ಸೋಮವಾರ, 11 ಮೇ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ದಾಂಪತ್ಯದಲ್ಲಿ ಸಮಸ್ಯೆ ಉಂಟಾಗದಂತೆ ಜಾಗ್ರತೆ ವಹಿಸಿ
Published 19 ಏಪ್ರಿಲ್ 2026, 23:00 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಜಗತ್ತಿನ ಚಲನೆಯ ವೇಗಕ್ಕೆ ನಿಮ್ಮ ಚಲನವಲನಗಳು ಕಡಿಮೆಯಾಗಿರುವ ಅನುಭವ ಕಾಡಲಿದೆ. ಗೆಳೆಯರೊಂದಿಗೆ ಸಂತೋಷಕೂಟದಲ್ಲಿ ಪಾಲ್ಗೊಳ್ಳುವಿರಿ.
ವೃಷಭ
ಸಹೋದರರಲ್ಲಿ ಉಂಟಾದ ಸಮಸ್ಯೆ ವಿವಾದಕ್ಕೆ ಆಸ್ಪದವಾಗದಂತೆ ಬಗೆಹರಿಸಿಕೊಳ್ಳಿ. ವ್ಯವಹಾರಗಳನ್ನು ವಿಸ್ತರಿಸಿಕೊಳ್ಳುವಲ್ಲಿ ಸ್ನೇಹಿತರು ನೆರವಾಗಲಿದ್ದಾರೆ. ಹಣ ಸಂಜೆಯ ವೇಳೆಗೆ ಕೈ ಸೇರಲಿದೆ.
ಮಿಥುನ
ಅಕ್ಕಪಕ್ಕದವರ ಟೀಕೆಯನ್ನೂ ಶಾಂತ ಮನಸ್ಸಿನಿಂದ ಸ್ವೀಕರಿಸಿ. ನಿರೀಕ್ಷಿಸಿದ ಕಾರ್ಯಗಳು ನೆರವೇರಿ ಮನಸ್ಸಿಗೆ ನೆಮ್ಮದಿ ಉಂಟಾಗಲಿದೆ. ಜಮೀನಿನಲ್ಲಿ ವಿಷಜಂತುಗಳಿಂದ ಭಯಗೊಳ್ಳುವಿರಿ
ಕರ್ಕಾಟಕ
ಅನಿವಾರ್ಯದ ಸಮಯಕ್ಕೆ ಅಕ್ಕಪಕ್ಕದವರ ಸಹಾಯ ಸಿಕ್ಕುವುದರ ಪರಿಣಾಮ ಸುತ್ತಮುತ್ತಲಿನ ಜನರೊಂದಿಗೆ ಬೆರೆಯುವುದರ ಪ್ರಯೋಜನ ಅನುಭವಕ್ಕೆ ಬರಲಿದೆ. ಸಾಂಕ್ರಾಮಿಕ ರೋಗ ಕಾಡಲಿದೆ.
ಸಿಂಹ
ಇಂದು ಕೆಲಸಗಾರರಲ್ಲಿ ಬಹಳ ಶಾಂತ ರೀತಿಯಿಂದ ವರ್ತಿಸುವುದು ಅನಿವಾರ್ಯ. ಪೊಲೀಸ್‌ ವರಿಷ್ಠ ಅಧಿಕಾರಿಗಳಿಗೆ ಜವಾಬ್ದಾರಿ ಕಡಿಮೆಯಾಗುವುದು.
ಕನ್ಯಾ
ಸಾಂಸಾರಿಕವಾಗಿ ಮತ್ತು ಆರ್ಥಿಕವಾಗಿ ಇಷ್ಟಾರ್ಥ ಸಿದ್ಧಿಸುವುದು. ಸ್ವತಂತ್ರ ವೃತ್ತಿಯವರಿಗೆ ನಿರಂತರ ಆದಾಯ ತೋರಿಬಂದರೂ ಖರ್ಚು-ವೆಚ್ಚಗಳಲ್ಲಿ ಜಾಗ್ರತೆ ಇರಲಿ.
ತುಲಾ
ಕ್ರಿಯಾತ್ಮಕ ಯೋಚನೆಗಳೊಂದಿಗೆ ಸಂಪೂರ್ಣವಾಗಿ ಚಟುವಟಿ ಕೆಯಿಂದ ಇರುವಿರಿ. ಕಾನೂನು ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವುದು ಸರಿಯಲ್ಲ. ಸಹೋದ್ಯೋಗಿಗಳ ಸಹಕಾರ ಉತ್ತಮವಾಗಿರುವುದು.
ವೃಶ್ಚಿಕ
ನೈತಿಕ ಮೌಲ್ಯಗಳನ್ನು ಆಧರಿಸುವುದರಿಂದ ಸುಗಮವಾಗುವುದು. ಸಾಮಾಜಿಕವಾದ ಕೆಲಸಗಳಿಂದ ಕೌಟುಂಬಿಕವಾಗಿ ಸಮಯದ ಅಭಾವ ಉಂಟಾಗುವುದು. ಅಧಿಕಾರಿಗಳಿಗೆ ವರ್ಗಾವಣೆ ಸಂಭವವಿರುವುದು.
ಧನು
ಉದ್ಯೋಗದಲ್ಲಿ ಸ್ಥಿರತೆ ಮತ್ತು ಧನಾನುಕೂಲತೆ ಪ್ರಾಪ್ತಿ. ಸುಗಂಧ ಹಾಗೂ ಆಲಂಕಾರಿಕ ದ್ರವ್ಯಗಳ ಮಾರಾಟ ಲಾಭದಾಯಕ. ಉದ್ಯೋಗದ ವಿಸ್ತರಣೆ ವಿಷಯವಾಗಿ ಉತ್ತಮ ಆಲೋಚನೆಗಳು ಗರಿಗೆದರಲಿವೆ.
ಮಕರ
ಉದ್ಯೋಗದಲ್ಲಿ ಜವಾಬ್ದಾರಿಯುತ ಕಾರ್ಯವೈಖರಿಯಿಂದ ಗೌರವ ಪ್ರಾಪ್ತಿ. ಒದಗಿಬರಲಿರುವ ಅವಕಾಶಗಳನ್ನು ಕೈತಪ್ಪಿ ಹೋಗದಂತೆ ನೋಡಿಕೊಳ್ಳಿ. ಸಾಲದ ಹಣ ಹಿಂತಿರುಗಿಸುವ ಬಗ್ಗೆ ಗಮನವಿರಲಿ.
ಕುಂಭ
ಕಚೇರಿಯಲ್ಲಿ ಅರಿವಿಲ್ಲದ ವಿಚಾರಗಳಲ್ಲಿ ತಪ್ಪು ಮಾಡುವುದರ ಬದಲು ಸಹೋದ್ಯೋಗಿಗಳ ಸಹಕಾರ ಪಡೆಯಿರಿ. ನ್ಯಾಯವಾದಿಗಳಿಗೆ ವೃತ್ತಿಯಿಂದ ಆದಾಯ ಗಳಿಕೆ ಇರಲಿದೆ. ಕಟ್ಟಡ ನಿರ್ಮಾಣಗಾರರಿಗೆ ಕೆಲಸ ಇರುವುದು.
ಮೀನ
ಒಳ್ಳೆಯ ಯೋಚನಾಶಕ್ತಿ, ಒಳ್ಳೆಯ ಸಂಸ್ಕೃತಿಯನ್ನು ಪಡೆದಿರುವುದು ಉಪಯೋಗಕ್ಕೆ ಬರಲಿದೆ. ಅಲೆದಾಟದಿಂದ ದೇಹಾಯಾಸವಾದರೂ ಕಾರ್ಯ ಗಳು ಸಾಗಲಿವೆ. ದಾಂಪತ್ಯದಲ್ಲಿ ಸಮಸ್ಯೆ ಉಂಟಾಗದಂತೆ ಜಾಗ್ರತೆ ವಹಿಸಿ.
ADVERTISEMENT
ADVERTISEMENT