ದಿನ ಭವಿಷ್ಯ: ಸಮಸ್ಯೆಗಳ ಪರಿಹಾರಕ್ಕಾಗಿ ಹಿತ ಚಿಂತಕರೊಡನೆ ಮಾತನಾಡಿ
Published 6 ಮಾರ್ಚ್ 2026, 19:01 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಬುದ್ಧಿಶಕ್ತಿಯನ್ನು ಒಳ್ಳೆಯ ಕೆಲಸಗಳಿಗೆ ಉಪಯೋಗಿಸಿಕೊಂಡು ಅದರಲ್ಲಿ ಯಶಸ್ಸನ್ನು ಪಡೆಯುವಿರಿ. ವಿಚಾರದ ಬಗೆಗಿನ ಯೋಚನೆಯಿಂದ ಉಳಿದೆಲ್ಲಾ ಕೆಲಸದಲ್ಲಿ ಮನಸ್ಸಿಲ್ಲದಂತಾಗುವುದು.
06 ಮಾರ್ಚ್ 2026, 19:01 IST
ವೃಷಭ
ಸತ್ಯನಾರಾಯಣ ಸ್ವಾಮಿ ಸೇವೆಯನ್ನು ಮಾಡುವುದರಿಂದ ಜಟಿಲ ಸಮಸ್ಯೆಗಳು ಸೌಹಾರ್ದಯುತವಾಗಿ ಬಗೆಹರಿಯಲಿವೆ. ಉನ್ನತ ವಿದ್ಯಾಭ್ಯಾಸ ಮಾಡುವ ಕನಸಿಗೆ, ಪರಿಚಿತರಿಂದ ಆರ್ಥಿಕ ಬಲ ಸಿಗಲಿದೆ.
06 ಮಾರ್ಚ್ 2026, 19:01 IST
ಮಿಥುನ
ಕೇವಲ ಕ್ಷಣಿಕ ಸುಖಗಳಿಗೆ ಗಮನ ನೀಡದೆ ಗಂಭೀರವಾಗಿ ಆಲೋಚಿಸಿ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ. ಸ್ವಲ್ಪ-ಸ್ವಲ್ಪ ಜವಾಬ್ದಾರಿ ಹೊರುವುದಕ್ಕಿಂತ ನಿರ್ದಿಷ್ಟ ಕೆಲಸಕ್ಕೆ ಸಂಪೂರ್ಣ ಗಮನ ಕೊಡಿ.
06 ಮಾರ್ಚ್ 2026, 19:01 IST
ಕರ್ಕಾಟಕ
ದೈವಾನುಗ್ರಹದಿಂದ ಸಂತಾನ ಭಾಗ್ಯದ ಸುದ್ದಿ ಕೇಳುವಿರಿ. ಅದರ ಫಲವಾಗಿ ಮನೆಯಲ್ಲಿ ಸಡಗರದ ವಾತಾವರಣ ಸೃಷ್ಟಿಯಾಗಲಿದೆ. ಕೆಲಸಗಳು ತೀವ್ರಗತಿಯಲ್ಲಿ ಸಾಗುತ್ತಿರುವುದು ತುಸು ಸಂತಸವೆನಿಸುವುದು.
06 ಮಾರ್ಚ್ 2026, 19:01 IST
ಸಿಂಹ
ಕೆಲಸ ಕಾರ್ಯದಲ್ಲಿ ಗುಣ-ದೋಷದ ಬಗ್ಗೆ ಯೋಚನೆ ಮಾಡದೇ ಮುಂದುವರಿಯುವುದು ಸರಿಯಲ್ಲ. ಉಷ್ಣಾಧಿಕ್ಯವಾಗಿ ಆರೋಗ್ಯದಲ್ಲಿ ಏರುಪೇರಾಗಬಹುದು. ಬರಹಗಾರರಿಗೆ ಅವಕಾಶಗಳು ದೊರೆಯಲಿವೆ.
06 ಮಾರ್ಚ್ 2026, 19:01 IST
ಕನ್ಯಾ
ತರಕಾರಿ ವ್ಯಾಪಾರಿಗಳು ಉದ್ವೇಗಕ್ಕೆ ಒಳಗಾಗದೆ ತಾಳ್ಮೆಯಿಂದ ವ್ಯವಹರಿಸಿದರೆ ಹಾದಿ ಸುಗಮವಾಗಿ ಸಾಗುತ್ತದೆ. ಹಿರಿಯರು ಹೇಳಿದಂತೆ ದೂರ ದೃಷ್ಟಿ ಇಟ್ಟುಕೊಂಡು ಕಾರ್ಯ ಪ್ರವೃತ್ತರಾಗುವುದನ್ನು ಕಲಿಯಿರಿ.
06 ಮಾರ್ಚ್ 2026, 19:01 IST
ತುಲಾ
ಅಸೂಯೆ ಪಡುವ ಸಹೋದ್ಯೋಗಿಗಳ ನಡುವೆ ಕೆಲಸ ನಿರ್ವಹಿಸಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಗುರಿ ಮುಟ್ಟುವ ವಿಚಾರದಲ್ಲಿ ಅತಿ ಪ್ರಯತ್ನ ಅತ್ಯಗತ್ಯ. ದೇಹದಲ್ಲಿ ಉಷ್ಣಾಧಿಕ್ಯ ಆಗುವ ಲಕ್ಷಣಗಳಿವೆ.
06 ಮಾರ್ಚ್ 2026, 19:01 IST
ವೃಶ್ಚಿಕ
ಸಾಂಸಾರಿಕವಾಗಿ ಹಾಗೂ ಸಾಮಾಜಿಕವಾಗಿ ವರ್ತನೆಯಲ್ಲಿ ಸಮತೋಲನ ಹಾಗೂ ಸ್ಥಿರತೆ ಕಾಯ್ದುಕೊಳ್ಳುವುದು ಬದುಕಿಗೆ ಕಾರಣವಾಗುತ್ತದೆ. ಸರಕು ಸಾಗಾಣೆ ಮತ್ತು ಸಾರಿಗೆ ವ್ಯವಸ್ಥೆಯವರಿಗೆ ಆದಾಯ ಇರುತ್ತದೆ.
06 ಮಾರ್ಚ್ 2026, 19:01 IST
ಧನು
ದೂರ ಪ್ರಯಾಣ ಮಾಡುವ ಅನಿವಾರ್ಯತೆ ಬಂದಲ್ಲಿ ರಾಹುಕಾಲದ ನಂತರದಲ್ಲಿ ಪ್ರಯಾಣ ಬೆಳೆಸಿ. ಎಲ್ಲಾ ಕೆಲಸಗಳೂ ಉತ್ತಮ ಉದ್ದೇಶವನ್ನೇ ಹೊಂದಿರುವುದು. ಅವಿವಾಹಿತರಿಗೆ ಶುಭ ಫಲಗಳು ಲಭಿಸಲಿವೆ.
06 ಮಾರ್ಚ್ 2026, 19:01 IST
ಮಕರ
ಕೈಕೆಳಗಿನ ನೌಕರರ ನೆರವು ಅಗತ್ಯವೆನಿಸಲಿದೆ. ಶ್ರಮದ ದುಡಿಮೆಗೆ ಉತ್ತಮ ಫಲ ದೊರೆತಂತೆ ಆಗುವುದು. ವಿಮೆ ಸಲಹೆಗಾರರಿಗೆ ವೃತ್ತಿ ರಂಗದಲ್ಲಿ ಉತ್ತಮ ಪ್ರಚೋದನೆಯಿಂದ ಯಶಸ್ಸು ಕಂಡುಬರಲಿದೆ.
06 ಮಾರ್ಚ್ 2026, 19:01 IST
ಕುಂಭ
ಸಮಸ್ಯೆಗಳ ಪರಿಹಾರಕ್ಕಾಗಿ ಹಿತ ಚಿಂತಕರೊಡನೆ ಮಾತುಕತೆ ನಡೆಸುವುದು ಒಳ್ಳೆಯದು. ನಿಧಾನವಾಗಿಯಾದರೂ ಸ್ವಂತ ವ್ಯವಹಾರದ ಲಾಭವು ಬಂದು ಕೈ ಸೇರಿದ ಸಂತಸ ನಿಮ್ಮದಾಗುವುದು.
06 ಮಾರ್ಚ್ 2026, 19:01 IST
ಮೀನ
ಒಳ್ಳೆಯ ಮಿತ್ರರಿಂದ ಕಂಪನಿಯ ಮುಖ್ಯ ವ್ಯಕ್ತಿಯ ಪರಿಚಯ ಹಾಗೂ ಅಭಿವೃದ್ಧಿ ಮಾಹಿತಿ ದೊರೆಯುತ್ತದೆ. ಗುಂಪು ಚಟುವಟಿಕೆಗಳಿಗೆ ಮುಂದಾಳತ್ವವು ಅಗತ್ಯವಾಗಿರುವುದು.
06 ಮಾರ್ಚ್ 2026, 19:01 IST