ದಿನ ಭವಿಷ್ಯ: ಈ ರಾಶಿಯವರ ಆರ್ಥಿಕ ಪರಿಸ್ಥಿತಿ ಅಷ್ಟೇನು ಉತ್ತಮವಾಗಿರುವುದಿಲ್ಲ
Published 5 ಮಾರ್ಚ್ 2026, 19:40 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಹೊಸ ಯೋಜನೆಗಳನ್ನು ಪ್ರಾರಂಭಿಸಲು ಮತ್ತು ಬಾಕಿ ಉಳಿದ ಕೆಲಸವನ್ನು ಪೂರ್ತಿಗೊಳಿಸಲು ಈ ದಿನ ಪ್ರಶಸ್ತ. ತಂಪು ಪಾನೀಯ ವ್ಯಾಪಾರಸ್ಥರಿಗೆ ಲಾಭ-ನಷ್ಟದ ಪರಿಚಯವಾಗಲಿದೆ.
05 ಮಾರ್ಚ್ 2026, 19:40 IST
ವೃಷಭ
ನಿಮ್ಮಲ್ಲಿನ ಸೃಜನಶೀಲತೆಗೆ ಉತ್ತಮ ವೇದಿಕೆ ಸಿಗಲಿದೆ. ಜೀವನದಲ್ಲಿ ಭಾರಿ ಬದಲಾವಣೆಯನ್ನು ಕಾಣಲಿದ್ದೀರಿ. ಆಹಾರದಿಂದ ಆರೋಗ್ಯ ಹದಗೆಡುವ ಲಕ್ಷಣಗಳಿವೆ. ಜಾಗ್ರತರಾಗಿರಿ.
05 ಮಾರ್ಚ್ 2026, 19:40 IST
ಮಿಥುನ
ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಯಾವುದಾದರೊಂದು ಜವಾಬ್ದಾರಿಯನ್ನು ನಿಭಾಯಿಸುವಂಥ ಕೆಲಸದಲ್ಲಿ ಇರುವವರು ಚಾಣಾಕ್ಷತನದ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಉದರವ್ಯಾಧಿಯನ್ನು ನಿರ್ಲಕ್ಷಿಸಬೇಡಿ.
05 ಮಾರ್ಚ್ 2026, 19:40 IST
ಕರ್ಕಾಟಕ
ಸಹವರ್ತಿಗಳ ಜತೆ ಸಂಯಮದಿಂದ ವರ್ತಿಸಿ. ಗರ್ಭಿಣಿಯರು ವೈದ್ಯರ ಸಲಹೆಯಂತೆ ಔಷಧವನ್ನು ತೆಗೆದುಕೊಳ್ಳುವುದರ ಜೊತೆಗೆ ಪೌಷ್ಟಿಕ ಆಹಾರ, ದೈಹಿಕ ವ್ಯಾಯಾಮ ಗಮನಿಸಿ.
05 ಮಾರ್ಚ್ 2026, 19:40 IST
ಸಿಂಹ
ಸಂಶೋಧನಾ ವೃತ್ತಿಯಲ್ಲಿರುವವರಿಗೆ ಅಧ್ಯಯನಕ್ಕೆ ಸುಸಮಯ. ಸಹೋದ್ಯೋಗಿಯ ವಿರಾಮದಿಂದಾಗಿ ಉದ್ಯೋಗದಲ್ಲಿರುವ ಒತ್ತಡವನ್ನು ನಿವಾರಿಸಿಕೊಳ್ಳುವುದು ಕಷ್ಟವಾಗುತ್ತದೆ.
05 ಮಾರ್ಚ್ 2026, 19:40 IST
ಕನ್ಯಾ
ಸ್ವಂತ ಉದ್ಯೋಗ ನಡೆಸುವವರಿಗೆ ಸಂಪಾದನೆ ಕಡಿಮೆ ಇದ್ದರೂ ಉದ್ಯೋಗ ಬದಲಾಯಿಸದೆ ಅದನ್ನೇ ಮುಂದುವರಿಸಿ. ಬಂದ ಸಮಸ್ಯೆಗಳು ಆಂಜನೇಯನ ಅನುಗ್ರಹದಿಂದ ಸರಾಗವಾಗಿ ದೂರಾಗಲಿವೆ.
05 ಮಾರ್ಚ್ 2026, 19:40 IST
ತುಲಾ
ಪೂರ್ವನಿಯೋಜಿತ ಕಾರ್ಯಗಳು ಸರ್ವರ ಸಹಾಯದಿಂದ ಮಂದಗತಿಯಲ್ಲಿ ಪೂರ್ಣಗೊಳ್ಳಲಿವೆ. ಅವಕಾಶಗಳನ್ನು ಕೈತಪ್ಪಿ ಹೋಗದಂತೆ ನೋಡಿಕೊಳ್ಳಿ. ಮಾನಸಿಕ ಪೀಡೆಗಳಿಗೆ ಒಳಗಾಗದಂತೆ ಕಾಳಜಿವಹಿಸಿ.
05 ಮಾರ್ಚ್ 2026, 19:40 IST
ವೃಶ್ಚಿಕ
ಭೂಖರೀದಿ ಗೃಹ ನಿರ್ಮಾಣದಂತ ಕಾರ್ಯಗಳನ್ನು ಕೈಗೊಳ್ಳಲು ಉತ್ತಮ ಸಮಯ. ಇನ್ನೊಬ್ಬರನ್ನು ಹೋಲಿಸಿಕೊಳ್ಳದೇ ಅತಿಯಾಸೆ ಇಲ್ಲದೆ, ನಿಶ್ಚಿಂತೆಯಿಂದ ದುಡಿದಲ್ಲಿ ಆದಾಯವನ್ನು ಹೊಂದುವಿರಿ.
05 ಮಾರ್ಚ್ 2026, 19:40 IST
ಧನು
ಕುಟುಂಬದ ಮಾರ್ಗಸೂಚಿಯಂತೆ ಕಳೆದು ಹೋಗಿದ್ದ ವಸ್ತುಗಳೂ ಪತ್ತೆಯಾಗಲಿವೆ. ಅನಗತ್ಯ ಮಾತನ್ನು ಆಡುವುದರಿಂದ ನೆಮ್ಮದಿಗೆ ಭಂಗ ಉಂಟಾಗುವುದು. ಮಕ್ಕಳ ವಿಷಯದಲ್ಲಿ ಸಂಯಮದೊಂದಿಗೆ ವರ್ತಿಸುವಿರಿ.
05 ಮಾರ್ಚ್ 2026, 19:40 IST
ಮಕರ
ಸ್ವತ್ತು ಮಾರಾಟ ವಿಚಾರದಲ್ಲಿ ಸೋದರರ ಅಭಿಪ್ರಾಯವನ್ನು ಪಡೆದು ಮುಂದುವರಿಯುವಿರಿ. ಶುಭ ಕಾರ್ಯ ನಡೆಸಿಕೊಡುವಲ್ಲಿ ಪ್ರಮುಖ ಪಾತ್ರ ನಿಮ್ಮದಾಗಲಿದೆ. ಮೇಲಧಿಕಾರಿಗಳ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗುವಿರಿ.
05 ಮಾರ್ಚ್ 2026, 19:40 IST
ಕುಂಭ
ಆರ್ಥಿಕ ಪರಿಸ್ಥಿತಿ ಅಷ್ಟೇನು ಉತ್ತಮವಾಗಿರುವುದಿಲ್ಲ. ವ್ಯವಹಾರದಲ್ಲಿ ಮತ್ತು ಖರ್ಚು ವೆಚ್ಚದಲ್ಲಿ ಮಿತಬಳಕೆಯನ್ನು ಸಾಧಿಸಿ. ಷರತ್ತುಗಳುಳ್ಳ ಯಾವುದೇ ರೀತಿಯ ವ್ಯವಹಾರಗಳಿಗೂ ಕೈ ಹಾಕಬೇಡಿ.
05 ಮಾರ್ಚ್ 2026, 19:40 IST
ಮೀನ
ಹೂಡಿಕೆಯ ಬಗ್ಗೆ ಮುಂದಾಲೋಚನೆ ಹಾಗೂ ಎಚ್ಚರಿಕೆಯಿಂದ ತೀರ್ಮಾನ ಕೈಗೊಳ್ಳಿ. ಉದ್ಯೋಗಕ್ಕಾಗಿ ನಡೆಸಿದ ತೀವ್ರ ಪ್ರಯತ್ನ ಫಲ ನೀಡಲಿದೆ. ಕುಟುಂಬದವರ ಜವಾಬ್ದಾರಿ ನಿಮ್ಮ ಮೇಲಿರುತ್ತದೆ.
05 ಮಾರ್ಚ್ 2026, 19:40 IST