ಬುಧವಾರ, 22 ಏಪ್ರಿಲ್ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಮೇಲಧಿಕಾರಿಗಳ ಮೆಚ್ಚುಗೆ ಗಳಿಸುವಿರಿ
Published 10 ಮಾರ್ಚ್ 2026, 0:07 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
 ಸದ್ಗುಣಗಳ ವ್ಯಕ್ತಿತ್ವದ ಮತ್ತು ಪರೋಪಕಾರಿ ಬದುಕಿನಿಂದ ಜನಪ್ರಿಯತೆ ಹೆಚ್ಚಾಗುವ ಯೋಗವಿದೆ. ಸಹೋದ್ಯೋಗಿಗಳ ಮಾತಿನಂತೆ ನಡೆದುಕೊಳ್ಳುವುದು ಉತ್ತಮ. ಹೊಂದಾಣಿಕೆ  ಅಗತ್ಯ.
ವೃಷಭ
ವ್ಯಾಪಾರದ ವಿಚಾರದಲ್ಲಿ ಕೈಗೊಂಡಿರುವ ಕಾರ್ಯಗಳನ್ನು ದೇವರ ಪ್ರಾರ್ಥನೆಯ ಮೂಲಕ ಮುಂದುವರಿಸಿರಿ. ಆಸೆ ಆಕಾಂಕ್ಷೆಗೂ ಪ್ರಚಲಿತ ವಿದ್ಯಮಾನಕ್ಕೂ ಇರುವ ವ್ಯತ್ಯಾಸಗಳ ಬಗ್ಗೆ  ಚರ್ಚಿಸಿ.
ಮಿಥುನ
ವಿದ್ಯಾರ್ಥಿಗಳು ಓದಿನ ವಿಷಯಗಳ ಬಗ್ಗೆ ಸ್ನೇಹಿತರೊಡನೆ ಚರ್ಚೆ ನಡೆಸುವುದರಿಂದ ವಿಚಾರ ಸಂಪೂರ್ಣವಾಗಿ ಅರ್ಥವಾಗಲಿದೆ. ವಂಶ ಪಾರಂಪರ್ಯವಾಗಿ ಬಂದ ಉದ್ಯೋಗದಲ್ಲಿ  ಏಳಿಗೆ ಕಾಣುವಿರಿ.
ಕರ್ಕಾಟಕ
ಅಪ್ಪ ಮಗನ ಮಧ್ಯದಲ್ಲಿರುವ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುವುದರಿಂದ ನೆಮ್ಮದಿ ಮೂಡುವುದು. ಆಫೀಸಿನಲ್ಲಿಂದು  ಕೆಲಸದ ವೇಗವನ್ನು ಹೆಚ್ಚಿಸಿಕೊಳ್ಳಿ. ನಿರ್ಧರಿಸಿದ ನಿಲುವಿನಿಂದ ಹಿಂದೆ ಸರಿಯಬೇಡಿ.
ಸಿಂಹ
ಒಪ್ಪಿಕೊಂಡಿರುವ ಒಪ್ಪಂದವೊಂದು ಮುರಿದು ಬೀಳದಂತೆ ಎಚ್ಚರವಹಿಸುವುದರಿಂದ ಗೌರವ ಉಳಿಯುವುದು. ಸಮೀಪವರ್ತಿಗಳ ಆಶ್ವಾಸನೆ ದೊರೆತು ಶುಭ ಕಾರ್ಯಗಳತ್ತ ಗಮನ ಹರಿಸುವಿರಿ.
ಕನ್ಯಾ
ಕಾರ್ಖಾನೆ ಮತ್ತು ಭೂ ಸಂಬಂಧಿತ ವ್ಯವಹಾರ ನಡೆಸುವವರಿಗೆ ಕಾರ್ಯಗಳು ಚುರುಕುಗತಿಯಲ್ಲಿ ಸಾಗಲಿವೆ. ಬದುಕಿನ ಕವಲುದಾರಿಯಲ್ಲಿರುವ ಸರಿಯಾದ ಮಾರ್ಗದರ್ಶನದ ಕೊರತೆ ಇದೆ.
ತುಲಾ
ಕಳೆದುಹೋದ ದಿನಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳುವುದರಿಂದ  ಅನೇಕ ಪ್ರಶ್ನೆಗಳಿಗೆ ಉತ್ತರ ದೊರಕಲಿದೆ. ಉತ್ತಮ ದೈವಾನುಗ್ರಹದಿಂದ ಕೆಲಸಗಳೆಲ್ಲವೂ ನಿರಾತಂಕವಾಗಿ ನೆರೆವೇರುವುದು.
ವೃಶ್ಚಿಕ
ತೋಟ ಮತ್ತು ಎಸ್ಟೇಟ್ ಕೆಲಸಗಾರರಿಗೆ ಉದ್ಯೋಗದಲ್ಲಿ ಭಯ ಹುಟ್ಟುವಂಥ ಘಟನೆ ನಡೆಯಬಹುದು. ವಿವಾಹ ಸಂಬಂಧ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವುದು ಸರಿಯಲ್ಲ. ಸಂತಸದ ಕ್ಷಣಗಳನ್ನು ಹಂಚಿಕೊಳ್ಳುವಿರಿ.
ಧನು
ಪಶುಸಂಗೋಪನೆ ಮಾಡುವವರಿಗೆ ಅಥವಾ ಸಾಕು ಪ್ರಾಣಿಗಳಿಂದಲೇ ಸಣ್ಣ ಪುಟ್ಟ ಹಾನಿ ಉಂಟಾಗಬಹುದು. ಜಾಗ್ರತೆ ಇರಲಿ. ಕೆಲಸದಲ್ಲಿನ ನಿಮಗಿರುವ ದಕ್ಷತೆಯಿಂದ ಮೇಲಧಿಕಾರಿಗಳ ಮೆಚ್ಚುಗೆ ಗಳಿಸುವಿರಿ.
ಮಕರ
ಕೆಲವೊಂದು ಸಮಸ್ಯೆ ಇತರರಲ್ಲಿ ಹೇಳಿಕೊಳ್ಳಲೂ ಆಗದೆ, ಬಿಡಲೂ ಆಗದೆ ತೊಳಲಾಡುವ ಪರಿಸ್ಥಿತಿ ಬರುವುದು. ಸ್ನೇಹಿತರೊಂದಿಗೆ ಪ್ರವಾಸ ಹೊರಡುವ ಬಗ್ಗೆ ಯೋಜನೆಯನ್ನು ಮಾಡುವಿರಿ.
ಕುಂಭ
ನಿಶ್ಚಿತ ವರ-ವಧುಗಳ ಮಧ್ಯದಲ್ಲಿ ಸಣ್ಣ-ಪುಟ್ಟ ವಿಚಾರಗಳಿಗೆ, ಸೋಲೊಪ್ಪದ ಮನಸ್ಥಿತಿಯಿಂದ ಭಿನ್ನಾಭಿಪ್ರಾಯ ಬರುವ ಸಂಭವವಿದೆ. ಸಹೋದರರ ಕಾರ್ಯಗಳಿಗೋಸ್ಕರ ಸುತ್ತಾಟವಾದರೂ ನೆಮ್ಮದಿ ಸಿಗಲಿದೆ.
ಮೀನ
ಸಹೋದರರ ಕೋಪವನ್ನು ಉಪಶಮನಗೊಳಿಸುವ ಕೆಲಸದಿಂದ ಕೌಟುಂಬಿಕ ಸೌಖ್ಯ ಹೆಚ್ಚುವುದು. ವೈಯಕ್ತಿಕ ವಿಚಾರಗಳಿಗೆ ಪ್ರಭಾವಿ ವ್ಯಕ್ತಿಗಳ ಭೇಟಿ ಮಾಡಲಿದ್ದೀರಿ. ವಾಹನ ರಿಪೇರಿಯಿಂದ ಖರ್ಚು ಸಂಭವಿಸಲಿದೆ.
ADVERTISEMENT
ADVERTISEMENT