ಭಾನುವಾರ, 17 ಮೇ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ : ಈ ರಾಶಿಯವರು ಅಪರೂಪದ ವ್ಯಕ್ತಿಯೊಬ್ಬರನ್ನು ಭೇಟಿಯಾಗುವ ಸಾಧ್ಯತೆ ಇದೆ
Published 24 ಏಪ್ರಿಲ್ 2026, 22:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಪರಿಶ್ರಮಕ್ಕೆ ತಕ್ಕ ಆದಾಯವಿಲ್ಲದೆ ಸೊರಗಿರುವ ನಿಮಗೆ ಹಲವಾರು ಕನಸುಗಳು ಈಡೇರುವ ಅವಕಾಶ ಅಪರಿಚಿತ ವ್ಯಕ್ತಿ ತೋರುವರು. ವಾತಾವರಣದ ಬದಲಾವಣೆಯು ಆರೋಗ್ಯದ ಮೇಲೆ ಪ್ರಭಾವ ಬೀರಲಿದೆ.
ವೃಷಭ
ಮನೆಯ ಪತ್ರ ಅಥವಾ ಕಂದಾಯ ಇಲಾಖೆಯ ವ್ಯವಹಾರದಲ್ಲಿ ಸಂಕಷ್ಟದ ಪರಿಸ್ಥಿತಿ ಎದುರಾಗಲಿದೆ. ಅಪರೂಪದ ವ್ಯಕ್ತಿಯೊಬ್ಬರನ್ನು ಭೇಟಿಯಾಗುವ ಸಂದರ್ಭ ಬರಲಿದೆ. ಸರ್ವತೋಮುಖ ಬೆಳವಣಿಗೆ ಕಾಣುವಿರಿ.
ಮಿಥುನ
ನಿಮ್ಮ ಭರವಸೆಯ ಮಾತುಗಳು ಸಹೋದ್ಯೋಗಿಯೊಬ್ಬರಿಗೆ ಆತ್ಮಸ್ಥೈರ್ಯ ತಂದುಕೊಡುವುದು. ಧಾರ್ಮಿಕ ಕೆಲಸ ಕಾರ್ಯಗಳನ್ನು ಮಾಡುವ ಅವಕಾಶ ಸಿಗುವುದು. ಸಂತಾನ ಅಪೇಕ್ಷಿಗಳಿಗೆ ಶುಭ ಸುದ್ದಿ.
ಕರ್ಕಾಟಕ
ರಾಜಕೀಯ ವರ್ಗದವರಿಗೆ ಜನಪ್ರಿಯತೆ ಹೆಚ್ಚುವುದರಿಂದ ಶತ್ರುಪೀಡೆಯಂತಹ ಸಮಸ್ಯೆ ಕಂಡುಬರಲಿದೆ. ಲೇಖನ ಮಾಲೆಯನ್ನು ಸಿದ್ಧಪಡಿಸುವ ನಿಮ್ಮ ಹಲವು ದಿನದ ಕನಸು ಈಡೇರಲಿದೆ. ಹಾಡುಗಾರರಿಗೆ ಜನಪ್ರಿಯತೆ ಹೆಚ್ಚುತ್ತದೆ.
ಸಿಂಹ
ಮಿತ್ರರಿಂದ ಮುಖ್ಯವಾದ ವ್ಯಕ್ತಿಯ ಪರಿಚಯ ಹಾಗೂ ಅಭಿವೃದ್ಧಿಯ ಮಾಹಿತಿ ಈ ದಿನ ದೊರಯುತ್ತದೆ. ಆಹಾರದಲ್ಲಿ ವಿಷದ ಅಂಶವು ಸೇರಿ ಆರೋಗ್ಯ ಹದಗೆಡುವ ಸಾಧ್ಯತೆಯಿದೆ.
ಕನ್ಯಾ
ಗಂಡ ಹೆಂಡತಿಯರ ಮಧ್ಯ ನಡೆಯುವ ವಾಗ್ಸಮರದಲ್ಲಿ ಮಧ್ಯಪ್ರವೇಶ ಮಾಡಿ ಸಮಸ್ಯೆಯನ್ನು ಬಿಗಡಾಯಿಸುವಿರಿ. ಕೌಟುಂಬಿಕ ಅಭಿವೃದ್ಧಿಯಂತಹ ವಿಷಯಗಳಿಂದ ಬಹಳ ಖುಷಿ ಸಿಗುವುದು. ಮಕ್ಕಳಿಂದ ಸುಖ ನೆಮ್ಮದಿ ದೊರೆಯಲಿದೆ.
ತುಲಾ
ಧೈರ್ಯ ಮತ್ತು ಪ್ರೇರಣಾ ಶಕ್ತಿಯ ಭಾವವನ್ನು ಹೊಂದುವುದರಿಂದ ಸಮಸ್ಯೆಯನ್ನು ಸುಲಭವಾಗಿ ಎದುರಿಸಬಹುದು. ಇತರ ಯೋಚನೆಗಳ ನಡುವೆ ಮಾಡುವ ಕೆಲಸದಲ್ಲಿ ಹೆಚ್ಚಿನ ಗಮನವಿಲ್ಲದಿದ್ದರೆ ದಂಡತೆತ್ತುವಂತಾಗಲಿದೆ.
ವೃಶ್ಚಿಕ
ಕುಟುಂಬಕ್ಕೆ ಸಂಬಂಧಪಟ್ಟ ಮಹತ್ವದ ವಿಷಯಗಳನ್ನು ಗಂಭೀರವಾಗಿ ಚಿಂತಿಸಿ ನಿರ್ಧರಿಸುವುದು ಉತ್ತಮ. ಬದಲಾವಣೆಯನ್ನು ಬಯಸಿದ ನಿಮಗೆ ಇದು ಹರ್ಷದ ಸಮಯವಾಗಿದೆ. ವ್ಯವಸಾಯಗಾರರಿಗೆ ಕೃಷಿ ಕೆಲಸ ಕಾರ್ಯಗಳು ಹೆಚ್ಚಲಿದೆ.
ಧನು
ನಿಮ್ಮ ಮಾರ್ಗದರ್ಶನ ಮತ್ತು ಸಲಹೆ ಸೂಚನೆಗಳಿಗಾಗಿ ಜನರು ಕಾಯುವುದನ್ನು ನೋಡಿ ಬಹಳ ಹೆಮ್ಮೆಪಟ್ಟುಕೊಳ್ಳುವಿರಿ. ಗುತ್ತಿಗೆ ಆಧಾರಿತ ಉತ್ತಮ ಉದ್ಯೋಗ ದೊರೆತು ಲಾಭ ಸಿಗಲಿದೆ. ದೈನಂದಿನ ಕೆಲಸದಲ್ಲಿ ಬದಲಾವಣೆ ಇರುವುದಿಲ್ಲ.
ಮಕರ
ಅಧ್ಯಯನದಲ್ಲಿ ಆಸಕ್ತಿ ಹೆಚ್ಚುವುದು ಹಾಗೂ ಅಧ್ಯಯನಶೀಲರಿಗೆ ಉತ್ತಮ ಜ್ಞಾನಾರ್ಜನೆ ಆಗುವುದು. ಜೀವನ ಸಂಗಾತಿಯ ಆಯ್ಕೆ ವಿಚಾರದಲ್ಲಿ ಹಿರಿಯರ ಮಾತಿನತ್ತ ಗಮನ ಕೊಡಿ. ಚಿತ್ರ ವಿತರಕರಿಗೆ ಹೆಚ್ಚಿನ ವರಮಾನದ ಸಾಧ್ಯತೆ ಇದೆ.
ಕುಂಭ
ಮಾನಸಿಕ ಒತ್ತಡದ ನಿವಾರಣೆಗೆ ಹಾಗೂ ಶತ್ರುನಿವಾರಣೆಗೆ ಕುಲ ದೇವರ ದರ್ಶನ ಉಪಕಾರಿಯಾಗುವುದು. ವಾಹನ ಬಿಡಿ ಭಾಗಗಳ ಮಾರಾಟಗಾರರಿಗೆ ಹೆಚ್ಚುಲಾಭ. ಹೈನುಗಾರಿಕೆಯನ್ನು ಉಪವೃತ್ತಿಯಾಗಿ ಮಾಡಿಕೊಳ್ಳಬಹುದು.
ಮೀನ
ತಿಳಿಯಾದ ಮನಸ್ಸಿನಿಂದ ಆಲೋಚಿಸಿ ಅಥವಾ ಅನುಭವಸ್ಥರ ಅಭಿಪ್ರಾಯ ತಿಳಿದು ಸೂಕ್ತ ನಿರ್ಧಾರ ಕೈಗೊಳ್ಳಿರಿ. ಮಕ್ಕಳ ವಿದ್ಯಾಭ್ಯಾಸವು ಉತ್ತಮವಾಗಿದ್ದು, ಕುಂಟುಂಬದಲ್ಲಿ ಸುಖ-ಶಾಂತಿ ತುಂಬಿರುತ್ತವೆ. ನೀಲಿ ಬಣ್ಣ ಶುಭವನ್ನು ತರುವುದು.
ADVERTISEMENT
ADVERTISEMENT