ದಿನ ಭವಿಷ್ಯ: ಮೋಸವಾಗುವ ಪಾಲುದಾರಿಕೆಯಿಂದ ಹೊರಬರುವ ಚಿಂತನೆ ಸೂಕ್ತ
Published 4 ಮಾರ್ಚ್ 2026, 19:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನರರೋಗ ತಜ್ಞರಿಗೆ ಹೊಸ ಅನುಭವಗಳೊಂದಿಗೆ ವಿದೇಶ ಪ್ರಯಾಣದ ಸಾಧ್ಯತೆಗಳು ಮತ್ತು ವೃತ್ತಿ ನಡೆಸಲು ಅವಕಾಶ ಸಿಗಲಿವೆ. ಜೀವನದ ಅಭಿವೃದ್ಧಿಗೆ ಬೇಕಾದ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿವೆ.
04 ಮಾರ್ಚ್ 2026, 19:30 IST
ವೃಷಭ
ವೈಯಕ್ತಿಕ ವಿಚಾರಗಳನ್ನು ಆಪ್ತರೊಬ್ಬರಲ್ಲಿ ಹೇಳಿಕೊಳ್ಳಲೇಬೇಕಾದ ಸಂದರ್ಭ ಬರಲಿದೆ. ಯಶಸ್ಸು ಹುಡುಕಿಕೊಂಡು ಬರುವುದರಿಂದ ಸಂತಸವಾಗಲಿದೆ. ಸರಕು ಸಾಗಾಟದಿಂದ ಲಾಭ ಬರುವುದು.
04 ಮಾರ್ಚ್ 2026, 19:30 IST
ಮಿಥುನ
ಬಹಳ ದಿನಗಳ ನಂತರ ಮನೆಗೆ ಹಿರಿಯ ಸಹೋದರರ ಆಗಮನ ಸಂತೋಷ ಉಂಟುಮಾಡುವುದು. ಸ್ವಲ್ಪ ಪ್ರಯತ್ನಕ್ಕೂ ಹೆಚ್ಚಿನ ಉಪಯೋಗ ಪ್ರಾಪ್ತಿಯಾಗಲಿದೆ.
04 ಮಾರ್ಚ್ 2026, 19:30 IST
ಕರ್ಕಾಟಕ
ಸಂಗೀತಗಾರರಿಗೆ ಪ್ರತಿಭೆ ಹೊರಹಾಕಲು ಹಾಗೂ ಜನಪ್ರಿಯ ರಾಗಲು ವೇದಿಕೆ ಸಿಗಲಿದೆ. ಮಹಿಳೆಯರಿಗೆ ಸ್ವತಂತ್ರ ಉದ್ಯಮದ ಹಾದಿ ಸುಗಮ ವಾಗುವುದು. ಸಮಸ್ಯೆ ಇತ್ಯರ್ಥಗೊಂಡು ಪ್ರತಿವಾದಿಗಳು ನಿರುತ್ತರರಾಗುವರು.
04 ಮಾರ್ಚ್ 2026, 19:30 IST
ಸಿಂಹ
ಒರಟು ವ್ಯಕ್ತಿತ್ವದಿಂದ ಅಥವಾ ಕಹಿಯ ಮಾತುಗಳಿಂದ ಸಹಭಾಗಿಗೆ ಅಥವಾ ಮಕ್ಕಳಿಗೆ ನೋವಾಗಬಹುದು. ಮೋಸಗಳು ನಡೆಯಬಹುದಾದ ಪಾಲುದಾರಿಕೆಯಿಂದ ಹೊರಬರುವ ಚಿಂತನೆ ಸೂಕ್ತವಾದುದು.
04 ಮಾರ್ಚ್ 2026, 19:30 IST
ಕನ್ಯಾ
ವ್ಯವಹಾರಿಕವಾಗಿ ಮಾತನಾಡುವಾಗ ದಾಕ್ಷಿಣ್ಯಗಳಿಗೆ ಒಳಗಾಗುವುದು ಸರಿಯಲ್ಲ. ಕೌಟುಂಬಿಕವಾಗಿ ನೆಲೆ ನಿಂತದ್ದರಿಂದ ಮನಸ್ಸಿಗೆ ಸಮಾಧಾನವಾಗುವುದು. ಬಂಧುಗಳೊಡನೆ ಸುಖ ಭೋಜನ ನಡೆಯಬಹುದು.
04 ಮಾರ್ಚ್ 2026, 19:30 IST
ತುಲಾ
ಯಾವುದೇ ವಿಷಯದಲ್ಲಿ ಜವಾಬ್ದಾರಿಯನ್ನು ಹೊರುವ ಮೊದಲು ಅದರ ಬಗೆಗಿನ ಸಾಮಾನ್ಯ ಜ್ಞಾನ, ಲಾಭ-ನಷ್ಟ, ಸತ್ಯಾಸತ್ಯತೆಗಳನ್ನು ಅರಿಯುವ ಬಗ್ಗೆ ಗಮನವಿರಲಿ. ವೃತ್ತಿಯಲ್ಲಿ ಗಮನವಿರಲಿ.
04 ಮಾರ್ಚ್ 2026, 19:30 IST
ವೃಶ್ಚಿಕ
ಉದ್ಯೋಗಕಾಂಕ್ಷಿಗಳು ಸಂದರ್ಶನ ಎದುರಿಸಲು ಬೇಕಾದ ತಯಾರಿಯನ್ನು ನಡೆಸಿಕೊಳ್ಳಿ. ಮಕ್ಕಳಿಂದ ಅಹಿತಕರ ಕಾರ್ಯಗಳು ನಡೆದು ಮಾನಸಿಕ ಚಿಂತೆ ಉಂಟಾಗಬಹುದು. ಆದಾಯ ಉತ್ತಮ ಸ್ಥಿತಿಯಲ್ಲಿರುತ್ತದೆ.
04 ಮಾರ್ಚ್ 2026, 19:30 IST
ಧನು
ಜವಾಬ್ದಾರಿಯುತ ಹುದ್ದೆ ನಿಮ್ಮ ಪಾಲಿಗೆ ಬರಲಿದೆ. ಕರ್ತವ್ಯದಲ್ಲಿ ಯಾವುದೇ ಲೋಪವಾಗದಂತೆ ಗಮನಹರಿಸಿ. ಕುಟುಂಬದ ಹಿಂದಿನ ವಿಚಾರ ತಿಳಿಯಲು ದಾಯಾದಿಗಳಿಂದ ಅನುಕೂಲವಾಗಲಿದೆ.
04 ಮಾರ್ಚ್ 2026, 19:30 IST
ಮಕರ
ವೃತ್ತಿಪರ ಗೊತ್ತಿಲ್ಲದ ವಿಚಾರ ಕೇಳಿ ತಿಳಿದುಕೊಳ್ಳುವ ಮೂಲಕ ಕೆಲಸಗಳು ಸುಗಮವಾಗಲಿವೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಷ್ಟಪಡಬೇಕಾಗಬಹುದು. ದಾಂಪತ್ಯದಲ್ಲಿ ಸಂಶಯದ ವಾತಾವರಣ ಇರಲಿದೆ.
04 ಮಾರ್ಚ್ 2026, 19:30 IST
ಕುಂಭ
ಗೆಳೆಯನೊಬ್ಬನ ಭೇಟಿಯಿಂದಾಗಿ ಜೀವನ ಮಹತ್ವದ ತಿರುವೊಂದನ್ನು ಪಡೆದುಕೊಳ್ಳಲಿದೆ. ಅವಿವಾಹಿತರಿಗೆ ಇಷ್ಟವಾಗುವ ರೀತಿಯ ಸಂಬಂಧಗಳು ಪ್ರಾಪ್ತಿಯಾಗುತ್ತವೆ. ಧಾರ್ಮಿಕ ಕೆಲಸದಲ್ಲಿ ಆಸಕ್ತಿ ಮೂಡುವುದು.
04 ಮಾರ್ಚ್ 2026, 19:30 IST
ಮೀನ
ದೇವರ ಮತ್ತು ಹಿರಿಯರ ಅನುಗ್ರಹ ಸಂಪಾದಿಸುವುದರಿಂದ ಸಮಸ್ಯೆಗಳಿಂದ ಮುಕ್ತಿ ಕಾಣುವಿರಿ. ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ಸಾಹ ಮೂಡುವುದು. ಚಿಲ್ಲರೆ ವ್ಯಾಪಾರಿಗಳಿಗೆ ಲಾಭ ಸಿಗಲಿದೆ.
04 ಮಾರ್ಚ್ 2026, 19:30 IST