ದಿನ ಭವಿಷ್ಯ: ಈ ರಾಶಿಯವರು ಸಾಲ ದೂರವಾಗಿ ಆರ್ಥಿಕವಾಗಿ ವೃದ್ಧಿ ಕಾಣುವರು
Published 23 ಮಾರ್ಚ್ 2026, 23:31 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಆಹಾರ ಪದ್ಧತಿಯಿಂದ ರಕ್ತದೊತ್ತಡ ಸಮಸ್ಥಿತಿಗೆ ಬರುವಂತೆ ಮಾಡಿಕೊಳ್ಳಿ. ವಿದೇಶದಿಂದ ಸ್ನೇಹಿತರ ಆಗಮನ ಸಂತೋಷ ತರಲಿದೆ. ಆರ್ಥಿಕ ಪರಿಸ್ಥಿತಿಯು ಸುಧಾರಿಸುವುದು.
23 ಮಾರ್ಚ್ 2026, 23:31 IST
ವೃಷಭ
ಸಮಸ್ಯೆಗಳನ್ನು ನಾಜೂಕಾಗಿ ಬಗೆಹರಿಸಿಕೊಳ್ಳಿರಿ. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಪ್ರಗತಿ ಉಂಟಾಗಲಿದೆ. ಮೂಳೆಗೆ ಸಂಬಂಧಿಸಿದ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ.
23 ಮಾರ್ಚ್ 2026, 23:31 IST
ಮಿಥುನ
ಸ್ನೇಹಿತರಿಗೆ ಸ್ವಯಂಪ್ರೇರಣೆಯಿಂದ ವ್ಯವಹಾರಕ್ಕೆ ಸಂಬಂಧಪಟ್ಟ ಸಲಹೆ ಕೊಡುವುದು ಸರಿಯಲ್ಲ. ಜ್ವರ ಅಥವಾ ಅಲರ್ಜಿ ಉಂಟಾಗಬಹುದು. ಮನಃಶಾಸ್ತ್ರಜ್ಞರಿಗೆ ಬೇಡಿಕೆ ಹೆಚ್ಚಲಿದೆ.
23 ಮಾರ್ಚ್ 2026, 23:31 IST
ಕರ್ಕಾಟಕ
ವಿಷಜಂತುಗಳ ಅಥವಾ ಕಾಡುಪ್ರಾಣಿಗಳಿಂದ ತೊಂದರೆ ಆಗಬಹುದು. ಯಾವುದೇ ವಿಷಯದಲ್ಲಿ ಆಲಸ್ಯ ಮಾಡುವುದು ಸರಿಯಲ್ಲ. ಅಧಿಕಾರಿಗಳಿಗೆ ಬೇಡಿಕೆಗಳನ್ನು ಸ್ಪಷ್ಟವಾಗಿ ತಿಳಿಸಿ.
23 ಮಾರ್ಚ್ 2026, 23:31 IST
ಸಿಂಹ
ನಿವೇಶನ ಮಾರಾಟದಿಂದ ಲಾಭ ಕಾಣುವಿರಿ. ಹಣಕಾಸಿನ ಚಿಂತೆಗಳು, ಸಾಲ ದೂರವಾಗಿ ಆರ್ಥಿಕವಾಗಿ ವೃದ್ಧಿ ಕಾಣಲಿದ್ದೀರಿ. ಮಕ್ಕಳ ವರ್ತನೆ ಮನಸ್ಸಿಗೆ ಸಂತೋಷ ತಂದುಕೊಡಲಿದೆ.
23 ಮಾರ್ಚ್ 2026, 23:31 IST
ಕನ್ಯಾ
ಕೆಲಸ ಕಾರ್ಯಗಳಿಗೆ ದೇವತಾ ಅನುಗ್ರಹ ಕಡಿಮೆ ಇರುವುದರಿಂದ ಕಾರ್ಯ ಸಾಧನೆಗೆ ಪರಿಶ್ರಮ ಬೇಕಾಗುತ್ತದೆ. ಅನಿರೀಕ್ಷಿತವಾಗಿ ನಡೆಯುವ ಕೆಲಸಗಳಿಂದ ಸಂತಸ ಹೆಚ್ಚುವುದು.
23 ಮಾರ್ಚ್ 2026, 23:31 IST
ತುಲಾ
ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬರಲಿದೆ. ಎಂಥ ಪರಿಸ್ಥಿತಿಯನ್ನಾದರೂ ನಿಭಾಯಿಸುವ ಸಾಮರ್ಥ್ಯ ದುರ್ಗಾ ಪರಮೇಶ್ವರಿ ಆರಾಧನೆ ಮಾಡುವುದರಿಂದ ಪ್ರಾಪ್ತಿ.
23 ಮಾರ್ಚ್ 2026, 23:31 IST
ವೃಶ್ಚಿಕ
ತಾಂತ್ರಿಕ ವಿದ್ಯೆಯನ್ನು ವ್ಯಾಸಂಗ ಮಾಡುವವರಿಗೆ ಫಲಿತಾಂಶ ಲಭಿಸಿ ಸಂತೋಷವಾಗುವುದು. ಬಹುಜನರಲ್ಲಿ ಮಾಡಿದ ಸಾಲಗಳು ತೀರಿದ್ದರಿಂದ ನೆಮ್ಮದಿಯ ವಾತಾವರಣ ಸೃಷ್ಟಿಯಾಗಲಿದೆ.
23 ಮಾರ್ಚ್ 2026, 23:31 IST
ಧನು
ವಾಣಿಜ್ಯ ಕ್ಷೇತ್ರದ ವಿದ್ಯಾರ್ಥಿಗಳಿಗೆ ಶುಭ ಸಮಯವಾಗಿದ್ದು ಅವರು ಪಟ್ಟ ಶ್ರಮಕ್ಕೆ ಹೆಚ್ಚಿನ ಅಂಕ ಪಡೆದು ತಮ್ಮ ಗುರಿ ಮುಟ್ಟುವ ಸಾಧ್ಯತೆಗಳಿವೆ. ಸುಖ-ದುಃಖ, ನೋವು, ಅನಾರೋಗ್ಯ, ಲಾಭ-ನಷ್ಟಗಳ ಮಿಶ್ರಣಫಲ ಇರುತ್ತದೆ.
23 ಮಾರ್ಚ್ 2026, 23:31 IST
ಮಕರ
ನೂತನ ಮನೆ ನಿರ್ಮಾಣ ಅಥವಾ ನಿವೇಶನಗಳ ಖರೀದಿಯ ಆಲೋಚನೆಗಳಿಗೆ ಪೂರಕ ವಾತಾವರಣ ಸ್ನೇಹಿತರಿಂದ ಸಿಗಲಿದೆ. ಆರೋಗ್ಯದಲ್ಲಿ ಏರುಪೇರಾದರೂ ಆರ್ಥಿಕ ಬೆಳವಣಿಗೆ ಖಂಡಿತ ಸಾಧ್ಯವಿದೆ.
23 ಮಾರ್ಚ್ 2026, 23:31 IST
ಕುಂಭ
ಮಿತ್ರ ವೃಂದದಲ್ಲಿ ಕಂಡು ಬರುವ ಗೊಂದಲ ಹಾಗೂ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಿಕೊಡುವುದರಲ್ಲಿ ಯಶಸ್ವಿಯಾಗುವಿರಿ. ಸಕಾರಾತ್ಮಕ ಮನೋಭಾವದಿಂದ ಮತ್ತು ಮಾತುಗಾರಿಕೆಯಿಂದ ಎಲ್ಲರ ಮನಸ್ಸು ಗೆಲ್ಲುವಿರಿ.
23 ಮಾರ್ಚ್ 2026, 23:31 IST
ಮೀನ
ರಾಜಕೀಯ ವ್ಯಕ್ತಿತ್ವವನ್ನು ಹೊಂದಿರುವ ನಿಮಗೆ ಜನರ ಭಾವನೆಗಳಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕೆಂಬುದು ಚೆನ್ನಾಗಿ ತಿಳಿದಿದೆ. ಗುರಿ ಮುಟ್ಟುವ ಬಗ್ಗೆ ನಿಮ್ಮ ಶ್ರಮವಿರಲಿ.
23 ಮಾರ್ಚ್ 2026, 23:31 IST