ದಿನ ಭವಿಷ್ಯ: ಮದುವೆಗೆ ಇರುವ ಅಡಚಣೆಗಳನ್ನು ಬಗೆಹರಿಸಿಕೊಳ್ಳುವ ಬಗ್ಗೆ ಗಮನಹರಿಸಿ
Published 26 ಮಾರ್ಚ್ 2026, 23:31 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಅಚ್ಚರಿಯೆನಿಸುವ ಸುದ್ದಿಯೊಂದು ಅನ್ಯರ ಮೂಲಕ ತಿಳಿಯಲಿದೆ. ಯಾರಲ್ಲೂ ಹೇಳಿಕೊಳ್ಳದೇ ಇರುವುದು ಉತ್ತಮ. ರಾಜಕೀಯದಿಂದ ವೈಯಕ್ತಿಕ ಅನುಕೂಲಗಳಾಗಲಿವೆ.
26 ಮಾರ್ಚ್ 2026, 23:31 IST
ವೃಷಭ
ಮಾದರಿಯಾಗುವಂತೆ ಜೀವನ ನಡೆಸಬೇಕೆಂಬುವ ಆಸೆಗೆ ಪುಷ್ಟಿ ಕೊಡುವ ವಾತಾವರಣ ಸಿಗಲಿದೆ. ಮದುವೆಗೆ ಇರುವ ಅಡಚಣೆಗಳನ್ನು, ಸಮಸ್ಯೆ ಬಗೆಹರಿಸಿಕೊಳ್ಳುವ ಬಗ್ಗೆ ಗಮನಹರಿಸಿ.
26 ಮಾರ್ಚ್ 2026, 23:31 IST
ಮಿಥುನ
ಸಮಸ್ಯೆಗಳಿಗೆ ಪೊಲೀಸರಿಂದ ಪರಿಹಾರ ತೆಗೆದುಕೊಳ್ಳಿ. ಜೀವನದಲ್ಲಿ ಸಾಂಸಾರಿಕವಾಗಿ ನೆಲೆ ಕಂಡ ಸಂತೃಪ್ತಿ ಭಾವ ನಿಮ್ಮಲ್ಲಿ ಮೂಡಲಿದೆ. ಇರುವ ಖುಷಿಯನ್ನು ಅನುಭವಿಸಿ.
26 ಮಾರ್ಚ್ 2026, 23:31 IST
ಕರ್ಕಾಟಕ
ಮಗಳ ಮದುವೆಯ ವಿಚಾರದಲ್ಲಿ ಸಂಬಂಧಗಳು ಹುಡುಕಿಕೊಂಡು ಬಂದರೂ ಈ ದಿನವೇ ಒಪ್ಪಿಗೆ ತಿಳಿಸದಿರಿ. ವೈದ್ಯರ ಸಲಹೆಯಂತೆಯೇ ನಡೆದರೆ ಮಕ್ಕಳ ಆರೋಗ್ಯವು ಉತ್ತಮ.
26 ಮಾರ್ಚ್ 2026, 23:31 IST
ಸಿಂಹ
ಭಾವನೆಗಳಿಗೆ ಬೆಲೆ ಕೊಡುವ ಸಂಗಾತಿ ಸಿಕ್ಕಿರುವುದರಿಂದ ಸಂತೋಷ ಇಮ್ಮಡಿಗೊಳ್ಳುತ್ತದೆ. ಕೋರ್ಟು-ಕಚೇರಿಗಳಲ್ಲಿ ಯಶಸ್ಸು ಪಡೆಯಲಿದ್ದೀರಿ. ಖರ್ಚು ವೆಚ್ಚಗಳಲ್ಲಿ ಮಿತ ವ್ಯಯ ಸಾಧಿಸಲು ಪ್ರಯತ್ನಿಸಿ.
26 ಮಾರ್ಚ್ 2026, 23:31 IST
ಕನ್ಯಾ
ಇನ್ನೊಬ್ಬರನ್ನು ಹೀಯಾಳಿಸುವ ಬುದ್ಧಿಗೆ ಪೂರ್ಣವಿರಾಮ ಹೇಳಿ. ಆತ್ಮವಿಶ್ವಾಸ ಹಾಗೂ ಧನಾತ್ಮಕ ಮನೋಭಾವ ಇದ್ದರೆ ಅದುವೇ ಗೆಲುವಿಗೆ ಕಾರಣವಾಗಲಿದೆ.
26 ಮಾರ್ಚ್ 2026, 23:31 IST
ತುಲಾ
ಕೈ ತಪ್ಪಿ ಹೋಗಿದ್ದ ಕೆಲವು ಕೆಲಸಗಳು ಹಿರಿಯರೊಬ್ಬರ ಸಹಾಯದಿಂದ ಪುನಃ ದೊರೆಯಲಿದೆ. ನ್ಯಾಯಾಂಗ ಇಲಾಖೆಯಲ್ಲಿ ಇರುವವರಿಗೆ ಬಡ್ತಿ ಅಥವಾ ವರ್ಗಾವಣೆಯ ಸಾಧ್ಯತೆಗಳಿದೆ. ನೂತನ ವಾಹನ ಖರೀದಿಯ ಯೋಗವಿದೆ.
26 ಮಾರ್ಚ್ 2026, 23:31 IST
ವೃಶ್ಚಿಕ
ಅವಸರ ಮತ್ತು ಉದ್ವೇಗ ಇವೆರಡೂ ತಲೆ ತಗ್ಗಿಸುವಂತೆ ಮಾಡುತ್ತದೆ. ವ್ಯವಹಾರದ ವಿಸ್ತರಣೆಗೆ ಸ್ನೇಹಿತರಿಂದ ಉತ್ತಮ ಸಲಹೆ ಸಹಾಯವಿರುವುದು. ಕಲಾವಿದರ ಅಭ್ಯಾಸದ ಫಲದಿಂದ ಅವಕಾಶಗಳು ಲಭ್ಯ.
26 ಮಾರ್ಚ್ 2026, 23:31 IST
ಧನು
ಸಂಸಾರದಲ್ಲಿ ಅನುಮಾನ ಪಡುವುದು ಅಥವಾ ಹಲವು ವಿಚಾರವನ್ನು ಪತ್ನಿಯಿಂದ ಮುಚ್ಚಿಡುವ ಕೆಲಸವನ್ನು ಮಾಡುವುದು ಸರಿಯಲ್ಲ. ಖರ್ಚು ವೆಚ್ಚಕ್ಕೆ ಸಂಬಂಧಿಸಿದಂತೆ ಯೋಚಿಸಿ ಹೆಜ್ಜೆ ಇಡುವುದು ಸೂಕ್ತ.
26 ಮಾರ್ಚ್ 2026, 23:31 IST
ಮಕರ
ನೂತನ ಪ್ರಾರಂಭದ ಬಗ್ಗೆ ತಿಳಿದವರಲ್ಲಿ ಸಲಹೆ ಪಡೆಯುವುದು ಸನ್ಮಾರ್ಗವನ್ನು ತೋರಿಸಿಕೊಡುತ್ತದೆ. ಒಪ್ಪಂದಗಳು ಹಾಗೂ ಹಣದ ಹೂಡಿಕೆ ಮಾಡದಿರಿ.
26 ಮಾರ್ಚ್ 2026, 23:31 IST
ಕುಂಭ
ಬಿಡುವಿಲ್ಲದ ಕೆಲಸದಿಂದ ಬಳಲಿರುವ ನೀವು ವಿಶ್ರಾಂತಿಗಾಗಿ ಸ್ವಲ್ಪ ಸಮಯ ಮೀಸಲಿಡಿ. ಹೊಸ ಮನೆಯ ಕೆಲಸಗಳು ಮುಕ್ತಾಯ ಹಂತ ತಲುಪುವುದರಿಂದ ಮನಸ್ಸಿಗೆ ನೆಮ್ಮದಿ ಇರಲಿದೆ.
26 ಮಾರ್ಚ್ 2026, 23:31 IST
ಮೀನ
ವಹಾರಗಳನ್ನು ನೇರ ನಡೆ ನುಡಿಯಿರುವವರೊಂದಿಗೆ ಮಾತ್ರ ಮುಂದುವರಿಸಿ. ನಿಮ್ಮ ಪ್ರಯತ್ನಗಳು ಫಲಕಾರಿಯಾಗಿ ಆರ್ಥಿಕವಾಗಿ ಎಲ್ಲಾ ರೀತಿಯಲ್ಲಿ ಅನುಕೂಲ ಉಂಟಾಗುವುದು.
26 ಮಾರ್ಚ್ 2026, 23:31 IST