ದಿನ ಭವಿಷ್ಯ: ಈ ರಾಶಿಯವರಿಗೆ ಬಾಲ್ಯದ ಕನಸು ಈಡೇರುವ ದಿನ
Published 17 ಏಪ್ರಿಲ್ 2026, 21:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮಾಧ್ಯಮ ಮಿತ್ರರಿಂದ ತಪ್ಪು ಮಾಹಿತಿ ರವಾನೆಯಾಗಬಹುದು. ಹಾಗಾಗಿ ಜಾಗ್ರತೆ ವಹಿಸಿ. ದೈವಾರಾಧನೆಯಿಂದ ರೈತರಿಗೆ ಅನುಕೂಲ. ಬಾಲ್ಯದ ಕನಸು ಈಡೇರುವ ದಿನವಾಗಿದೆ.
17 ಏಪ್ರಿಲ್ 2026, 21:30 IST
ವೃಷಭ
ದಾಸ್ತಾನನ್ನು ಅಚ್ಚುಕಟ್ಟುಗೊಳಿಸುವ ಸಲುವಾಗಿ ರಿಯಾಯಿತಿಯ ದರದ ಮಾರಾಟವನ್ನು ಮಾಡುವ ಯೋಚನೆ ಮಾಡುವಿರಿ. ಅಮೂಲ್ಯ ವಸ್ತು ಬಹಳ ದಿನದ ನಂತರ ಕೈ ಸೇರಲಿದೆ.
17 ಏಪ್ರಿಲ್ 2026, 21:30 IST
ಮಿಥುನ
ಕೆಲವೊಂದು ಅನಿರೀಕ್ಷಿತ ಹಾಗೂ ಉತ್ತಮ ಘಟನೆಗಳು ಜರುಗಲಿವೆ. ಕುಡಿಯುವ ನೀರಿನ ಶುದ್ಧತೆಯ ಬಗ್ಗೆ ಗಮನಿಸಿ. ಎಲ್ಲರ ಪ್ರೀತಿ ವಿಶ್ವಾಸವನ್ನು ಗೆಲ್ಲುವಂತಾಗುತ್ತದೆ.
17 ಏಪ್ರಿಲ್ 2026, 21:30 IST
ಕರ್ಕಾಟಕ
ಮಾಡದೇ ಇರುವ ಕೆಲಸಗಳನ್ನು ಪೂರೈಸುವ ಬಗ್ಗೆ ಗಮನಹರಿಸಿ. ಇನ್ನೊಬ್ಬರಿಗೆ ಗೌರವವನ್ನು ಕೊಟ್ಟು ನಂತರದಲ್ಲಿ ನೀವು ಗೌರವವನ್ನುಅಪೇಕ್ಷಿಸಬಹುದು. ದೂರ ಪ್ರಯಾಣದ ಸಾಧ್ಯತೆಗಳು ಹೆಚ್ಚಿವೆ.
17 ಏಪ್ರಿಲ್ 2026, 21:30 IST
ಸಿಂಹ
ತಾಂತ್ರಿಕ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಪರಿಶ್ರಮದ ಜತೆ ದೇವರ ಕೃಪೆಗೆ ಪಾತ್ರರಾಗಬೇಕು. ಮಗಳ ಮದುವೆಯ ನಿಶ್ಚಯ ಸಂತೋಷವನ್ನು ಉಂಟುಮಾಡುತ್ತದೆ.
17 ಏಪ್ರಿಲ್ 2026, 21:30 IST
ಕನ್ಯಾ
ರೇಷ್ಮೆ ವ್ಯವಹಾರದಲ್ಲಿ ಆದಾಯವಿದ್ದು , ವ್ಯವಹಾರವನ್ನು ವಿಸ್ತರಿಸುವ ಬಗ್ಗೆ ಯೋಚಿಸುವಿರಿ. ಸಹೋದ್ಯೋಗಿಗಳ ಎಲ್ಲಾ ಸಲಹೆಗಳನ್ನು ನಿರಾಕರಣೆ ಮಾಡುವುದು ನಷ್ಟಕ್ಕೆ ಕಾರಣವಾಗುವುದು.
17 ಏಪ್ರಿಲ್ 2026, 21:30 IST
ತುಲಾ
ಕಾರ್ಯಕ್ಷೇತ್ರದಲ್ಲಿನ ಒತ್ತಡಗಳನ್ನು ಅನುಭವಿಸಲು ಕಷ್ಟವಾಗಬಹುದು. ಮನರಂಜನೆಗೂ ಸಾಕಷ್ಟು ಸಮಯವನ್ನು ಮೀಸಲಿಟ್ಟು ಮಡದಿ ಮಕ್ಕಳೊಂದಿಗೆ ಸಂತಸದಿಂದ ಇರುವಿರಿ.
17 ಏಪ್ರಿಲ್ 2026, 21:30 IST
ವೃಶ್ಚಿಕ
ಧಾರ್ಮಿಕ ಮುಖಂಡರ ಸಾಮಾಜಿಕ ಕಳಕಳಿಯ ಮಾತುಗಳು ಆಕರ್ಷಿ ಸಲಿವೆ. ಇಂದಿನಿಂದ ಸಾಮಾಜಿಕ ಸೇವೆ ಮಾಡುವ ನಿರ್ಧಾರ ಕೈಗೊಳ್ಳುವಿರಿ. ವೈಯಕ್ತಿಕ ಪ್ರಗತಿ, ಅಭಿವೃದ್ಧಿಯಿಂದ ಮನಸ್ಸಿಗೆ ಸಂತೋಷವಿರುವುದು.
17 ಏಪ್ರಿಲ್ 2026, 21:30 IST
ಧನು
ಅಡೆತಡೆಗಳು ಮನಸ್ಸನ್ನು ಚಂಚಲಗೊಳಿಸದಂತೆ ಜಾಗ್ರತೆ ವಹಿಸಿ. ಹೀಗೆ ಮಾಡಿದಲ್ಲಿ ಕೆಲಸದ ಗುಣಮಟ್ಟ, ಕರ್ತವ್ಯ ನಿಷ್ಠೆಯು ಮೇಲಧಿಕಾರಿಗಳ ಗಮನಕ್ಕೆ ಬಂದು ಬಡ್ತಿಗೆ ಮೂಲ ಕಾರಣವಾಗುತ್ತದೆ.
17 ಏಪ್ರಿಲ್ 2026, 21:30 IST
ಮಕರ
ಕೆಟ್ಟ ಪರಿಸ್ಥಿತಿಯಿಂದ ಹೊರಗೆ ಬರಲು ಕೆಲವು ಸಮಯದ ತನಕ ಮೌನವಾಗಿರಬೇಕು. ಹಾಡು ಹರಟೆಗಳಲ್ಲಿ ಕಾಲ ಕಳೆಯುವುದು ಬಿಡಿ.ಸೌಂದರ್ಯಪ್ರಜ್ಞೆಯು ಇತರರಿಗೂ ಮುದವನ್ನು ಕೊಡುವಂತಿರಲಿ.
17 ಏಪ್ರಿಲ್ 2026, 21:30 IST
ಕುಂಭ
ತಪ್ಪಿ ಹೋದ ಸ್ವಂತ ಆಸ್ತಿ ಅಥವಾ ಪಿತ್ರಾರ್ಜಿತ ಆಸ್ತಿ ಪುನಃ ನಿಮ್ಮ ಕೈ ಸೇರಲು ಪ್ರಯತ್ನ, ತಂತ್ರಗಾರಿಕೆ ಮುಖ್ಯವಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ವ್ಯಾಸಂಗ ಮಾಡುವಿರಿ.
17 ಏಪ್ರಿಲ್ 2026, 21:30 IST
ಮೀನ
ಕಾರ್ಯ ರಂಗದಲ್ಲಿ ಸತತ ಪ್ರಯತ್ನ ಮತ್ತು ಅನುಭವಸ್ಥರ ಸಹಯೋಗದಿಂದ ಪ್ರಗತಿಯನ್ನು ನೋಡಬಹುದು. ಯಾವುದೇ ವಿಚಾರದ ಬಗ್ಗೆ ದೀರ್ಘವಾಗಿ ಆಲೋಚಿಸಿ ತೀರ್ಮಾನಿಸಿದಲ್ಲಿ ಜಯವಾಗುವುದು.
17 ಏಪ್ರಿಲ್ 2026, 21:30 IST