ದಿನ ಭವಿಷ್ಯ: ಸುಖಾಸುಮ್ಮನೆ ಅಪವಾದ ಹೊತ್ತಿರುವ ಈ ರಾಶಿಯವರಿಗೆ ನ್ಯಾಯ ಸಿಗಲಿದೆ
Published 7 ಜುಲೈ 2025, 0:48 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ದೇವತಾ ಕಾರ್ಯಗಳು ಕೈಗೊಳ್ಳುವ ತೀರ್ಮಾನ ಮಾಡುವಿರಿ. ಶತ್ರುಪೀಡೆ, ಕಿರುಕುಳ ಆಗಾಗ ತೋರಿಬಂದರೂ ದೇವರ ಕೃಪೆಯಿಂದ ಎಲ್ಲವು ನಿರ್ಮೂಲವಾಗುವುದು. ಕಾರ್ಯಗಳು ಪೂರ್ಣಗೊಳ್ಳಲಿವೆ.
ವೃಷಭ
ವ್ಯವಹಾರಸ್ಥರಿಗೆ ಲಾಭ ಸಿಗಲಾರದು . ನಷ್ಟವೂ ಇರಲಾರದು. ಅರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಇರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗಾ ವಕಾಶ ದೊರಕುತ್ತದೆ. ನರಸಿಂಹ ದೇವರ ಸೇವೆಯಿಂದ ಉತ್ತಮ ಫಲ.
ಮಿಥುನ
ಎಣಿಕೆಯ ಕಾರ್ಯಗಳೆಲ್ಲ ದೈಹಿಕ ಶ್ರಮವಿಲ್ಲದೆ ಪೂರ್ಣಗೊಳ್ಳುವುದರಿಂದ ಸಮಯವನ್ನು ಸಂತೋಷದಿಂದ ಕಳೆಯಲಿದ್ದೀರಿ. ಪರಸ್ಪರ ಕಾಳಜಿಗಳ ಬಗ್ಗೆ ಪಾಲುದಾರರು ಸಂತಸದ ಒಪ್ಪಿಗೆ ನೀಡುತ್ತಾರೆ.
ಕರ್ಕಾಟಕ
ಹಿರಿಯರ ಪ್ರಭಾವ ಹಾಗೂ ಗುರುವಿನ ಕೃಪೆಯಿಂದ ಜನೋಪಕಾರಿ ಕೆಲಸಗಳು ಕೈಗೂಡಲಿವೆ. ಗೌರವ ಸಿಗಲಿದೆ. ಪತ್ನಿ ಮಕ್ಕಳೊಂದಿಗೆ ಸಂತಸದ ವಾತಾವರಣವಿರುವುದು.
ಸಿಂಹ
ಮಿತ್ರರಲ್ಲಿ, ಬಂಧು-ಬಾಂಧವರ ವಿಚಾರದಲ್ಲೂ ವಿರೋಧವನ್ನು ವ್ಯಕ್ತಪಡಿಸಬೇಡಿ. ಕಾರ್ಯಕ್ಷೇತ್ರದಲ್ಲಿ ಶಾಂತಚಿತ್ತದಿಂದ ಕಾರ್ಮಿಕರ ಮಾತುಗಳನ್ನು ಆಲಿಸಿ ಸೂಕ್ತ ಕ್ರಮ ಕೈಗೊಳ್ಳಿ.
ಕನ್ಯಾ
ಧನಾಗಮನಕ್ಕೇನೂ ಕೊರತೆಯಿರದು. ಹೆಜ್ಜೆ ಹೆಜ್ಜೆಗೂ ಎಚ್ಚರಿಕೆ ಅಗತ್ಯವಿದೆ. ಶೀತ, ಕಫದಂತಹ ಬೇನೆಯನ್ನು ನಿರ್ಲಕ್ಷಿಸಬೇಡಿ. ಸ್ವಂತ ಕಾರ್ಯಗಳೆಲ್ಲವೊ ಜಯಪ್ರದವಾಗಲಿವೆ.
ತುಲಾ
ಕತ್ತಲೆಯ ಪ್ರಪಂಚದಲ್ಲಿರುವ ಜೀವನಕ್ಕೆ ದೂರದಲ್ಲೊಂದು ಜ್ಯೋತಿ ಕಾಣಲಿದೆ. ಮೇಲಧಿಕಾರಿಗಳ ಕಿರುಕುಳದಿಂದ ಹೊರಬರುವ ಕಾಲ ಸಮೀಪದಲ್ಲಿದೆ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗದಿರಬಹುದು.
ವೃಶ್ಚಿಕ
ಆನುವಂಶಿಕ ಬೇಡಿಕೆಯೊಂದು ಈಡೇರುವುದರಿಂದ ಕೊಂಚ ನೆಮ್ಮದಿ ಸಿಗಲಿದೆ. ಪ್ರಯಾಣದಲ್ಲಿ ವಂಚನೆ, ನಷ್ಟದ ಪ್ರಸಂಗಗಳಿವೆ. ಎಚ್ಚರಿಕೆಯಿಂದಿರಿ. ಇಟ್ಟಿಗೆ, ಕಬ್ಬಿಣ, ಯಂತ್ರಸಾಮಗ್ರಿಗಳ ಮಾರಾಟ ಏರುಗತಿಯಲ್ಲಿ ನಡೆದೀತು.
ಧನು
ವಾಹನ ಖರೀದಿಯ ಆಲೋಚನೆ ನಿಮ್ಮಿಷ್ಟದಂತೆಯೇ ನೆರವೇರಲಿದೆ.ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರ ವಹಿಸಿದರೆ ಲೇಸು. ರಕ್ತಸಂಬಂಧಿ ಕಾಯಿಲೆಯ ಲಕ್ಷಣ ಕಾಣಿಸೀತು. ದೈವ ಆರಾಧನೆ ಬಿಡದಿರಿ.
ಮಕರ
ಕೆಲಸಕ್ಕೆ ದುಪ್ಪಟ್ಟು ಸಂಪಾದನೆಯಾಗುವ ಯೋಗವಿದೆ. ಮಾತುಗಾರರಿಗೆ, ವಾಗ್ಮಿಗಳಿಗೆ, ಬೋಧಕ ವರ್ಗದವರಿಗೆ ವೃತ್ತಿಯಲ್ಲಿ ಬಡ್ತಿ ಅಥವಾ ಸನ್ಮಾನಗಳು ದೊರಕಲಿವೆ.
ಕುಂಭ
ತಂದೆ-ತಾಯಿಯ ಆರೋಗ್ಯದ ಕಡೆಗೆ ಗಮನ ಕೊಡುವುದು ಅನಿವಾರ್ಯ. ವಿದ್ಯಾರ್ಥಿಗಳಿಗೆ ಶ್ರೇಯಸ್ಸು, ಮೇಧಾಶಕ್ತಿ ಹೆಚ್ಚಲಿದೆ. ಸರ್ವತೋಮುಖ ಅಭಿವೃದ್ಧಿಗೆ ಸೋದರವರ್ಗದವರ ಬೆಂಬಲ ಸಿಗಲಿದೆ.
ಮೀನ
ಸುಖಾಸುಮ್ಮನೆ ಅಪವಾದದ ಆರೋಪ ಹೊತ್ತಿರುವ ನಿಮಗೆ ನ್ಯಾಯ ಸಿಗಲಿದೆ. ವ್ಯಾಪಾರಿಗಳಿಗೆ ಲಾಭದಾಯಕ ಬೆಳವಣಿಗೆ. ಸೇವಕ ವರ್ಗದವರಿಗೆ, ಆರಕ್ಷಕರಿಗೆ, ತಾಂತ್ರಿಕರಿಗೆ ಉದ್ಯೋಗದಲ್ಲಿ ಉನ್ನತ ಸ್ಥಾನಮಾನ ದೊರಕಲಿದೆ.