ದಿನ ಭವಿಷ್ಯ: ಈ ರಾಶಿಯವರಿಗೆ ಹಳೆಯ ಸ್ನೇಹಿತರೇ ಕಷ್ಟ ಕಾಲದಲ್ಲಿ ಕೈಹಿಡಿಯುವವರು
Published 18 ಏಪ್ರಿಲ್ 2026, 21:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಪ್ರಭಾವಿ ವ್ಯಕ್ತಿಗಳ ಜೊತೆಯಲ್ಲಿನ ಓಡಾಟ ನಿಮಗೆ ಹೆಚ್ಚಿನ ಸ್ಥಾನಮಾನ ಜೊತೆಯಲ್ಲಿ ಸಮವಾದ ಆಯಾಸವನ್ನು ತಂದು ಕೊಡಲಿದೆ. ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಮ್ಮ ಗುಣ ಎಲ್ಲರ ಮೆಚ್ಚುಗೆಗೆ ಪಾತ್ರವಾಗುವುದು.
18 ಏಪ್ರಿಲ್ 2026, 21:30 IST
ವೃಷಭ
ನಿಮ್ಮ ಯಶಸ್ಸಿನ ಮೆಟ್ಟಿಲಿಗೆ ಶತ್ರು ಬಾಧೆ ಉಂಟಾಗಲಿದ್ದು ಇದರಿಂದಾಗಿ ಮಾನಸಿಕವಾಗಿ ಅಸಮತೋಲನದ ಅನುಭವ ಆಗಲಿದೆ. ಶ್ರಮಜೀವಿಗಳಿಗೆ ಉತ್ತಮ ಆದಾಯವಿರುವುದು. ಆರೋಗ್ಯದ ಬಗ್ಗೆ ಗಮನವಿರಲಿ.
18 ಏಪ್ರಿಲ್ 2026, 21:30 IST
ಮಿಥುನ
ಈ ದಿನ ನೀವು ಮಾಡುವ ಕೆಲಸಗಳಲ್ಲಿ ನಿಮ್ಮ ಅದೃಷ್ಟವನ್ನು ಪರೀಕ್ಷಿಸಿಕೊಳ್ಳುವಂತಾಗುವುದು. ಹಿರಿಯರ ಆಶೀರ್ವಾದವು ಎಲ್ಲಾ ಕಾರ್ಯಗಳಲ್ಲೂ ಜಯವನ್ನು ತಂದುಕೊಡಲಿದೆ. ಹಣದ ವಿಷಯದಲ್ಲಿ ಜಾಗೃತರಾಗಿರಿ.
18 ಏಪ್ರಿಲ್ 2026, 21:30 IST
ಕರ್ಕಾಟಕ
ವಿದ್ಯಾರ್ಥಿಗಳಿಗೆ ಅತಿ ಹೆಚ್ಚಿನ ಓದಿನಿಂದಾಗಿ ಬೇಸರಗೊಂಡು ಬದಲಾವಣೆಯನ್ನು ಬಯಸುವಂತಾಗಲಿದೆ. ಸೇವಕ ವರ್ಗದವರಿಂದ ಹೊಸದೊಂದು ಪಾಠ ಕಲಿಯುವ ಕಾಲ ಬರಲಿದೆ.
18 ಏಪ್ರಿಲ್ 2026, 21:30 IST
ಸಿಂಹ
ನಿಮ್ಮ ಮನಸ್ಸಿನಲ್ಲಿ ಯಾವುದೇ ರೀತಿಯ ಗೊಂದಲಗಳಿರುವುದಿಲ್ಲ. ಸ್ಪರ್ಧಾತ್ಮಕ ಭಾವನೆಯಲ್ಲಿರುವ ನಿಮಗೆ ಗೆಲುವಿನ ಸಿಹಿ ಸಿಗಲಿದೆ. ಇದು ನಿಮಗೇ ಅಚ್ಚರಿ ಮೂಡಿಸುತ್ತದೆ.
18 ಏಪ್ರಿಲ್ 2026, 21:30 IST
ಕನ್ಯಾ
ಮಾನಸಿಕ ಧೈರ್ಯ, ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಧ್ಯಾನ ಮಾರ್ಗದಲ್ಲಿ ಸಂಚರಿಸಿ. ಮನೆ ಕಟ್ಟುವ ಕೆಲಸಗಳು ನಿರ್ವಿಘ್ನವಾಗಿ ಮುಂದುವರೆಯುವ ಬಗ್ಗೆ ಮಹಾಗಣಪತಿಯಲ್ಲಿ ಪ್ರಾರ್ಥನೆ ಮಾಡಿ. ಸಂತಾನದ ಸುದ್ದಿ ಆನಂದ ತರಲಿದೆ.
18 ಏಪ್ರಿಲ್ 2026, 21:30 IST
ತುಲಾ
ಕೌಟುಂಬಿಕವಾದ ಗೌಪ್ಯತೆಯ ವಿಚಾರ ನಿಮ್ಮಿಂದ ಇನ್ನೊಬ್ಬರಿಗೆ ತಿಳಿಯದಂತೆ ಜಾಗ್ರತೆವಹಿಸಿ. ಹಳೇಯ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಿ. ಅವರುಗಳೇ ನಿಮ್ಮ ಕಷ್ಟಕಾಲದಲ್ಲಿ ಸಹಾಯಕ್ಕೆ ಬರುವ ವ್ಯಕ್ತಿಗಳಾಗಿರುತ್ತಾರೆ.
18 ಏಪ್ರಿಲ್ 2026, 21:30 IST
ವೃಶ್ಚಿಕ
ಸಾಲಗಾರರ ಕಿರುಕುಳ ಅಧಿಕವಾಗುವ ಲಕ್ಷಣಗಳಿದೆ. ಕೆಲವು ಆಕಸ್ಮಿಕ ಪ್ರಯಾಣವನ್ನು ಮಾಡಬೇಕಾಗಬಹುದು. ಬಹಳ ದಿನದ ನಂತರ ಕಾರ್ಯದೊತ್ತಡ ಸದ್ಯಕ್ಕೆ ಕಡಿಮೆಯಾಗಿ ಮನಸ್ಸು ನಿರಾಳವಾಗುವುದು.
18 ಏಪ್ರಿಲ್ 2026, 21:30 IST
ಧನು
ಇನ್ನೊಬ್ಬರಿಗೆ ಹಿತ ಬಯಸುವುದು ನಿಮ್ಮ ಏಳಿಗೆಗೆ ಪೂರಕ ಎಂದು ಮರೆಯದಿರಿ. ಕಿಂಚಿತ್ ಕಾರ್ಯಸಿದ್ದಿಯಿಂದಲೂ ನೆಮ್ಮದಿ ಕಂಡು ಬರಲಿದೆ. ಖರ್ಚು ವೆಚ್ಚಗಳನ್ನು ಸಮತೋಲನದಲ್ಲಿ ಇರಿಸಿಕೊಳ್ಳುವ ಪ್ರಯತ್ನ ನೆಡೆಸಿ.
18 ಏಪ್ರಿಲ್ 2026, 21:30 IST
ಮಕರ
ಪ್ರಭಾವಿ ವ್ಯಕ್ತಿಗಳ ಸಂಪರ್ಕವು ನಿಮ್ಮ ವೈಯಕ್ತಿಕ ಬೆಳವಣಿಗೆಗೆ ಉಪಯೋಗವಾಗುವುದು. ದೂರ ಸಂಚಾರದಲ್ಲಿ ವಾಹನದ ಸಮಸ್ಯೆ ಎದುರಾಗಬಹುದು. ಮನೆಯಲ್ಲಿ ಶಾಂತ ವಾತಾವರಣವನ್ನು ಕಾಪಾಡಿಕೊಳ್ಳಿರಿ.
18 ಏಪ್ರಿಲ್ 2026, 21:30 IST
ಕುಂಭ
ವ್ಯಾಪಾರಸ್ಥರು ಉದ್ಯೋಗದಲ್ಲಿ ನಷ್ಟದಂತಹ ಸಮಸ್ಯೆ ಎದುರಾದರೂ ಸಹ ಧೃತಿಗೆಡುವ ಅಗತ್ಯವಿಲ್ಲ. ಅನಿವಾರ್ಯ ಕಾರಣದಿಂದ ಭೋಜನದ ಸಮಯ ವ್ಯತ್ಯಾಸವಾಗುವುದು. ಸಿಹಿ ತಿನಿಸು ತಯಾರಕರಿಗೆ ಬೇಡಿಕೆ ಹೆಚ್ಚಳ.
18 ಏಪ್ರಿಲ್ 2026, 21:30 IST
ಮೀನ
ಪ್ರಾಣಮಿತ್ರರ ಸಹಕಾರದಿಂದ ನಿಮ್ಮ ಜೀವನ ಮಟ್ಟದಲ್ಲಿ ಉನ್ನತ ಸ್ಥಾನವನ್ನು ಮುಟ್ಟುವುದಕ್ಕೆ ಸಹಾಯವಾಗುವುದು. ಗುರು ನಿಂದನೆಯಂತಹ ಪಾಪದ ಕೆಲಸ ಮಾಡಬೇಡಿ. ಕಳೆದುಕೊಂಡ ವಸ್ತು ಪುನಃ ನಿಮ್ಮ ಕೈ ಸೇರಲಿದೆ.
18 ಏಪ್ರಿಲ್ 2026, 21:30 IST