ದಿನ ಭವಿಷ್ಯ: ಈ ರಾಶಿಯವರು ಕ್ರೀಡೆಗೆ ಉತ್ತೇಜನ ಪಡೆಯುವಿರಿ
Published 25 ಏಪ್ರಿಲ್ 2026, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಎಲ್ಲರನ್ನೂ ಪ್ರೀತಿಯಿಂದ ಗೆಲ್ಲಬೇಕೆಂಬ ಮಾತಿನ ಮಹತ್ವ ನಿಮಗೆ ಅನುಭವದಿಂದಾಗಿ ತಿಳಿದು ಬರಲಿದೆ. ನಿರ್ಣಯ ಕೈಗೊಳ್ಳುವ ಸಮಯದಲ್ಲಿ ಸಹನೆಯಿಂದ ಇರುವುದು ಒಳ್ಳೆಯದು. ಕ್ರೀಡೆಗೆ ಉತ್ತೇಜನ ಪಡೆಯುವಿರಿ.
25 ಏಪ್ರಿಲ್ 2026, 23:30 IST
ವೃಷಭ
ಉತ್ತಮವಾದ ವಾಕ್ ಸಾಮರ್ಥ್ಯವನ್ನು ಹೊಂದಿರುವ ನಿಮಗೆ ಜನರ ಮನಸ್ಸಿನಲ್ಲಿ ಸ್ಥಾನ ಹೊಂದುವುದು ಕಷ್ಟವಾಗದ ವಿಚಾರವಾಗಿರುತ್ತದೆ. ಮನೆಗೆ ನೂತನ ಸಾಕು ಪ್ರಾಣಿಯ ಆಗಮನ ಮಕ್ಕಳಲ್ಲಿ ಸಂತೋಷ ಮೂಡಿಸಲಿದೆ.
25 ಏಪ್ರಿಲ್ 2026, 23:30 IST
ಮಿಥುನ
ನಿಮ್ಮ ಬುದ್ಧಿವಂತಿಕೆಯ, ನಿಮ್ಮ ಸಾಮರ್ಥ್ಯದ ಅರಿವು ನಿಮಗಿಲ್ಲ, ಧೈರ್ಯದಿಂದ ಮುನ್ನಡೆದರೆ ಯಶಸ್ಸು ನಿಮ್ಮದು. ನಿಮ್ಮ ಉತ್ಸಾಹ ಹೆಚ್ಚಿಸಿಕೊಳ್ಳುವ ಸಮಯ. ಮಡದಿ ಜತೆಗಿನ ಮನಸ್ತಾಪಗಳೆಲ್ಲಾ ಸರಿ ಹೋಗುವುದು.
25 ಏಪ್ರಿಲ್ 2026, 23:30 IST
ಕರ್ಕಾಟಕ
ಪಾಲುದಾರಿಕೆಯಲ್ಲಿ ನಿರೀಕ್ಷೆಗೂ ಮೀರಿದ ಲಾಭವಾದರೂ ದೊಡ್ಡ ಮೊತ್ತದ ಅಥವಾ ಹೆಚ್ಚಿನ ಜವಾಬ್ದಾರಿಯ ಕೆಲಸದಲ್ಲಿ ವಿಘ್ನ ಎದುರಾಗಲಿದೆ. ಕಂಪನಿಯ ಕೆಲಸಕ್ಕಾಗಿ ತುರ್ತು ಪ್ರಯಾಣ ಮಾಡ ಬೇಕಾಗಬಹುದು.
25 ಏಪ್ರಿಲ್ 2026, 23:30 IST
ಸಿಂಹ
ನಿಮ್ಮ ಉದಾತ್ತ ಚಿಂತನೆಯ ಲಾಭವನ್ನು ನಿಮ್ಮ ಸುತ್ತ ಮುತ್ತಲಿನವರು ಪಡೆವ ಸುದಿನ. ಕುಟುಂಬದಲ್ಲಿನ ಕಲಹ, ಮಾನಸಿಕ ಕ್ಷೋಭೆ, ಸಮಸ್ಯೆ ಹಂತ ಹಂತವಾಗಿ ದೂರಾಗುವುದು. ಹಿರಿಯರ ಆರೋಗ್ಯದಲ್ಲಿ ಪ್ರಗತಿ.
25 ಏಪ್ರಿಲ್ 2026, 23:30 IST
ಕನ್ಯಾ
ಬಹಳ ದಿನಗಳ ನಂತರ ಸೋದರನ ಆಗಮನದಿಂದಾಗಿ ಮನೆಯಲ್ಲಿ ಸಂಭ್ರಮ. ಹಣದ ವಿಚಾರದಲ್ಲಿ ತಪ್ಪು ಪುನರಾವರ್ತನೆ ಆಗದಂತೆ ಎಚ್ಚರ ವಹಿಸುವಿರಿ. ಕಷ್ಟಪಟ್ಟು ದುಡಿಯುವುದರಿಂದ ಹಣ ಕೈಯಲ್ಲಿ ನಿಲ್ಲುವುದು.
25 ಏಪ್ರಿಲ್ 2026, 23:30 IST
ತುಲಾ
ಕರ್ತವ್ಯ ನಿಷ್ಠೆ ಬಗ್ಗೆ ನಿಮ್ಮ ಮೇಲೆ ಆರೋಪ ಬರದಂತೆ ನಿಮ್ಮ ವ್ಯವಹಾರ ಇರುವುದು ಉತ್ತಮ. ಬಟ್ಟೆ ವ್ಯಾಪಾರಿಗಳಿಗೆ ಇಂದು ಉತ್ತಮ ಮಾರಾಟ ಹಾಗೂ ಉತ್ತಮ ಲಾಭವಾಗುವುದು. ಖರ್ಚಿನ ವಿಚಾರದಲ್ಲಿ ಮಿತವ್ಯಯಿಗಳಾಗುವಿರಿ.
25 ಏಪ್ರಿಲ್ 2026, 23:30 IST
ವೃಶ್ಚಿಕ
ನಿಮ್ಮದೇ ಜನರನ್ನು ನೀವು ನಿಯಂತ್ರಿಸುವ ಕೆಲಸದಲ್ಲಿ ಚಾಣಾಕ್ಷತನ ತೋರಿಸುವುದು ಅನಿವಾರ್ಯವಾಗುತ್ತದೆ. ಗರ್ವ ತೋರಿಸುವ ಜನರನ್ನು ದೂರವಿಡುವಂತಹ ಉಪಾಯ ಮಾಡುವುದು ಒಳ್ಳೆಯದು.
25 ಏಪ್ರಿಲ್ 2026, 23:30 IST
ಧನು
ಮನೆ ನಿರ್ಮಾಣ ಕೆಲಸಗಳು ಪೂರ್ಣಗೊಂಡು ನೆಮ್ಮದಿ ಪ್ರಾಪ್ತಿ. ಸ್ನೇಹಿತ ರೊಂದಿಗಿನ ಹರಟೆ ಮನಸ್ಸನ್ನು ಹಗುರ ಗೊಳಿಸಲು ಕಾರಣ ವಾಗುವುದು. ಪರರ ಟೀಕೆ ಟಿಪ್ಪಣಿಗೆ ಕಿವಿಗೊಡುವ ಮನಸ್ಥಿತಿಯನ್ನು ಬದಲಿಸಿಕೊಳ್ಳಿರಿ.
25 ಏಪ್ರಿಲ್ 2026, 23:30 IST
ಮಕರ
ಮಾತುಕತೆಯಿಂದ ಬಗೆಹರಿಸಿಕೊಳ್ಳಬಹುದಾದ ಹಲವು ಸಮಸ್ಯೆ ಗಳನ್ನು ನಿಮ್ಮ ಮೌನದಿಂದಾಗಿ ಹೆಚ್ಚು ಮಾಡಿಕೊಳ್ಳುವಿರಿ. ಈ ದಿನ ಆತ್ಮ ಗೌರವ, ರಕ್ಷಣೆ ದೃಷ್ಟಿಯಿಂದ ತಪ್ಪುಗಳನ್ನು ಮಾಡಬೇಕಾದ ಪರಿಸ್ಥಿತಿ ಬರುವುದು.
25 ಏಪ್ರಿಲ್ 2026, 23:30 IST
ಕುಂಭ
ಯಾರನ್ನು ನಿರ್ಲಕ್ಷೆ ಮಾಡುತ್ತಿರುವಿರೋ ಅವರಿಂದಲೇ ನಿಮ್ಮ ಕೆಲಸ ಆಗುವ ಸಾಧ್ಯತೆಗಳಿದೆ. ಶುಭ ಕಾರ್ಯಗಳಿಗೆ ಉತ್ತಮ ಕಾಲವಾದರೂ ಬರುವ ಅವಕಾಶಗಳಿಂದ ವಂಚಿತರಾಗದಿರಿ. ಕೃಷಿ ಯಂತ್ರ, ವಾಹನ ಖರೀದಿಸಬಹುದು.
25 ಏಪ್ರಿಲ್ 2026, 23:30 IST
ಮೀನ
ಪ್ಲಂಬರಿಂಗ್ ವ್ಯವಹಾರದಲ್ಲಿ ಮತ್ತು ಎಲೆಕ್ಟ್ರಾನಿಕ್ ವ್ಯಾಪಾರದಲ್ಲಿ ಲಾಭ ಪಡೆಯುವಿರಿ, ಆದರೆ ಹಣ ಕೈಯಲ್ಲಿ ಉಳಿಯುವುದು ಕಷ್ಟಕರ ವಿಷಯ. ಕೆಲಸ ಬದಲಿಸುವ ಯೋಚನೆಯನ್ನು ಮಾಡುವವರಿಗೆ ಇಂದು ಸಕಾಲ.
25 ಏಪ್ರಿಲ್ 2026, 23:30 IST