ಗುರುವಾರ, 21 ಮೇ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಆರ್ಥಿಕ ಸ್ಥಿತಿಯು ಅವನತಿಯ ಹಂತ ತಲುಪುವ ಸ್ಥಿತಿ ಗೋಚರಕ್ಕೆ ಬರಬಹುದು
Published 11 ಏಪ್ರಿಲ್ 2026, 22:40 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಆರ್ಥಿಕ ಸ್ಥಿತಿಯು ಅವನತಿಯ ಹಂತವನ್ನು ತಲುಪುವ ಸ್ಥಿತಿ ಗೋಚರಕ್ಕೆ ಬರಬಹುದು, ಜಾಗ್ರತೆವಹಿಸಿ. ಸ್ನೇಹಿತರ ಸಂಪರ್ಕದಿಂದ ಜೀವನ ನಡೆಸಲು ಬೇಕಾದ ಉಪಾಯವನ್ನು ಹೊಂದುವಿರಿ.
ವೃಷಭ
ಸ್ವಯಂಕೃತ ಅಪರಾಧದಿಂದ ಉಲ್ಲಾಸವನ್ನು ಕಳೆದುಕೊಳ್ಳುವ ಸಮಯ ಎದುರಾಗಲಿದೆ. ಮನದಲ್ಲಿ ಭಯ ತೋರಿಬಂದೀತು. ಸಹಕಾರ ಮನೋಭಾವದಿಂದ ಸಂಬಂಧಗಳು ಮತ್ತಷ್ಟು ಸುಧಾರಿಸಲಿದೆ.
ಮಿಥುನ
ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿಸಿದ ಲಾಭ ಪಡೆಯಲು ಪರಿಶ್ರಮದ ಜೊತೆಯಲ್ಲಿ ಬುದ್ಧಿವಂತಿಕೆಯೂ ಮುಖ್ಯವಾಗುವುದೆಂದು ತಿಳಿದುಬರುವುದು. ತಂದೆ ತಾಯಿಯ ಇಷ್ಟಾರ್ಥಗಳು ಪೂರ್ಣಗೊಳಿಸುವ ಬಗ್ಗೆ ಗಮನಹರಿಸಿ.
ಕರ್ಕಾಟಕ
ರೈತಾಪಿವರ್ಗದವರು ತಮ್ಮ ವೃತ್ತಿಯಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಿಂದ ಅಭಿವೃದ್ಧಿಯನ್ನು ಕಾಣಬಹುದು. ನೋವಿನ ಸಂಗತಿಗಳೆಲ್ಲಾ ಕಳೆದು ನಲಿವಿನ ದಿನ ಇದಾಗಲಿದೆ.
ಸಿಂಹ
ಕಾಫಿ, ಕಾಳುಮೆಣಸು ಹಾಗೂ ಏಲಕ್ಕಿ ಬೆಳೆಗಾರರು ಉತ್ತಮ ಲಾಭವನ್ನು ಎದುರು ನೋಡಬಹುದು. ಈ ದಿನ ನಡೆಯುವ ಎಲ್ಲಾ ವಿಷಯಗಳಲ್ಲಿಯೂ ನಿಮ್ಮ ಸ್ವಾಭಾವಿಕ ಗುಣಕ್ಕಿಂತ ಹೆಚ್ಚಿನ ಸಮಾಧಾನದಿಂದಿರುವುದು ಉತ್ತಮ.
ಕನ್ಯಾ
ಪತ್ರಿಕಾ ವರದಿಗಾರರು ಕೆಲಸದಲ್ಲಿನ ದಕ್ಷತೆಯಿಂದ ಹೆಚ್ಚಿನ ಯಶಸ್ಸನ್ನು ಕಾಣುವರು. ಸ್ನೇಹಪರ ಸ್ವಭಾವದಿಂದಾಗಿ ವೈಯಕ್ತಿಕ ಸ್ಥಾನಮಾನಗಳು ಲಭಿಸುವುದು. ಸತ್ಕಾರ್ಯಗಳಿಂದಾಗಿ ಮನೆಯಲ್ಲಿ ಸಡಗರವಿರುವುದು.
ತುಲಾ
ಹೂಡಿಕೆ ವಿಚಾರದಲ್ಲಿ ಯೋಚಿಸಿ ತೀರ್ಮಾನ ಕೈಗೊಳ್ಳುವಂತೆ ಮಿತ್ರರಿಂದ ಸಲಹೆ ಬರುವುದು. ವಾಯು ಪ್ರಕೋಪದಿಂದ ದೈಹಿಕವಾಗಿ ಹಲವು ಸಮಸ್ಯೆಗಳು ಕಾಡಬಹುದು. ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವುದು.
ವೃಶ್ಚಿಕ
ರಾಜಕೀಯ ಕ್ಷೇತ್ರದಲ್ಲಿ ಇರುವವರು ಪಕ್ಷ ಬಲಪಡಿಸಲು, ಅನುಯಾಯಿಗಳನ್ನು ಸಂಪಾದಿಸಿಕೊಳ್ಳಲು ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗುತ್ತದೆ. ಸಾಹಿತ್ಯ ಕ್ಷೇತ್ರದಲ್ಲಿ ಭಾಗಿಯಾಗಿ ಸಂತೋಷವಾಗುವುದು.
ಧನು
ಅಸಾಧ್ಯ ಕಾರ್ಯಗಳನ್ನೂ ಸಾಧಿಸಿ ತೋರಿಸುವಷ್ಟು ಮನೋಬಲ ನಿಮ್ಮಲ್ಲಿದೆ. ಆದರೆ ಆ ಛಲವನ್ನು ಒಳ್ಳೆಯ ಮಾರ್ಗದಲ್ಲಿ ಉಪಯೋಗಿಸಿಕೊಳ್ಳಿ. ಸಾಲ ತೆಗೆದುಕೊಂಡ ಹಣವನ್ನು ಹಿಂದುರುಗಿಸುವ ಬಗ್ಗೆ ಯೋಚಿಸಿ.
ಮಕರ
ನಿಮ್ಮ ದೈನಂದಿನ ಯಾಂತ್ರಿಕ ಬದುಕಿನಿಂದ ಸ್ವಲ್ಪ ವಿರಾಮ ಪಡೆದು ಕುಟುಂಬದೊಂದಿಗೆ ಕಾಲ ಕಳೆಯುವ ಆಲೋಚನೆ ಕೈಗೂಡಲಿದೆ. ರಹಸ್ಯವಾಗಿ ಸಿಗುವ ಬೆಂಬಲದಿಂದ ನಿಮ್ಮ ಕನಸುಗಳು ನನಸಾಗಲಿವೆ.
ಕುಂಭ
ಕೈಗೆಟಕುವ ಕಾರ್ಯವೊಂದು ನಿಮ್ಮ ಪ್ರಯತ್ನದಿಂದ ಆಶ್ಚರ್ಯಕರ ರೀತಿಯಲ್ಲಿ ಸಿದ್ಧಿಸಬಹುದು. ದಿನಸಿ ವ್ಯವಹಾರಗಳಲ್ಲಿ ಹೆಚ್ಚಿನ ಹೂಡಿಕೆಯಿಂದ ಲಾಭವಾಗುವುದು. ರೇಷ್ಮೆ ಬೆಳೆಗಾರರಿಗೆ ಹೆಚ್ಚಿನ ಕೆಲಸ ಇರಲಿದೆ.
ಮೀನ
ಕೇವಲ ಆಧ್ಯಾತ್ಮಿಕ ವಿಷಯಗಳತ್ತ ಮನಸ್ಸು ಹರಿಯುವುದರಿಂದ ಅದರಲ್ಲಿಯೇ ಹೆಚ್ಚಿನ ಸಮಯವನ್ನು ಕಳೆಯುವಂತಾಗುವುದು. ಇತರರ ಸಂತೋಷದಲ್ಲಿ ನಿಮ್ಮ ನೆಮ್ಮದಿ ಹಾಗೂ ಸಂತೋಷವನ್ನು ಪಡೆಯುವಿರಿ.
ADVERTISEMENT
ADVERTISEMENT