ದಿನ ಭವಿಷ್ಯ: ಈ ರಾಶಿಯವರಿಗೆ ಬರಬೇಕಾದ ಹಣ ಕೈ ಸೇರಲು ಯತ್ನ ಅಗತ್ಯ
Published 11 ಮಾರ್ಚ್ 2026, 23:57 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಯೋಚನೆ ಖರ್ಚಿಗೆ ದಾರಿಯಾದರೂ, ಅದರ ಫಲದಿಂದ ಸಂತೋಷವಿರುವುದು. ಆರೋಗ್ಯ ಸಧೃಢವಾಗಿ ಇರುವುದು. ವೃತ್ತಿಯಲ್ಲಿ ದಾಖಲೆ ತೋರಿಸಿ ಉತ್ತರಿಸುವ ಜಯ ಪ್ರಾಪ್ತಿ.
11 ಮಾರ್ಚ್ 2026, 23:57 IST
ವೃಷಭ
ಜೀವನದಲ್ಲಿದ್ದ ನಿರುತ್ಸಾಹ ದೂರ ಮಾಡಿಕೊಂಡು ಅವಕಾಶಗಳನ್ನು ನಿಮ್ಮದಾಗಿಸಿಕೊಳ್ಳಿರಿ. ಹಣ್ಣು ಹೂವಿನ ಮಾರಾಟಗಾರರಿಗೆ ಸಾಧಾರಣದ ಮಾರಾಟ. ಆಧ್ಯಾತ್ಮಿಕ ಮಾತುಕತೆಗಳಲ್ಲಿ ತೊಡಗುವಿರಿ.
11 ಮಾರ್ಚ್ 2026, 23:57 IST
ಮಿಥುನ
ತರಬೇತಿ ಹೊಂದಿದ ಮರದ ಕೆತ್ತನೆಯ ಕುಶಲಕರ್ಮಿಗಳಿಗೆ ಆದಾಯ ಮತ್ತು ಬೇಡಿಕೆ ಹೆಚ್ಚಲಿದೆ. ನಿವೃತ್ತಿ ಜೀವನದಲ್ಲಿ ನೆಲೆ ಕಂಡ ಸಂತೃಪ್ತಿ ಭಾವ ಮೂಡಲಿದೆ. ಸಿಬ್ಬಂದಿ ವರ್ಗದವರಿಂದ ಸಹಕಾರ ನಿರೀಕ್ಷಿಸಬೇಡಿ.
11 ಮಾರ್ಚ್ 2026, 23:57 IST
ಕರ್ಕಾಟಕ
ಮನೆಯಲ್ಲಿ ಕುಟುಂಬಸ್ಥರೆಲ್ಲಾ ಒಂದಾಗುವಂಥ ಸನ್ನಿವೇಶಗಳಿವೆ. ವಿದೇಶಿ ಸಂಸ್ಥೆಯೊಂದಿಗೆ ವ್ಯವಹಾರಿಕ ಒಪ್ಪಂದ ಮಾಡಿಕೊಳ್ಳಲು ಸೂಕ್ತ ದಿನ. ಮನಸ್ಸು ಉಲ್ಲಾಸಿತಗೊಂಡಿರುವುದು.
11 ಮಾರ್ಚ್ 2026, 23:57 IST
ಸಿಂಹ
ವಾಹನದ ಅಥವಾ ಎಲೆಕ್ಟ್ರಿಕಲ್ ವಸ್ತುಗಳ ರಿಪೇರಿ ಹಣವ್ಯಯಕ್ಕೆ ಕಾರಣವಾಗುತ್ತದೆ. ಧನ ಸಂಪಾದನೆಯಿಂದ ಆತ್ಮಸ್ಥೈರ್ಯ ವೃದ್ಧಿ. ಮಾತಾ-ಪಿತೃಗಳಿಂದ ಆಸೆಗಳಿಗೆ ಪ್ರೋತ್ಸಾಹ ದೊರೆಯುತ್ತದೆ.
11 ಮಾರ್ಚ್ 2026, 23:57 IST
ಕನ್ಯಾ
ಉದಾರ ಮನೋಭಾವನೆಯ ಚಿಂತನೆಯಿಂದ ಅನುಕೂಲ ಆಗುತ್ತದೆ. ಬರಬೇಕಾದ ಹಣ ಕೈ ಸೇರಲು ಯತ್ನ ಅಗತ್ಯ. ಕಲಿಕೆಯಲ್ಲಿ ಸೋಮಾರಿತನದಿಂದ ಹಿಂದುಳಿಯುವಿರಿ.
11 ಮಾರ್ಚ್ 2026, 23:57 IST
ತುಲಾ
ಕಾರ್ಖಾನೆ ವೃತ್ತಿಯವರಿಗೆ ಲಾಭ ಇಲ್ಲವಾದರೂ, ದೈನಂದಿನ ನೆಮ್ಮದಿಗಾಗಲಿ, ಸಂತೋಷಕ್ಕಾಗಲಿ ತೊಂದರೆ ಇರಲಾರದು. ವಿದೇಶ ಪ್ರವಾಸಕ್ಕೆ ಸಂಬಂಧಿಸಿದಂತೆ ಸಂತಸಕರ ಬೆಳವಣಿಗೆಗಳು ಕಂಡುಬರಲಿವೆ.
11 ಮಾರ್ಚ್ 2026, 23:57 IST
ವೃಶ್ಚಿಕ
ಕಚೇರಿ ಕೆಲಸಗಳನ್ನು ಸಮರ್ಪಣಾ ಭಾವನೆಯಿಂದ ನಿರ್ವಹಿಸಿ. ಮನಸ್ಸಿಗೆ ಮುದ ತರುವ ಸಂಗತಿಗಳು ಜರುಗಲಿವೆ. ಹಣಕಾಸಿನ ಪರಿಸ್ಥಿತಿಗಳು ಸುಧಾರಿಸುವುದು.
11 ಮಾರ್ಚ್ 2026, 23:57 IST
ಧನು
ಅವಕಾಶಗಳು ಅರಸಿ ಬರಲಿವೆ. ವಿವೇಚನೆಯಿಂದ ಉಪಯೋಗಿಸಿಕೊಂಡಲ್ಲಿ ಅನುಕೂಲವಾಗಲಿದೆ. ಕೆಲಸವನ್ನು ಹುಡುಕುತ್ತಿರುವವರಿಗೆ ಉದ್ಯೋಗ ದೊರೆಯುವ ಸಾಧ್ಯತೆ.
11 ಮಾರ್ಚ್ 2026, 23:57 IST
ಮಕರ
ವ್ಯವಹಾರದಲ್ಲಿ ನಿಮ್ಮೊಡನೆ ಕೈ ಜೋಡಿಸಿದ್ದ ದಾಯಾದಿ ವರ್ಗದವರಿಂದ ಅಸೂಯೆಯ ಮಾತುಗಳಲ್ಲದೇ ತೊಂದರೆಗಳೂ ಆಗಬಹುದು. ಉನ್ನತ ಅಧಿಕಾರಿಗಳ ಸಂಪರ್ಕದಿಂದ ಕೆಲಸಗಳಿಗೆ ಪುಷ್ಟಿ.
11 ಮಾರ್ಚ್ 2026, 23:57 IST
ಕುಂಭ
ಅಧಿಕಾರಿಗಳ ಜತೆ ಸರಿ ಸಮಯದಲ್ಲಿ ಮುಕ್ತ ಚರ್ಚೆ ಮಾಡಿದಲ್ಲಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆದುಕೊಳ್ಳಬಹುದು. ವೈದ್ಯ ವೃತ್ತಿಯವರಿಗೆ ಹೊಸ ಅನುಭವದ ಜೊತೆಯಲ್ಲಿ ಲಾಭದ ದಿನ.
11 ಮಾರ್ಚ್ 2026, 23:57 IST
ಮೀನ
ರೇಷ್ಮೆ ವಸ್ತುಗಳ ತಯಾರಕರಿಗೆ, ಮಾರಾಟಗಾರರಿಗೆ ವ್ಯಾಪಾರವಾಗುವುದು. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಪರಿಶ್ರಮಕ್ಕೆ ತಕ್ಕಂತೆ ಯಶಸ್ಸು ಸಾಧಿಸಲು ಕಷ್ಟವಾಗುವುದು. ಮನೋಕಾಮನೆಗಳು ಪೂರ್ಣಗೊಂಡಾವು.
11 ಮಾರ್ಚ್ 2026, 23:57 IST