ಬುಧವಾರ, 22 ಏಪ್ರಿಲ್ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿವರಿಗೆ ಧನಾರ್ಜನೆ ಇದ್ದರೂ ಕೈಯಲ್ಲಿ ಹಣ ಇಲ್ಲದಂತೆ ಆಗುವುದು
Published 14 ಮಾರ್ಚ್ 2026, 0:19 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ದೈವಬಲ ಉಂಟಾಗಿದ್ದು,  ಆರ್ಥಿಕ ಪರಿಸ್ಥಿತಿ ಸುಧಾರಣೆಯತ್ತ ಸಾಗಿರುವುದನ್ನು ಅನುಭವ ಪೂರ್ವಕವಾಗಿ ಕಾಣುವಿರಿ. ಮಕ್ಕಳ ವಿಚಾರದಲ್ಲಿ ಹೆಮ್ಮೆ ಪಡುವಂಥ ಕ್ಷಣಗಳು ಎದುರಾಗಲಿವೆ.
ವೃಷಭ
ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರದ ಊರಿಗೆ ವರ್ಗಾವಣೆಯಾಗುವ ಸಾಧ್ಯತೆಗಳಿವೆ. ಕೈಗೆತ್ತಿಕೊಂಡಿರುವ ಕೆಲಸಗಳು  ಖರ್ಚಿಗೆ ಕಾರಣವಾಗಲಿವೆ. ಯುವ ಕಲಾವಿದರಿಗೆ  ಅವಕಾಶಗಳು ಲಭಿಸಲಿವೆ.
ಮಿಥುನ
ಸಮಯವನ್ನು ಅರಿತು ಅಧಿಕಾರಿ ವರ್ಗದವರಲ್ಲಿ ಎಚ್ಚರಿಕೆಯಿಂದ ವರ್ತಿಸುವುದರಿಂದ ಯಶಸ್ಸು ಹಾಗೂ ಅಭಿವೃದ್ಧಿಗೆ ಕಾರಣವಾಗುತ್ತದೆ. ಗುರು ಹಿರಿಯರ ದರ್ಶನ ಭಾಗ್ಯ ದೊರಕುತ್ತದೆ.
ಕರ್ಕಾಟಕ
ಪತ್ರಿಕೋದ್ಯಮಿಗಳಿಗೆ ಬಿಡುವಿಲ್ಲದ ಕೆಲಸಗಳು ಮತ್ತು ವಿಮರ್ಶಿಸಲು ಕಷ್ಟವಾಗುವಂತಹ ಪರಿಸ್ಥಿತಿಗಳು ಎದುರಾಗುತ್ತವೆ.ವೃತ್ತಿರಂಗದಲ್ಲಿ ತಿಳಿವಳಿಕೆ ಅಂತಿಮವೆಂದು ತಿಳಿದುಕೊಳ್ಳಬೇಡಿ.
ಸಿಂಹ
ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಮಾನ ಗಮನ ನೀಡಿದರೆ ಸಮಾಜದಲ್ಲಿ ಗುರುತಿಸುವ ವ್ಯಕ್ತಿ ಆಗಬಹುದು. ಜೀವನಚರಿತ್ರೆಯಲ್ಲಿ ಹೊಸದೊಂದು ಅಧ್ಯಾಯ ಪ್ರಾರಂಭವಾಗಲಿದೆ.
ಕನ್ಯಾ
ಮಹಿಳೆಯರಿಗೆ ಉನ್ನತ ಉದ್ಯೋಗ ಹಾಗೂ ಪ್ರಾಪ್ತವಯಸ್ಕರಿಗೆ ವಿವಾಹದ ಶುಭ ಫಲಗಳು ದೊರೆಯಲಿವೆ. ಸಾಮಾಜಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯು ಎಲ್ಲರ ಪ್ರಶಂಸೆಗೆ ಪಾತ್ರವಾಗುತ್ತದೆ.
ತುಲಾ
ವಿಚಾರವಾದರೂ ತೀರ್ಮಾನ ಕೈಗೊಳ್ಳುವ ಮುನ್ನ ಮನೆಯವರೊಂದಿಗೆ ಹಾಗೂ ತಿಳಿದವರೊಂದಿಗೆ ಚರ್ಚಿಸಿ ನಿರ್ಧರಿಸಿ. ಕಬ್ಬಿಣ ಹಾಗೂ ಸಿಮೆಂಟ್ ವ್ಯಾಪಾರಿಗಳಿಗೆ  ಲಾಭ ಸಿಗಬಹುದು.
ವೃಶ್ಚಿಕ
ಉದ್ಯೋಗದಲ್ಲಿರುವ ಒತ್ತಡವನ್ನು ಬಗೆಹರಿಸಿಕೊಳ್ಳಲು ಹೋಗಿ ಪುನಃ ದೊಡ್ಡ ಸಮಸ್ಯೆಗೆ ಸಿಲುಕಿದಂತಾಗಬಹುದು. ಧನಾರ್ಜನೆ ಇದ್ದರೂ ಕೈಯಲ್ಲಿ ಹಣ ಇಲ್ಲದಂತೆ ಆಗುವುದು.
ಧನು
ಹಿರಿಯ ನಾಗರಿಕರು ಕೌಟುಂಬಿಕವಾಗಿ ವಹಿಸಿಕೊಂಡ ಜವಾಬ್ದಾರಿಗಳನ್ನು ಕಡಿಮೆ ಮಾಡುವ ಬಗ್ಗೆ ಗಮನಹರಿಸಿ. ಸ್ನೇಹಿತರೊಂದಿಗಿನ ಹರಟೆ ಮನಸ್ಸನ್ನು ಹಗುರಗೊಳಿಸಲು ಕಾರಣವಾಗುವುದು.
ಮಕರ
ಸರ್ಕಾರಿ ಕೆಲಸಗಳ ಪ್ರಯತ್ನ ಅಧಿಕಾರಿ ವರ್ಗದವರಲ್ಲಿ ಸಹನಶೀಲರಾಗಿ ವರ್ತಿಸಿದಲ್ಲಿ ಈಡೇರಲಿದೆ. ವ್ಯಾಪಾರ ವಾಣಿಜ್ಯ ಸಂಬಂಧಗಳನ್ನು ಹೆಚ್ಚಿಸಿಕೊಳ್ಳಲು ಪ್ರಯಾಣ ಬೆಳೆಸುವಿರಿ
ಕುಂಭ
ಕಾರ್ಮಿಕರು ಸಹನಶೀಲರಾಗಿ ಕೆಲಸದ ಬಗ್ಗೆ ಸರಿಯಾಗಿ ಗಮನ ವಹಿಸುವುದರಿಂದ ಯಶಸ್ಸು ಪಡೆಯಬಹುದು. ಸಂಘ– ಸಂಸ್ಥೆಗಳ ಅಧಿಕಾರಿಗಳಿಗೆ ಮಾತುಗಳನ್ನು ಕೇಳಬೇಕಾದ ಸಂದರ್ಭ ಬರಬಹುದು.
ಮೀನ
ಕುಟುಂಬದಲ್ಲಿ ಉತ್ತಮ ವಾತಾವರಣವಿದ್ದು ಸಂತಸ ಹಾಗೂ ಸಮಾಧಾನ ತರಲಿದೆ. ಉತ್ತಮ ಅವಕಾಶದ ಜೊತೆಯಲ್ಲಿ ಅದೃಷ್ಟವೂ  ಪಾಲಿಗಿದೆ. ಪರಿಶ್ರಮದ ಜೊತೆ ಸಮಯವನ್ನು ವೃತ್ತಿಯ ಕೆಲಸಕ್ಕೆ ಮೀಸಲಿಡಿ.
ADVERTISEMENT
ADVERTISEMENT