ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಕೃತಕ ನಗುವಿನ ಮುಖವಾಡ ಇಂದು ಕಳಚುವ ಸಾಧ್ಯತೆ ಇದೆ
Published 17 ಸೆಪ್ಟೆಂಬರ್ 2025, 21:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನಿಮ್ಮ ಅಚ್ಚುಕಟ್ಟಾದ, ಲೆಕ್ಕಾಚಾರದ ಜೀವನ ಗಂಡನ ಹಣಕಾಸಿನ ಪರಿಸ್ಥಿತಿಯಲ್ಲಿ ಸಹಾಯಕವಾಗಲಿದೆ. ಆಫೀಸಿನ ಕೆಲಸದ ಮೇರೆಗೆ ವಿದೇಶ ಪ್ರಯಾಣ ಮಾಡುವ ಯೋಗವಿದೆ. ತರಕಾರಿ ಬೆಳೆಗಾರರಿಗೆ ಲಾಭ ಸಿಗಲಿದೆ.
ವೃಷಭ
ನಿಮ್ಮ ಜೀವನದಲ್ಲಿ ಪ್ರಭಾವ ಬೀರಲಿರುವ ಹಲವು ಹೊಸ ಜನರ ಪರಿಚಯದ ಲಾಭವಾಗಲಿದೆ, ಅದನ್ನು ಸದುಪಯೋಗಿಸಿಕೊಳ್ಳಿ. ಉದ್ಯೋಗಹೀನರಿಗೆ ಉದ್ಯೋಗ ಲಾಭವಾಗಲು ದುರ್ಗಾಪರಮೇಶ್ವರಿಯನ್ನು ಆರಾಧಿಸಿ.
ಮಿಥುನ
ರಾಜಕೀಯ ವರ್ಗದವರಿಗೆ ಸದ್ಯದಲ್ಲೇ ಉನ್ನತ ಸ್ಥಾನಮಾನ ದೊರಕುವುದು. ಶಿಸ್ತುಬದ್ಧ ಜೀವನ ಹದವರಿತ ಭೋಜನ ಮುನ್ನಡೆಗೆ ಸಹಕಾರಿ ಯಾಗುತ್ತದೆ. ಸ್ತ್ರೀ ರೋಗ ಸಂಬಂಧಿತ ಔಷಧಿ ತೆಗೆದುಕೊಳ್ಳುವುದು ಉತ್ತಮ.
ಕರ್ಕಾಟಕ
ಈ ದಿನ ನಿಮ್ಮನ್ನು ಬಾಧಿಸುವ ಸಮಸ್ಯೆ ಹೂ ಎತ್ತಿದಂತೆ ಬಗೆಹರಿಯಲಿದೆ. ರಾಜಕೀಯ ವ್ಯಕ್ತಿಗಳ ಹಿಂದೆ ತಿರುಗುವುದು ವ್ಯರ್ಥವೆಂದು ಅರಿವಾಗಲಿದೆ. ಸಂಗೀತಗಾರರಿಗೆ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಸಿಗುವುದು.
ಸಿಂಹ
ಕೃಷಿಯ ಸಂಶೋಧನೆಯಲ್ಲಿ ತೊಡಗಿರುವವರಿಗೆ ಹೊಸ ಸವಾಲುಗಳು ಎದುರಾಗುತ್ತವೆ. ನಿಮ್ಮ ಮಕ್ಕಳ ನಡುವಳಿಕೆ ನಿಮಗೆ ಸರಿಬಾರದಂತಾಗಿ, ಅಸಮಾಧಾನವೂ ಆಗಬಹುದು. ವಿದೇಶಿ ಹೂಡಿಕೆಯಲ್ಲಿ ನಷ್ಟ ನೋಡುವಿರಿ.
ಕನ್ಯಾ
ನಿಮ್ಮ ಆರ್ಥಿಕ ಸಂಕಷ್ಟಕ್ಕೆ ಪತ್ನಿಯ ಅಣ್ಣ-ತಮ್ಮಂದಿರು ನೆರವಾಗುವರು. ಕೆಲಸದಲ್ಲಿ ನೀವು ನಾಲ್ಕಾರು ವಿಷಯ ಗಮನಿಸುವುದರಿಂದ ಅಪೂರ್ಣತೆ ಉಂಟಾಗಲಿದೆ. ಉತ್ತಮ ಕಂಪೆನಿಗಳೊಂದಿಗೆ ಪಾಲುದಾರಿಕೆ ಸಿಗಲಿದೆ.
ತುಲಾ
ಹೊರಗುತ್ತಿಗೆ ವ್ಯವಹಾರಗಳಲ್ಲಿ ಶ್ರಮ, ಒತ್ತಡ ಜಾಸ್ತಿ ಎನಿಸಿದರೂ ಅವುಗಳಿಂದ ವರಮಾನ ಹೆಚ್ಚಲಿದೆ. ನಿಮ್ಮ ದೌರ್ಬಲ್ಯವನ್ನು ನೀವಾಗಿಯೇ ಇತರರ ಮುಂದೆ ಪ್ರದರ್ಶಿಸಿಕೊಂಡು ಕಷ್ಟಕ್ಕೊಳಗಾಗಬೇಡಿ. ಕೃಷ್ಣನ ಸ್ಮರಿಸಿ.
ವೃಶ್ಚಿಕ
ಪುರುಷ ಪ್ರಧಾನ ಕುಟುಂಬದಲ್ಲಿ ವಾಸಿಸುತ್ತಿರುವ ಮಹಿಳೆಯರಿಗೆ ನಿಮ್ಮ ಗೌರವವವು ತೀರ ಕಡಿಮೆಯಾದಂತೆ ಅನ್ನಿಸಬಹುದು, ದುಃಖವಾಗಲಿದೆ. ಕೃತಕವಾದ ನಗುವಿನ ಮುಖವಾಡವು ಇಂದು ಕಳಚುವ ಸಾಧ್ಯತೆ ಇದೆ.
ಧನು
ನಿಮ್ಮ ಕುಟುಂಬದ ಭಿನ್ನಾಭಿಪ್ರಾಯಗಳನ್ನು ಬೇರೆಯವರಲ್ಲಿ ಹೇಳಿಕೊಳ್ಳಬೇಡಿ. ನಿಮ್ಮ ಅನಿವಾರ್ಯದ ರಾತ್ರಿಯ ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ಇರಲಿ. ಭಗವಂತನ ಕೆಲವು ಮುನ್ಸೂಚನೆಗಳನ್ನು ಪರಾಮರ್ಶಿಸಿ.
ಮಕರ
ಸ್ವತ್ತು ಕೊಳ್ಳುವ ವಿಚಾರದಲ್ಲಿ ಕಾನೂನಿನ ಸಲಹೆ ಅವಶ್ಯವಾಗಿ ಪಡೆಯಿರಿ. ಅನ್ನ ಸಂತರ್ಪಣೆಯಿಂದ ಸಂತೃಪ್ತಿ, ಹಣ ಕಾಸಿನ ಪರಿಸ್ಥಿತಿ ಉತ್ತಮ ವಾಗಿರಲಿದೆ. ಚರ್ಮ ಸಂಬಂಧವಾದ ಅನಾರೋಗ್ಯ ಎದುರಾಗಬಹುದು.
ಕುಂಭ
ಮುದ್ದಾಗಿ ಸಾಕಿದ ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಪರ ಊರಿಗೆ ಕಳುಹಿಸುವ ವಿಚಾರವೇ ಪೋಷಕರಿಗೆ ಅರಗಿಸಿಕೊಳ್ಳಲಾಗದ ತುತ್ತಾಗುತ್ತದೆ. ಗೃಹಾಲಂಕಾರ ವಸ್ತುಗಳ ವ್ಯಾಪಾರದಿಂದ ಅಧಿಕ ಲಾಭವನ್ನು ಕಾಣುವಿರಿ.
ಮೀನ
ಸರ್ಕಾರಿ ಉದ್ಯೋಗದವರಿಗೆ ಅಧಿಕಾರಿಗಳಿಂದ ಹೆಚ್ಚಿನ ಒತ್ತಡ ಎದುರಾಗಲಿದೆ. ವಿದೇಶದಲ್ಲಿರುವ ಮಗನ ಅನಾರೋಗ್ಯದ ಸ್ಥಿತಿ ನಿಮ್ಮನ್ನು ಚಿಂತೆಗೆ ತಳ್ಳುವುದು. ಬಹು ಸಮಯದ ಸಮಸ್ಯೆಗಳಿಗೆ ಉತ್ತರ ಸಿಗಬಹುದು.
ADVERTISEMENT
ADVERTISEMENT