ದಿನ ಭವಿಷ್ಯ: ಈ ರಾಶಿಯವರು ವಾಹನ ಖರೀದಿ ಯೋಜನೆಯನ್ನು ಮುಂದೂಡಿ
Published 7 ಮಾರ್ಚ್ 2026, 19:12 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಇಂದಿನ ಯೋಜನೆಗಳಿಗೆ ಮನೆಯವರಿಂದ ವಿರೋಧಭಾವ ವ್ಯಕ್ತವಾಗಬಹುದು. ಶತ್ರುಗಳು ಕಾರ್ಯವೈಖರಿಯಿಂದ ಚಕಿತಗೊಂಡು ಸನಿಹಕ್ಕೂ ಬರಲಾರರು. ವಾಹನ ಖರೀದಿಯನ್ನು ಮುಂದೂಡಿ.
07 ಮಾರ್ಚ್ 2026, 19:12 IST
ವೃಷಭ
ನ್ಯಾಯಾಲಯಕ್ಕೆ ಸಂಬಂಧಿಸಿದ ಕೆಲಸದಲ್ಲಿ ತಯಾರಿಯನ್ನು ಮಾಡಲು ಸೂಕ್ತದಿನ. ಜವಾಬ್ದಾರಿಯ ಕೆಲಸಗಳನ್ನು ಸಮರ್ಥವಾಗಿ ನಿರ್ವಹಿಸಿದ ತೃಪ್ತಿ ಬರಲಿದೆ. ಪಾಲುದಾರಿಕೆಯಲ್ಲಿ ಅಭಿಪ್ರಾಯ ಭೇದ ಉಂಟಾಗಬಹುದು.
07 ಮಾರ್ಚ್ 2026, 19:12 IST
ಮಿಥುನ
ತಪ್ಪುಗಳಿಗೆ ಪಶ್ಚಾತಾಪ ಪಡುತ್ತಿದ್ದರೂ ತಪ್ಪುಗಳು ಪುನರಾವರ್ತನೆ ಯಾಗುತ್ತಿವೆ. ವಿದೇಶ ಯಾತ್ರಿಗಳಿಗೆ ಪ್ರಯಾಣದಲ್ಲಿ ಸುಖ, ನಿರ್ಭಯದ ವಾತಾವರಣ ಉಂಟಾಗಲಿದೆ.
07 ಮಾರ್ಚ್ 2026, 19:12 IST
ಕರ್ಕಾಟಕ
ವೃತ್ತಿಯಲ್ಲಿ ಪ್ರತಿಸ್ಪರ್ಧಿಗಳು ಹೆಚ್ಚಾಗಲಿವೆ. ವ್ಯವಹಾರಕ್ಕೆ ಆತಂಕದ ಪರಿಸರ ಬರಬಹುದು. ಜೀವನದಲ್ಲಿ ಅಧಿಕ ಶ್ರಮದಿಂದ ದೀರ್ಘಕಾಲಿಕ ಕಾರ್ಯಗಳು ಚಾಲನೆಗೊಂಡು ಸಂತಸ ವೃದ್ಧಿ.
07 ಮಾರ್ಚ್ 2026, 19:12 IST
ಸಿಂಹ
ಬರಹಗಾರರಿಗೆ ಕೀರ್ತಿ ಅರಸಿ ಬರುವುದು. ಬದುಕಿನಲ್ಲಿ ಸ್ಥಿರತೆಯ ಅಭಾವ ಕಾಣಲಿದೆ. ಯಾವುದೇ ರೀತಿಯ ಖರೀದಿಯಲ್ಲಿ ಎಚ್ಚರವಿರಲಿ, ಮೋಸ ಹೋಗುವ ಸಂಭವವಿದೆ. ರೇಷ್ಮೆ ಬೆಳಗಾರರಿಗೆ ಲಾಭ ಆಗುತ್ತದೆ.
07 ಮಾರ್ಚ್ 2026, 19:12 IST
ಕನ್ಯಾ
ವ್ಯವಹಾರಗಳಲ್ಲಿ ನುರಿತವರ ಸಲಹೆಗಳನ್ನು ಪಡೆದುಕೊಳ್ಳುವುದರಿಂದ ಯಶಸ್ವಿಯಾಗುವಿರಿ. ಋಣಬಾಧೆಯಿಂದ ಮುಕ್ತರಾಗಬಹುದು. ಎಂಜಿನಿಯರಿಂಗ್ ವ್ಯಾಸಂಗ ಮಾಡುವವರಿಗೆ ಉತ್ತೇಜನ ದೊರೆಯುವುದು.
07 ಮಾರ್ಚ್ 2026, 19:12 IST
ತುಲಾ
ಸ್ನೇಹಿತರಲ್ಲಿ ಮುಕ್ತವಾಗಿ ಮಾತನಾಡುವುದರಿಂದ ಮಾನಸಿಕ ಸಮಾಧಾನ ದೊರೆತು ಅನುಕೂಲ ವಾತಾವರಣದ ಅನುಭವ ದೊರಕಲಿದೆ. ಉತ್ತಮ ದೈವಾನುಗ್ರಹದಿಂದ ಕೆಲಸಗಳೆಲ್ಲವೂ ನಿರಾಳವಾಗಿ ನೆರೆವೇರುವುದು.
07 ಮಾರ್ಚ್ 2026, 19:12 IST
ವೃಶ್ಚಿಕ
ಉದ್ಯೋಗ ದೊರೆಯುವ ಸುಳಿವಿನ ಕಾರಣದಿಂದ ಜೀವನದಲ್ಲಿನ ಸಮಸ್ಯೆಗಳು ಮತ್ತು ದುಃಖಗಳೆಲ್ಲಾ ದೂರಾಗಲಿವೆ. ವಿವೇಕಯುಕ್ತ ನಡವಳಿಕೆ ಪ್ರಯೋಜನ ನೀಡುತ್ತದೆ.
07 ಮಾರ್ಚ್ 2026, 19:12 IST
ಧನು
ತಾಂತ್ರಿಕ ಕ್ಷೇತ್ರದಲ್ಲಿ ಸಲಹೆ ಸೂಚನೆಗಳಿಗೆ ಅಧಿಕಾರಿ ವರ್ಗದವರಲ್ಲಿ ಮನ್ನಣೆ ಸಿಗಲಿದೆ. ವಿದ್ಯಾರ್ಥಿಗಳಿಗೆ ಆಲಸ್ಯದ ಪರ್ವತ ಎದುರಾಗುವುದರಿಂದ ವಿದ್ಯಾರ್ಜನೆಯಲ್ಲಿ ಸ್ವಲ್ಪ ಹಿನ್ನಡೆ.
07 ಮಾರ್ಚ್ 2026, 19:12 IST
ಮಕರ
ಕುಟುಂಬದ ಸರ್ವತೋಮುಖ ಬೆಳವಣಿಗೆಗೆ ಪಾತ್ರ ಬಹಳ ಮುಖ್ಯ ಎಂಬುದು ಕುಟುಂಬ ವರ್ಗಕ್ಕೆ ಮನದಟ್ಟಾಗುವುದು. ಪಕ್ಷದ ಧುರೀಣರ ಮಾತಿನಂತೆ ನಡೆಯುವುದರಿಂದ ಅನುಕೂಲ ಕಾಣುವಿರಿ.
07 ಮಾರ್ಚ್ 2026, 19:12 IST
ಕುಂಭ
ನಿಮ್ಮ ಹಾವಭಾವ, ಸ್ನೇಹಪರವಾದ ಸ್ವಭಾವವು ಇತರರ ಪ್ರಭಾವ ಬೀರಲಿದೆ. ನೆರೆಹೊರೆಯವರು ಸರಳತೆಯನ್ನು ದುರುಪಯೋಗ ಪಡೆಸಿಕೊಂಡಾರು ಗಮನವಿರಲಿ.
07 ಮಾರ್ಚ್ 2026, 19:12 IST
ಮೀನ
ಅಧಿಕಾರಿ ವರ್ಗದವರಲ್ಲಿ ಅವಶ್ಯಕತೆಗಿಂತ ಜಾಸ್ತಿ ಮಾತನಾಡುವುದು ಸಮಸ್ಯೆ ಕರೆದಂತಾಗುವುದು. ಬಂಧು ಮಿತ್ರರೊಡನೆ ಸಂತಸದ ಕ್ಷಣಗಳನ್ನು ಹಂಚಿಕೊಳ್ಳುವಂತಾಗಲಿದೆ. ದ್ವೇಷ ಮನೋಭಾವಗಳು ಸರಿಯಾಗಲಿವೆ.
07 ಮಾರ್ಚ್ 2026, 19:12 IST