ಸೋಮವಾರ, 18 ಮೇ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರ ದಾಂಪತ್ಯದಲ್ಲಿ ಮನಸ್ತಾಪ ಉಂಟಾಗಬಹುದು, ಎಚ್ಚರವಹಿಸಿ
Published 13 ಏಪ್ರಿಲ್ 2026, 21:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
 ಅವಕಾಶಗಳು ಅರಸಿ ಬಂದರೂ ಸರಿಯಾದದನ್ನು ಆಯ್ಕೆ ಮಾಡು ವುದರಲ್ಲಿ ದುಡುಕುವ ಲಕ್ಷಣಗಳಿವೆ. ನಿಶ್ಚಿತ ರೂಪದಲ್ಲಿ ,ಸಮಯಕ್ಕೆ ಸರಿಯಾಗಿ ಕೆಲಸಗಳು ಜರುಗಲಿವೆ. ಕೃಷಿ ಉತ್ಪನ್ನಗಳಿಂದ ಉತ್ತಮ ಆದಾಯವಿದೆ.
ವೃಷಭ
ವಿದ್ಯಾರ್ಥಿಗಳ ಅಧ್ಯಯನದಲ್ಲಿ ಪ್ರಗತಿ ಇರಲಿದೆ. ಹಿರಿಯರ ಅಥವಾ ಗುರುಗಳ ಸಲಹೆಗಳನ್ನು ಸ್ವೀಕರಿಸಿ. ಅಧಿಕಾರಿಗಳ ಖಾಸಗಿ ಸಂಪರ್ಕದಿಂದ ಕೆಲಸಗಳಿಗೆ ಪುಷ್ಟಿ ದೊರೆಯಲಿದೆ.
ಮಿಥುನ
ವ್ಯವಹಾರಕ್ಕೆ ಸಂಬಂಧಿಸಿದಂತೆ ಔದಾರ್ಯ ಬುದ್ಧಿಯನ್ನು ತೋರಿದಲ್ಲಿ ವಂಚನೆಗೆ ಒಳಗಾಗುವ ಸನ್ನಿವೇಶಗಳಿವೆ. ಯಂತ್ರೋಪಕರಣಗಳ ಮಾರಾಟದಿಂದ ಮತ್ತು ಅದರ ಸೇವೆಯಿಂದ ಲಾಭ ಪಡೆಯುವಿರಿ.
ಕರ್ಕಾಟಕ
ಅಡ್ಡಿ-ಆತಂಕ, ಭೀತಿ ಹಾಗೂ ಮನೋವ್ಯಾಕುಲಗಳಿಗೆ ಹೆದರುವ ಅವಶ್ಯಕತೆ ಇಲ್ಲ. ಮದುವೆ  ವಿಷಯಗಳತ್ತ ಗಮನಹರಿಸುವಂತೆ ಮನೆಯವರಿಂದ ಒತ್ತಡ ಬರಲಿದೆ. ಕುಟುಂಬದಲ್ಲಿ ಪರಿಸ್ಥಿತಿ ನಿಭಾಯಿಸುವಿರಿ.
ಸಿಂಹ
ಪರಿಸ್ಥಿತಿಗೆ ಹೊಂದಿಕೊಂಡು ಹೋಗುವ ಗುಣದಿಂದ ವಿವಾಹಕ್ಕೆ ಸಂಬಂಧಪಟ್ಟ ಭಿನ್ನಾಭಿಪ್ರಾಯವನ್ನು ದೂರ ಮಾಡಿಕೊಳ್ಳುವಿರಿ. ಒಳ್ಳೆಯ ಸ್ನೇಹಪರ ವರ್ತನೆಯಿಂದ ಅಕ್ಕ–ಪಕ್ಕದವರಲ್ಲಿ ಬಾಂಧವ್ಯ ಬೆಳೆಯಲಿದೆ.
ಕನ್ಯಾ
ದೈವಾನುಗ್ರಹದಿಂದ ಸಂತಾನ ಭಾಗ್ಯದ ಸುದ್ದಿ ಕೇಳುವಿರಿ. ಅದರ ಫಲವಾಗಿ ಮನೆಯಲ್ಲಿ ಸಡಗರದ ವಾತಾವರಣ ಸೃಷ್ಟಿಯಾಗಲಿದೆ. ಯೋಗ ಕಲಿಸಿಕೊಡುವವರಿಗೆ ಕೀರ್ತಿ ಸಂಪಾದನೆಯಾಗಲಿದೆ.
ತುಲಾ
ಆಂತರಿಕ ಸಮಸ್ಯೆ ಬಗೆಹರಿಯಬೇಕಾದರೆ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುವುದು. ದಾಂಪತ್ಯದಲ್ಲಿ ಆಗಾಗ ಸಮಸ್ಯೆಗಳು ತೋರಿಬಂದರೂ ಮುಂದಿನ ದಿನಗಳಲ್ಲಿ ಸಂತಸವಿದೆ.
ವೃಶ್ಚಿಕ
ಮಾತಿನಿಂದ ಕಾರ್ಯ ಸಾಧಿಸುವ ಗುಣದಿಂದ ಅನುಕೂಲಕರ ವಾತಾವರಣ ಕಾಣುವಿರಿ. ಆಂಜನೇಯಸಹಿತ  ಶ್ರೀರಾಮಚಂದ್ರನನ್ನು ಮನಃಪೂರ್ವಕವಾಗಿ ಪೂಜಿಸಿದರೆ ಫಲಪ್ರಾಪ್ತಿ. 
ಧನು
ದವಸ ಧಾನ್ಯಗಳ ವ್ಯಾಪಾರಸ್ಥರು ಎಚ್ಚರಿಕೆಯಿಂದಿದ್ದರೆ ಬಂಡವಾಳದ ಮೂಲಧನವನ್ನು ಕಾಪಾಡಿಕೊಳ್ಳಲು ಸಾಧ್ಯ. ದಾನ-ಧರ್ಮ ಪ್ರವೃತ್ತಿಯನ್ನು ರೂಢಿಸಿಕೊಳ್ಳುವುದರಿಂದ ಶುಭಫಲಗಳು  ಅನುಭವಕ್ಕೆ ಬರಲಿವೆ.
ಮಕರ
ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುವುದು. ನಾಯಕತ್ವದ ಗುಣಗಳನ್ನು ಪ್ರದರ್ಶಿಸಲು ವೇದಿಕೆ ಸಿಗಲಿದೆ. ಏರುಪೇರಾಗಿದ್ದ ವ್ಯವಹಾರಗಳನ್ನು ಉತ್ತಮ ರೀತಿಯಲ್ಲಿ ಸರಿಪಡಿಸಿಕೊಳ್ಳಿ.
ಕುಂಭ
ಪೆಟ್ರೋಲಿಯಂ ಉತ್ಪನ್ನಗಳ ಮಾರಾಟದಿಂದ  ಆದಾಯದ ಜತೆಯಲ್ಲಿ ಸಾಗಾಣಿಕೆಯಲ್ಲಿ  ಸಮಸ್ಯೆಗಳೂ ಕಾಣಬಹುದು. ಗೃಹ ನಿರ್ಮಾಣದ ಕೆಲಸವನ್ನು ಆರಂಭಿಸಲು ಸೂಕ್ತ ಸಮಯವನ್ನು ತಿಳಿದುಕೊಳ್ಳುವಿರಿ.
ಮೀನ
ಪರಿಶ್ರಮಕ್ಕೆ ಹಾಗೂ  ಪರೋಪಕಾರದ ವ್ಯಕ್ತಿತ್ವಕ್ಕೆ ತಕ್ಕ ಪ್ರತಿಫಲ ಹೊಂದುವಿರಿ. ಸಂಗೀತದಲ್ಲಿನ ಆಸಕ್ತಿಗೆ ಮನೆಯವರಿಂದ ಪ್ರೋತ್ಸಾಹ ಸಿಗಲಿದೆ. ಸಂಪಾದನೆ ಕಡಿಮೆಯಿದ್ದರೂ ಚಿಂತೆ ಇರದು.
ADVERTISEMENT
ADVERTISEMENT