ್ಲಿ ಹೆಸರು ಸಂಪಾದಿಸಲು ಪೂರಕ ವಾತಾವರಣ ಇರಲಿದೆ. ವಸ್ತ್ರ ವಿನ್ಯಾಸದಲ್ಲಿ ವಿಶೇಷ ಪರಿಣತಿ ಪಡೆದುಕೊಳ್ಳುವಿರಿ. ಕೊಡು ಕೊಳ್ಳುವಿಕೆ ವ್ಯವಹಾರಗಳು ಹೆಚ್ಚಲಿದೆ.
ಮಿಥುನ
ತಂದೆಯ ಮನಸ್ಸನ್ನು ನೋಯಿಸದೆ, ಅವರ ಸಲಹೆಯಂತೆ ನಡೆಯುವುದು ಶ್ರೇಯಸ್ಕರವಾಗಿರುತ್ತದೆ. ಹಿರಿಯರ ಆಶೀರ್ವಾದ ಮತ್ತು ಮಾರ್ಗದರ್ಶನ ನಿಮ್ಮ ಪಾಲಿಗಿರುವುದರಿಂದ ಶುಭವಾಗುವುದು.
ಕರ್ಕಾಟಕ
ನಿಂತುಹೋಗಿದ್ದ ಕಾರ್ಯಗಳು ಪುನಃ ಆರಂಭಗೊಳ್ಳುವುದು. ಉದ್ಯೋಗ ನಿಮಿತ್ತ ವಿದೇಶಕ್ಕೆ ಪ್ರಯಾಣಿಸಬೇಕಾದ ಸಾಧ್ಯತೆ ಇದೆ. ಸಾಲದ ಹೊರೆ ಕಡಿಮೆಯಾಗಲಿದೆ.
ಸಿಂಹ
ಸ್ವಾರ್ಥ ಅಪೇಕ್ಷೆ ಇಲ್ಲದೆ ಮಾಡುತ್ತಿರುವ ಕೆಲಸಗಳಿಗೆ ಸಕಾರಾತ್ಮಕ ಪ್ರತಿಫಲ ಇರುತ್ತದೆ. ಸೂಕ್ಷ್ಮ ವಿಚಾರಗಳ ಬಗ್ಗೆ ನಿರ್ಧರಿಸುವಾಗ ಎಚ್ಚರ ವಹಿಸುವುದು ಉತ್ತಮ. ದುರ್ಗಾದೇವಿಯನ್ನು ಪ್ರಾರ್ಥಿಸಿ.
ಕನ್ಯಾ
ವಿದೇಶಿ ಸಂಸ್ಥೆಗಳೊಡನೆ ಸಹಭಾಗಿತ್ವ ಒಪ್ಪಂದ ಮಾಡಿಕೊಳ್ಳುವುದ ರಿಂದ ಹೆಚ್ಚಿನ ಆದಾಯ ಮತ್ತು ಸಮಾಜದಲ್ಲಿ ಉನ್ನತ ಸ್ಥಾನಮಾನ ಸಿಗುವ ಸಾಧ್ಯತೆ ಇದೆ. ಕೆಲಸದಲ್ಲಿ ದೋಷಗಳುಂಟಾಗಬಹುದು. ಎಚ್ಚರ ವಹಿಸಿ.
ತುಲಾ
ಕಾರ್ಯಸಾಧನೆಗಳಿಗೆ ಆಲಸ್ಯ ಅಡ್ಡಿಯಾಗುವ ಸಂಭವವಿದೆ. ವೃತ್ತಿಯಲ್ಲಿ ಹೊಸ ಬದುಕು ಆರಂಭಿಸಲು ಅವಕಾಶಗಳ ಬಾಗಿಲು ತೆರೆದಿದೆ. ನಿಮ್ಮೆಲ್ಲಾ ಸಮಸ್ಯೆಗಳಿಗೆ ಮುಕ್ತಿಸಿಗಲಿದೆ.
ವೃಶ್ಚಿಕ
ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಉತ್ತಮಗೊಳಿಸಿಕೊಳ್ಳುವ ಅವಕಾಶ ಸಿಗಲಿದೆ. ಖಾದ್ಯ ತೈಲಗಳ ವ್ಯಾಪಾರಗಳಿಂದ ಹೇರಳ ಲಾಭ ಪಡೆಯುವಿರಿ. ಕಂಕಣ ಬಲದ ಸಾಧ್ಯತೆ ಹೆಚ್ಚಿದೆ.
ಧನು
ಇಂದಿನ ಕೆಲಸವನ್ನು ಇಂದಿನ ದಿನವೇ ಮುಗಿಸುವ ಜವಾಬ್ದಾರಿ ಮೈಗೂಡಿಸಿಕೊಳ್ಳಿ. ನಿಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಲು ಬೇಕಾದಷ್ಟು ಅವಕಾಶಗಳು ಒದಗಿ ಬರುವುವು. ಹಸಿರು ಬಣ್ಣ ಶುಭತರಲಿದೆ.
ಮಕರ
ಆಭರಣ ಅಥವಾ ಬಟ್ಟೆ ವ್ಯಾಪಾರಿಗಳು ಪತ್ರಿಕೆಯವರ ಸಹಕಾರದಿಂದ ಪ್ರಚಾರ ಪಡೆದುಕೊಳ್ಳಬಹುದು. ಖರ್ಚು ವೆಚ್ಚಗಳ ಮೇಲೆ ಹಿಡಿತ ಸಾಧಿಸಿ. ನಿಮ್ಮ ಆಲೋಚನೆಗಳು ಇತರರ ಮೆಚ್ಚುಗೆಗೆ ಪಾತ್ರವಾಗಲಿದೆ.
ಕುಂಭ
ಕೆಲಸ ಕಾರ್ಯಗಳಲ್ಲಿ ಪ್ರಯತ್ನಕ್ಕೆ ತಕ್ಕ ಫಲ ದೊರಕಲಿದೆ. ಸೋಮಾರಿತನ, ಅತಿಯಾದ ನಿದ್ದೆಯು ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯುಂಟು ಮಾಡಲಿವೆ. ವಿದೇಶಿ ವಸ್ತು ಖರೀದಿಸುವ ಸಾಧ್ಯತೆ ಇದೆ.
ಮೀನ
ತಾಯಿಯ ದೇಹದಲ್ಲಿ ವಾಯು ಪ್ರಕೋಪದಿಂದ ಹಲವು ಸಮಸ್ಯೆಗಳು ಕಾಡಬಹುದು. ಸ್ಟೇಷನರಿ ಮತ್ತು ಫ್ಯಾನ್ಸಿ ವಸ್ತುಗಳ ಮಾರಾಟದಿಂದ ಲಾಭವಾಗಲಿದೆ. ಅಧ್ಯಯನ ನಿರತರಿಗೆಅಗತ್ಯ ಸಹಾಯ ದೊರಕಲಿದೆ.
ADVERTISEMENT
ADVERTISEMENT